ಪ್ರಧಾನಮಂತ್ರಿಯವರು ಸ್ನೇಹಭರಿತ ವಾತಾವರಣದಲ್ಲಿ ತೆರೆದ ಮನಸ್ಸಿನಿಂದ ಸಂವಾದದಲ್ಲಿ ತೊಡಗಿದರು
ಮಕ್ಕಳು ತಾವು ಎದುರಿಸುತ್ತಿರುವ ಸವಾಲುಗಳ ಕುರಿತು ಪ್ರಧಾನಮಂತ್ರಿಯವರಿಂದ ಮಾರ್ಗದರ್ಶನ ಪಡೆದರು
ಮಕ್ಕಳು ಮಾನಸಿಕ ಆರೋಗ್ಯ, ಸಂಶೋಧನೆ ಮತ್ತು ನಾವೀನ್ಯತೆ, ಆಧ್ಯಾತ್ಮಿಕತೆ, ಇತರವುಗಳನ್ನು ಒಳಗೊಂಡಂತೆ ಪ್ರಧಾನಮಂತ್ರಿಯವರ ಜೊತೆಗೆ ಹಲವಾರು ವಿಷಯಗಳನ್ನು ಚರ್ಚಿಸಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಜಾನೆ ತಮ್ಮ ನಿವಾಸ 7 ಲೋಕ ಕಲ್ಯಾಣ್ ಮಾರ್ಗದಲ್ಲಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ   ಪುರಸ್ಕೃತರೊಂದಿಗೆ ಸಂವಾದ ನಡೆಸಿದರು.

ಪ್ರಧಾನಮಂತ್ರಿಯವರು ಎಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ಸ್ಮರಣಿಕೆಗಳನ್ನು ನೀಡಿದರು ಮತ್ತು ಅವರ ಸಾಧನೆಗಳ ಬಗ್ಗೆ ಒಂದೊಂದಾಗಿ ಚರ್ಚಿಸಿದರು, ನಂತರ ಇಡೀ ಗುಂಪಿನೊಂದಿಗೆ ಸಂವಾದ ನಡೆಸಲಾಯಿತು. ಅವರು ಸ್ನೇಹಭರಿತ ವಾತಾವರಣದಲ್ಲಿ ತೆರೆದ ಮನಸ್ಸಿನಿಂದ ಸಂವಾದದಲ್ಲಿ ತೊಡಗಿದ್ದರು. ಮಕ್ಕಳು ತಮಗೆ ಎದುರಾಗುವ ಸವಾಲುಗಳ ಕುರಿತು ವಿವಿಧ ಪ್ರಶ್ನೆಗಳನ್ನು ಕೇಳಿದರು ಮತ್ತು ವಿವಿಧ ವಿಷಯಗಳ ಕುರಿತು ಪ್ರಧಾನಮಂತ್ರಿಯವರ ಮಾರ್ಗದರ್ಶನವನ್ನು ಪಡೆದರು.

ಸಣ್ಣ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಪ್ರಾರಂಭಿಸಿ, ಕ್ರಮೇಣ ಸಾಮರ್ಥ್ಯವನ್ನು ಬೆಳೆಸಿಕೊಳ್ಳಿ, ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ ಮತ್ತು ಜೀವನದಲ್ಲಿ ಮುಂದೆ ಸಾಗುವಾಗ ದೊಡ್ಡ ಸಮಸ್ಯೆಗಳನ್ನು ಪರಿಹರಿಸುವ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ ಎಂದು ಪ್ರಧಾನಮಂತ್ರಿಯವರು ಪ್ರಶಸ್ತಿ ಪುರಸ್ಕೃತರಿಗೆ ಸಲಹೆ ನೀಡಿದರು. ಮಾನಸಿಕ ಆರೋಗ್ಯ ಮತ್ತು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿದ ಅವರು, ಸಮಸ್ಯೆಯ ಸುತ್ತಲಿನ ಕಳಂಕವನ್ನು ನಿವಾರಿಸುವುದು ಮತ್ತು ಅಂತಹ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಕುಟುಂಬದ ಪ್ರಮುಖ ಪಾತ್ರದ ಬಗ್ಗೆ ಮಾತನಾಡಿದರು. ಚೆಸ್ ಆಡುವುದರಿಂದಾಗುವ ಪ್ರಯೋಜನಗಳು, ಕಲೆ ಮತ್ತು ಸಂಸ್ಕೃತಿಯನ್ನು ವೃತ್ತಿಯಾಗಿ ತೆಗೆದುಕೊಳ್ಳುವುದು, ಸಂಶೋಧನೆ ಮತ್ತು ನಾವೀನ್ಯತೆ, ಆಧ್ಯಾತ್ಮಿಕತೆ, ಇತರವುಗಳನ್ನು ಒಳಗೊಂಡಂತೆ ಹಲವಾರು ಇತರ ವಿಷಯಗಳನ್ನು ಸಂವಾದದಲ್ಲಿ ಪ್ರಧಾನಮಂತ್ರಿಯವರು  ಚರ್ಚಿಸಿದರು.

ಆವಿಷ್ಕಾರ , ಸಮಾಜ ಸೇವೆ, ಪಾಂಡಿತ್ಯ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಹಾಗು ಶೌರ್ಯ ಎಂಬ ಆರು ವಿಭಾಗಗಳಲ್ಲಿ ಅಸಾಧಾರಣ ಸಾಧನೆಗಾಗಿ ಭಾರತ ಸರ್ಕಾರವು ಮಕ್ಕಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ನೀಡುತ್ತಿದೆ. ಪ್ರತಿ ಪ್ರಶಸ್ತಿ ಪುರಸ್ಕೃತರಿಗೆ ಪದಕ, 1 ಲಕ್ಷ ರೂ. ನಗದು ಬಹುಮಾನ ಮತ್ತು ಪ್ರಶಸ್ತಿಪತ್ರವನ್ನು ನೀಡಲಾಗುತ್ತದೆ. ಈ ವರ್ಷ, ದೇಶದಾದ್ಯಂತ 11 ಮಕ್ಕಳನ್ನು ಬಾಲ ಶಕ್ತಿ ಪುರಸ್ಕಾರದ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ-2023ಕ್ಕೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರಲ್ಲಿ 6 ಹುಡುಗರು ಮತ್ತು 5 ಹುಡುಗಿಯರಿದ್ದು, 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದವರಾಗಿದ್ದಾರೆ. ಪುರಸ್ಕೃತರ ಹೆಸರು  : ಆದಿತ್ಯ ಸುರೇಶ್, ಎಂ. ಗೌರವಿ ರೆಡ್ಡಿ, ಶ್ರೇಯಾ ಭಟ್ಟಾಚಾರ್ಯ, ಸಂಭಾಬ್ ಮಿಶ್ರಾ, ರೋಹನ್ ರಾಮಚಂದ್ರ ಬಹಿರ್, ಆದಿತ್ಯ ಪ್ರತಾಪ್ ಸಿಂಗ್ ಚೌಹಾಣ್, ರಿಷಿ ಶಿವ ಪ್ರಸನ್ನ, ಅನೌಷ್ಕಾ ಜಾಲಿ, ಹನಯಾ ನಿಸಾರ್, ಕೊಳಗಟ್ಲ ಅಲನಾ ಮೀನಾಕ್ಷಿ ಮತ್ತು ಶೌರ್ಯಜಿತ್ ರಂಜಿತ್ಕುಮಾರ್ ಖೈರೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
The Bill to replace MGNREGS simultaneously furthers the cause of asset creation and providing a strong safety net

Media Coverage

The Bill to replace MGNREGS simultaneously furthers the cause of asset creation and providing a strong safety net
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 22 ಡಿಸೆಂಬರ್ 2025
December 22, 2025

Aatmanirbhar Triumphs: PM Modi's Initiatives Driving India's Global Ascent