ಮಣಿಪುರದ ತೆಮಂಗ್ಲಾಂಗ್ ಜಿಲ್ಲೆಯ ರಾಣಿ ಗೈಡಿನ್ಲಿಯು ರೈಲು ನಿಲ್ದಾಣಕ್ಕೆ ಮೊದಲ ಸರಕು ಸಾಗಣೆ ರೈಲು ತಲುಪಿದ್ದು, ಇದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಮಣಿಪುರದ ಸಂಪರ್ಕ ಜಾಲವನ್ನು ಹೆಚ್ಚಿಸಲಾಗುವುದು ಹಾಗೂ ವಾಣಿಜ್ಯ ಚಟುವಟಿಕೆಯನ್ನು ವೃದ್ಧಿಸಲಾಗುವುದು ಎಂದು ಹೇಳಿದ್ದಾರೆ.
ಈಶಾನ್ಯ ವಲಯದ [ಡಿ.ಒ.ಎನ್.ಇ.ಆರ್] ಅಭಿವೃದ್ಧಿ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಮಂತ್ರಿ ಅವರು.
“ ಈಶಾನ್ಯ ವಲಯದಲ್ಲಿ ಪರಿವರ್ತನೆ ಮುಂದುವರಿಯುತ್ತದೆ.
ಮಣಿಪುರದಲ್ಲಿ ಸಂಪರ್ಕ ಹೆಚ್ಚಿಸಲಾಗುವುದು ಮತ್ತು ವಾಣಿಜ್ಯ ಚಟುವಟಿಕೆಗೆ ಪುಷ್ಟಿ ನೀಡಲಾಗುವುದು. ರಾಜ್ಯದ ಅದ್ಭುತ ಉತ್ಪನ್ನಗಳು ರಾಷ್ಟ್ರದಾದ್ಯಂತ ಸಂಚರಿಸಲಿವೆ.” ಎಂದು ಹೇಳಿದ್ದಾರೆ.


