ಜಪಾನ್ ನಲ್ಲಿ “ಝೆನ್’ ಎನ್ನುವುದು ಭಾರತದಲ್ಲಿ “ಧ್ಯಾನ”: ಪ್ರಧಾನಮಂತ್ರಿ
ಬಾಹ್ಯ ಸಾಧನೆ ಮತ್ತು ಅಭಿವೃದ್ಧಿಯ ಜೊತೆಗೆ ಆಂತರಿಕ ಶಾಂತಿ ಎರಡು ಸಂಸ್ಕೃತಿಗಳ ಹೆಗ್ಗರುತು: ಪ್ರಧಾನಮಂತ್ರಿ
ಕೇಂದ್ರ ಸರ್ಕಾರದ ಹಲವು ಇಲಾಖೆ, ಸಂಸ್ಥೆಗಳು ಮತ್ತು ಯೋಜನೆಗಳಲ್ಲಿ ಕೈಝೆನ್ ಬಳಕೆ: ಪ್ರಧಾನಮಂತ್ರಿ
ಗುಜರಾತ್ ನಲ್ಲಿ ಮಿನಿ-ಜಪಾನ್ ಸೃಷ್ಟಿಸುವ ತಮ್ಮ ಕನಸಿನ ವಿವರ ಹಂಚಿಕೊಂಡ ಪ್ರಧಾನಮಂತ್ರಿ
ಆಟೋಮೊಬೈಲ್ ನಿಂದ ಬ್ಯಾಂಕಿಂಗ್, ನಿರ್ಮಾಣ ಮತ್ತು ಫಾರ್ಮಾ ಸೇರಿ ಹಲವು ವಲಯಗಳಲ್ಲಿ 135ಕ್ಕೂ ಅಧಿಕ ಕಂಪನಿಗಳು ಜಪಾನ್ ಕಂಪನಿಗಳು ಗುಜರಾತ್ ನಲ್ಲಿ ನೆಲೆ: ಪ್ರಧಾನಮಂತ್ರಿ
ನಮಗೆ ಶತಮಾನಗಳಷ್ಟು ಹಳೆಯದಾದ ಸಾಂಸ್ಕೃತಿಕ ಸಂಬಂಧಗಳ ವಿಶ್ವಾಸವೂ ಇದೆ ಮತ್ತು ಭವಿಷ್ಯದ ಸಾಮಾನ್ಯ ದೂರದೃಷ್ಟಿಯೂ ಇದೆ: ಪ್ರಧಾನಮಂತ್ರಿ
ಪಿಎಂಒದಲ್ಲಿ ಜಪಾನ್ ಪ್ಲಸ್ ಗೆ ನಾವು ವಿಶೇಷ ವ್ಯವಸ್ಥೆ ಕಲ್ಪಿಸಿದ್ದೇವೆ: ಪ್ರಧಾನಮಂತ್ರಿ
ಸಾಂಕ್ರಾಮಿಕದ ಸಮಯದಲ್ಲಿ ಭಾರತ-ಜಪಾನ್ ಸ್ನೇಹಕ್ಕೆ ಜಾಗತಿಕ ಸ್ಥಿರತೆ ಮತ್ತು ಸಮೃದ್ಧಿಯಲ್ಲಿ ಮತ್ತಷ್ಟು ಮಹತ್ವ ಬಂದಿದೆ: ಪ್ರಧಾನಮಂತ್ರಿ
ಟೋಕಿಯೋ ಒಲಿಂಪಿಕ್ಸ್ ಗಾಗಿ ಜಪಾನ್ ಮತ್ತು ಜಪಾನ್ ಜನರಿಗೆ ಶುಭ ಕೋರಿದ ಪ್ರಧಾನಮಂತ್ರಿ

 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಅಹಮದಾಬಾದ್ ನ ಎಎಂಎ ನಲ್ಲಿನ ಝೆನ್ ಗಾರ್ಡನ್ ಮತ್ತು ಕೈಝೆನ್ ಅಕಾಡೆಮಿಯನ್ನು ಉದ್ಘಾಟಿಸಿದರು. 

ಝೆನ್ ಗಾರ್ಡನ್ ಮತ್ತು ಕೈಝೆನ್ ಅಕಾಡೆಮಿಯ ಸಮರ್ಪಣೆ ಭಾರತ –ಜಪಾನ್ ಸಂಬಂಧದ ಸರಳ ಮತ್ತು ಆಧುನಿಕತೆಯ ಸಂಕೇತವನ್ನು ಸೂಚಿಸುತ್ತದೆ ಎಂದು ಬಣ್ಣಿಸಿದ ಪ್ರಧಾನಮಂತ್ರಿ,  ಝೆನ್ ಗಾರ್ಡನ್ ಮತ್ತು ಕೈಝೆನ್ ಅಕಾಡೆಮಿಯ ಸ್ಥಾಪನೆಗೆ ಕೊಡುಗೆ ನೀಡಿದ ಹೈಗೋ ಪ್ರಿಫೆಕ್ಚರ್ ನಾಯಕರಿಗೆ ವಿಶೇಷವಾಗಿ ಗೌರ್ನರ್ ತೋಷಿಜೋಡಾಂಡ್ ಹೈಗೋ ಇಂಟರ್ ನ್ಯಾಷನಲ್ ಒಕ್ಕೂಟಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು. ಅಲ್ಲದೆ, ಭಾರತ-ಜಪಾನ್ ಸಂಬಂಧಗಳಿಗೆ ಹೊಸ ಶಕ್ತಿಯನ್ನು ನೀಡಿದ್ದಕ್ಕಾಗಿ ಗುಜರಾತ್ ನಲ್ಲಿನ ಭಾರತ-ಜಪಾನ್ ಮಿತ್ರ ಒಕ್ಕೂಟದ ಕಾರ್ಯವನ್ನು ಅವರು ಶ್ಲಾಘಿಸಿದರು. 

“ಝೆನ್’ ಮತ್ತು ಭಾರತೀಯ “ಧ್ಯಾನ’ದ ನಡುವಿನ ಸಮಾನ ಅಂಶಗಳನ್ನು ಬಿಡಿಸಿಟ್ಟ ಪ್ರಧಾನಮಂತ್ರಿ, ಇದು ಬಾಹ್ಯ ಸಾಧನೆ ಮತ್ತು ಅಭಿವೃದ್ಧಿಯ ಜೊತೆಗೆ ಆಂತರಿಕ ಶಾಂತಿಗೆ ಎರಡು ಸಂಸ್ಕೃತಿಗಳ ಒತ್ತು ನೀಡುವುದನ್ನು ಸೂಚಿಸುತ್ತದೆ ಎಂದರು. ಶತ ಶತಮಾನಗಳಿಂದಲೂ ನಾವು ಯೋಗದಲ್ಲಿ ಕಂಡುಕೊಂಡ ಅದೇ ಶಾಂತಿ, ಸಂಯಮ ಮತ್ತು ಸರಳತೆಯನ್ನು ಭಾರತೀಯರು ಝೆನ್ ಗಾರ್ಡನ್ ನಲ್ಲಿ ಕಂಡುಕೊಳ್ಳಲಿದ್ದಾರೆ.

ಬುದ್ಧ ಈ “ಧ್ಯಾನ’ದ ಮೂಲಕ ಜಗತ್ತಿಗೆ ಜ್ಞಾನೋದಯವನ್ನು ನೀಡಿದ್ದಾನೆ ಎಂದು ಪ್ರಧಾನಮಂತ್ರಿ ಹೇಳಿದರು. ಅಂತೆಯೇ ಪ್ರಧಾನಮಂತ್ರಿ ಅವರು ಕೈಝೆನ್ ನ ಬಾಹ್ಯ ಮತ್ತು ಆಂತರಿಕ ಅರ್ಥಗಳನ್ನು ತಿಳಿಸಿ, ಅವು ಕೇವಲ “ಸುಧಾರಣೆ’’ಗಲ್ಲ “ನಿರಂತರ ಸುಧಾರಣೆ’’ಗೆ ಒತ್ತು ನೀಡುತ್ತದೆ ಎಂದರು. 

ತಾವು ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ಆಡಳಿತದಲ್ಲಿ ಕೈಝೆನ್ ಅನ್ನು ಜಾರಿಗೊಳಿಸಿದ್ದೆ ಎಂದು ಪ್ರಧಾನಮಂತ್ರಿ ಸ್ಮರಿಸಿದರು. 2004ರಲ್ಲಿ ಗುಜರಾತ್ ನ ಆಡಳಿತ ತರಬೇತಿಯನ್ನು ಅದನ್ನು ಪರಿಚಯಿಸಲಾಯಿತು ಮತ್ತು 2005ರಲ್ಲಿ ಹಿರಿಯ ನಾಗರಿಕ ಸೇವಾ ಅಧಿಕಾರಿಗಳಿಗಾಗಿ ವಿಶೇಷ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ಪ್ರಕ್ರಿಯೆಗಳ ಸುಧಾರಣೆಯನ್ನು “ನಿರಂತರ ಸುಧಾರಣೆ’’ ಪ್ರತಿಫಲಿಸಿತು ಮತ್ತು ಆಡಳಿತದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿತು. ರಾಷ್ಟ್ರದ ಪ್ರಗತಿಯಲ್ಲಿ ಆಡಳಿತದ ಪ್ರಾಮುಖ್ಯವನ್ನು ಮುಂದುವರಿಸುತ್ತಾ ಪ್ರಧಾನಮಂತ್ರಿಯಾದ ನಂತರ ಅವರು, ಗುಜರಾತ್ ನಲ್ಲಿನ ಕೈಝೆನ್ ಸಂಬಂಧಿಸಿದ ಅನುಭವವನ್ನು ಪಿಎಂಒ ಮತ್ತು ಇತರೆ ಕೇಂದ್ರ ಸರ್ಕಾರಿ ಇಲಾಖೆಗಳಿಗೆ ತಂದು ಪರಿಚಯಿಸಿದರು. ಇದರಿಂದಾಗಿ ಪ್ರಕ್ರಿಯೆಗಳ ಸರಳೀಕರಣ ಮತ್ತು ಕಚೇರಿ ಸ್ಥಳವನ್ನು ಉತ್ತಮಗೊಳಿಸಿ ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ಕಾರಣವಾಯಿತು. ಕೈಝೆನ್ ಅನ್ನು ಕೇಂದ್ರದ ಸರ್ಕಾರದ ಹಲವು ಇಲಾಖೆಗಳು, ಸಂಸ್ಥೆಗಳು ಮತ್ತು ಯೋಜನೆಗಳಲ್ಲಿ ಬಳಕೆ ಮಾಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. 

ಪ್ರಧಾನಮಂತ್ರಿ ಅವರು ಜಪಾನ್ ನೊಂದಿಗಿನ ತಮ್ಮ ವೈಯಕ್ತಿಕ ಸಂಪರ್ಕವನ್ನು ಒತ್ತಿ ಹೇಳಿದರು ಹಾಗೂ ಜಪಾನ್ ಜನರ ವಾತ್ಸಲ್ಯ, ಅವರ ಕೆಲಸದ ಪ್ರೀತಿ, ಕೌಶಲ್ಯ ಮತ್ತು ಶಿಸ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.  “ನಾನು ಗುಜರಾತ್ ನಲ್ಲಿ ಮಿನಿ-ಜಪಾನ್ ಸೃಷ್ಟಿಸಲು ಬಯಸಿದ್ದೇನೆ’’ಎಂದು ಸಮರ್ಥಿಸಿಕೊಂಡ ಅವರು, ಇಲ್ಲಿಗೆ ಭೇಟಿ ನೀಡುವ ಜಪಾನ್ ಜನರನ್ನು ಭೇಟಿ ಮಾಡುವ ಆಕಾಂಕ್ಷೆ ಆವರಿಸಿದೆ ಎಂದರು. 

ಜಪಾನ್ ಹಲವು ವರ್ಷಗಳಲ್ಲಿ “ವೈಬ್ರೆಂಟ್ ಗುಜರಾತ್ ಶೃಂಗಸಭೆ’’ಯಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡಿದೆ ಎಂದು ಪ್ರಧಾನಮಂತ್ರಿ ಮಾತನಾಡಿದರು. ಅವರು, ಆಟೋಮೊಬೈಲ್ ನಿಂದ , ಬ್ಯಾಂಕಿಂಗ್ ನಿಂದ ನಿರ್ಮಾಣದವರೆಗೆ ಮತ್ತು ಫಾರ್ಮಾ ಸೇರಿ ಹಲವು ವಲಯಗಳಲ್ಲಿ 135ಕ್ಕೂ ಅಧಿಕ ಜಪಾನ್ ಕಂಪನಿಗಳು  ಗುಜರಾತ್ ಅನ್ನು ತಮ್ಮ ಮೂಲ ನೆಲೆಯನ್ನಾಗಿ ಮಾಡಿಕೊಂಡಿವೆ ಎಂದರು. ಸುಜುಕಿ ಮೋಟಾರ್ಸ್, ಹೋಂಡಾ ಮೋಟಾರ್ ಸೈಕಲ್, ಮಿಟ್ಸುಬಿಷಿ, ಟೊಯೋಟಾ, ಹಿಟಾಚಿ ಮತ್ತಿತರ ಕಂಪನಿಗಳು ಗುಜರಾತ್ ನ ಉತ್ಪಾದನಾ ವಲಯದಲ್ಲಿ ತೊಡಗಿವೆ. ಅವು ಸ್ಥಳೀಯ ಯುವಜನಾಂಗದ ಕೌಶಲ್ಯಾಭಿವೃದ್ಧಿಗೆ ಕೊಡುಗೆ ನೀಡುತ್ತಿವೆ. ಗುಜರಾತ್ ನಲ್ಲಿ ಮೂರು ಜಪಾನ್-ಭಾರತ ಉತ್ಪಾದನಾ ಕೇಂದ್ರಗಳು ತಾಂತ್ರಿಕ ವಿಶ್ವವಿದ್ಯಾಲಯಗಳು ಮತ್ತು ಐಐಟಿಗಳ ಸಹಭಾಗಿತ್ವದಲ್ಲಿ ನೂರಾರು ಯುವಕರಿಗೆ ಕೌಶಲ್ಯ ತರಬೇತಿಯನ್ನು ನೀಡುತ್ತಿವೆ. ಅಲ್ಲದೆ, ಜೆಟ್ರೋದ ಅಹಮದಾಬಾದ್ ಬಿಸಿನೆಸ್ ಸಪೋರ್ಟ್ ಸೆಂಟರ್ ಏಕಕಾಲದಲ್ಲಿ ಐದು ಕಂಪನಿಗಳಿಗೆ ಪ್ಲಗ್ ಮತ್ತು ಪ್ಲೇ ವರ್ಕ್ ಸ್ಪೇಸ್ ಸೌಕರ್ಯವನ್ನು ಒದಗಿಸುತ್ತದೆ. ಇದರಿಂದಾಗಿ ಜಪಾನಿನ ಹಲವು ಕಂಪನಿಗಳಿಗೆ ಪ್ರಯೋಜನವಾಗುತ್ತಿದೆ.

ಅನೌಪಚಾರಿಕ ಸಮಾಲೋಚನೆ ವೇಳೆ, ಜಪಾನಿನ ಜನರು ಗಾಲ್ಫ್ ಅನ್ನು ಪ್ರೀತಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಂಡೆ, ಹಾಗಾಗಿ ತಾವು ಗುಜರಾತ್ ನಲ್ಲಿ ಗಾಲ್ಫ್ ಸೌಕರ್ಯಗಳನ್ನು ಸುಧಾರಿಸಲು ವಿಶೇಷ ಪ್ರಯತ್ನ ನಡೆಸಿದೆ ಎಂದು ಆಸಕ್ತಿಕರ ಸಂಗತಿ ಸ್ಮರಿಸಿದ ಅವರು ಸಣ್ಣ ವಿವರಗಳಿಗೂ ಗಮನಹರಿಸುವುದನ್ನು ಪ್ರದರ್ಶಿಸಿದರು. ಆ ಸಮಯದಲ್ಲಿ, ಗುಜರಾತ್ ನಲ್ಲಿ ಗಾಲ್ಫ್ ಕೋರ್ಸ್ ಗಳು ಸಾಮಾನ್ಯವಾಗಿರಲಿಲ್ಲ. ಆದರೆ ಇಂದು ಗುಜರಾತ್ ನಲ್ಲಿ ಹಲವು ಗಾಲ್ಫ್ ಕೋರ್ಸ್ ಗಳಿವೆ, ಅಂತೆಯೇ ಗುಜರಾತ್ ನಲ್ಲಿ ಜಪಾನಿ ರೆಸ್ಟೋರೆಂಟ್ ಗಳು ಮತ್ತು ಜಪಾನಿ ಭಾಷೆ ಹರಡಿಕೊಂಡಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಜಪಾನ್ ನ ಶಾಲಾ ವ್ಯವಸ್ಥೆಯನ್ನು ಆಧರಿಸಿ ಗುಜರಾತ್ ನಲ್ಲಿ ಮಾದರಿ ಶಾಲೆಗಳನ್ನು ಸೃಷ್ಟಿಸುವ ಬಯಕೆಯನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದರು. ಜಪಾನ್ ನ ಶಾಲಾ ವ್ಯವಸ್ಥೆಯಲ್ಲಿ ಆಧುನಿಕತೆ ಮತ್ತು ನೈತಿಕ ಮೌಲ್ಯಗಳ ಮಿಶ್ರಣದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಟೋಕಿಯೋದ ತೈಮೈ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ದನ್ನು ಹೆಮ್ಮೆಯಿಂದ ಸ್ಮರಿಸಿದರು.

ಜಪಾನ್ ನೊಂದಿಗೆ ಶತಮಾನಗಳಷ್ಟು ಹಳೆಯದಾದ ಸಾಂಸ್ಕೃತಿಕ ಸಂಬಂಧಗಳ ವಿಶ್ವಾಸವನ್ನು ಮತ್ತು ಭವಿಷ್ಯದ ಬಗ್ಗೆ ಸಮಾನ ದೂರದೃಷ್ಟಿಯನ್ನು ಹೊಂದಲಾಗಿದೆ ಎಂದು ಶ್ರೀ ನರೇಂದ್ರ ಮೋದಿ ಬಲವಾಗಿ ಪ್ರತಿಪಾದಿಸಿದರು. ಜಪಾನ್ ನೊಂದಿಗೆ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವವನ್ನು ಬಲಪಡಿಸುವತ್ತ  ಅವರು ಗಮನ ಸೆಳೆದರು. ಅಲ್ಲದೆ, ಪಿಎಂಒದಲ್ಲಿನ ಜಪಾನ್ ಪ್ಲಸ್ ಕಾರ್ಯತಂತ್ರದ ಕುರಿತು ಮಾತನಾಡಿದರು. 

ಜಪಾನ್ ನಾಯಕತ್ವದೊಂದಿಗಿನ ತಮ್ಮ ವೈಯಕ್ತಿಕ ಸಮೀಕರಣದ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು ಜಪಾನ್ ನ ಮಾಜಿ ಪ್ರಧಾನಮಂತ್ರಿ ಶಿಂಜೋ ಅಬೆ ಅವರು ಗುಜರಾತ್ ಗೆ ಭೇಟಿ ನೀಡಿದ್ದನ್ನು ಸ್ಮರಿಸಿದರು. ಅವರ ಭೇಟಿ ಭಾರತ ಜಪಾನ್ ಸಂಬಂಧಕ್ಕೆ ಹೊಸ ಆಯಾಮ ನೀಡಿತು. ಈ ಸಾಂಕ್ರಾಮಿಕದ ಸಮಯದಲ್ಲಿ ಭಾರತ-ಜಪಾನ್ ಸ್ನೇಹ, ಹಾಲಿ ಜಪಾನ್ ಪ್ರಧಾನಿ ಯೋಶಿಹೈಡ್ ಸುಗಥಾತ್ ಅವರೊಂದಿಗಿನ ಸಾಮಾನ್ಯ ವಿಶ್ವಾಸದಿಂದಾಗಿ ಜಾಗತಿಕ ಸ್ಥಿರತೆ ಮತ್ತು ಸಂಮೃದ್ಧಿಗೆ ಮತ್ತಷ್ಟು ಮಹತ್ವ ಬಂದಿದೆ ಎಂದರು.  ಸದ್ಯದ ಸವಾಲುಗಳು ನಮ್ಮ ಸ್ನೇಹ ಮತ್ತು ಪಾಲುದಾರಿಕೆ ಇನ್ನಷ್ಟು ಆಳವಾಗಬೇಕೆಂದು ಒತ್ತಾಯಿಸುತ್ತದೆಂದು ಪ್ರಧಾನಮಂತ್ರಿ ಹೇಳಿದರು.

ಭಾರತದಲ್ಲಿ ಜಪಾನಿ ಮತ್ತು ಕೈಝೆನ್ ಕೆಲಸದ ಸಂಸ್ಕೃತಿಯನ್ನು ಇನ್ನಷ್ಟು ಹರಡಬೇಕೆಂದು ಕರೆ ನೀಡಿದ ಶ್ರೀ ನರೇಂದ್ರ ಮೋದಿ, ಭಾರತ ಮತ್ತು ಜಪಾನ್ ನಡುವಿನ ವ್ಯವಹಾರದ ಪರಸ್ಪರ ಕ್ರಿಯೆಯ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗಿದೆ ಎಂದರು.

ಟೋಕಿಯೋ ಒಲಿಂಪಿಕ್ಸ್ ಗಾಗಿ ಜಪಾನ್ ಮತ್ತು ಜಪಾನ್ ಜನರಿಗೆ ಶ್ರೀ ನರೇಂದ್ರ ಮೋದಿ ಶುಭಾಶಯಗಳನ್ನು ಕೋರಿದರು.

Click here to read full text speech

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Somnath Swabhiman Parv: “Feeling blessed to be in Somnath, a proud symbol of our civilisational courage,” says PM Modi

Media Coverage

Somnath Swabhiman Parv: “Feeling blessed to be in Somnath, a proud symbol of our civilisational courage,” says PM Modi
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 11 ಜನವರಿ 2026
January 11, 2026

Dharma-Driven Development: Celebrating PM Modi's Legacy in Tradition and Transformation