ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಲ್ ಸ್ಟಮ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಶ್ರೀ ಮಾರ್ಟಿನ್ ಶ್ಯಾನ್ ಅವರೊಂದಿಗೆ ಸಂವಾದ ನಡೆಸಿದರು.
ಆಲ್ ಸ್ಟಮ್ ಈಗಾಗಲೇ ಭಾರತದಲ್ಲಿ ದೃಢ ಅಸ್ತಿತ್ವವನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ದೇಶದ ಬೆಳವಣಿಗೆಯ ಗಾಥೆಯಲ್ಲಿ ಕಂಪನಿಯ ನಂಬಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಶ್ರೀ ಮೋದಿ ಅವರು, ಭಾರತದಲ್ಲಿ ಉತ್ಪಾದನೆಗೆ ಮತ್ತು ವಿಶ್ವಕ್ಕಾಗಿ ತಯಾರಿಕೆಗೆ ಕಂಪೆನಿಯ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಅವಕಾಶ ಸಿಗಲಿವೆ ಎಂದು ಆಶಿಸಿರುವ ಪ್ರಧಾನಮಂತ್ರಿ ಶ್ರೀ ಮೋದಿ ಅವರು, ದೇಶದ ಯುವಜನರೊಂದಿಗೆ ಸಹಯೋಗಕ್ಕೆ ಜಗತ್ತಿಗೆ ಭಾರತ ಆಹ್ವಾನ ನೀಡುತ್ತದೆ ಎಂದು ಒತ್ತಿ ಹೇಳಿದ್ದಾರೆ.
ಪ್ರಧಾನಮಂತ್ರಿಯವರ ಎಕ್ಸ್ ಪೋಸ್ಟ್ ಹೀಗಿದೆ:
"ಆಲ್ ಸ್ಟಮ್ ಸಿಇಒ ಶ್ರೀ ಮಾರ್ಟಿನ್ ಶ್ಯಾನ್ ಅವರೊಂದಿಗೆ ಫಲಪ್ರದ ಸಂವಾದ ನಡೆಸಿದೆ. ಆಲ್ ಸ್ಟಮ್ ಈಗಾಗಲೇ ಭಾರತದಲ್ಲಿ ಬಲವಾದ ಅಸ್ತಿತ್ವವನ್ನು ಹೊಂದಿದೆ. ಭಾರತದ ಬೆಳವಣಿಗೆಯ ಗಾಥೆಯಲ್ಲಿ ಕಂಪೆನಿಯ ನಂಬಿಕೆ ಹಾಗೂ ಭಾರತದಲ್ಲಿ ತಯಾರಿಕೆ ಮತ್ತು ವಿಶ್ವಕ್ಕಾಗಿ ತಯಾರಿಕೆಯೆಡೆಗೆ ಅದರ ಪ್ರಯತ್ನಗಳು ಶ್ಲಾಘನೀಯ. ಹಾಗೆಯೇ, ಮುಂಬರುವ ದಿನಗಳಲ್ಲಿ ಅವಕಾಶಗಳು ಇನ್ನಷ್ಟು ಉತ್ತಮಗೊಳ್ಳಲಿವೆ.
ನಮ್ಮ ಯುವಜನರೊಂದಿಗೆ ಸಹಯೋಗಕ್ಕೆ ವಿಶ್ವಕ್ಕೆ ಭಾರತ ಆಹ್ವಾನ ನೀಡಿದೆ.
@Alstom”
Had a productive interaction with the CEO of Alstom, Mr. Martin Sion. Alstom already has a strong presence in India. Their belief in India’s growth story and their efforts towards making in India and making for the world are commendable. And, the opportunities are going to get… pic.twitter.com/2HgwzPgWAx
— Narendra Modi (@narendramodi) June 18, 2026


