ಕಕ್ಷಾ ಉಡಾವಣಾ ವಾಹಕ ವಿಕ್ರಮ್ -1ರ ಉಡಾವಣೆ ವೀಕ್ಷಿಸುವಂತೆ ನಾಗರಿಕರಿಗೆ ಪ್ರಧಾನಮಂತ್ರಿ ಆಹ್ವಾನ

ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿರುವ ಉಡಾವಣಾ ವಾಹಕವಾದ ವಿಕ್ರಮ್ -1ರ ಚೊಚ್ಚಲ ಕಕ್ಷಾ ಉಡಾವಣೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸ್ಕೈರೂಟ್ ಏರೋಸ್ಪೇಸ್‌ ಗೆ ಶುಭ ಹಾರೈಸಿದ್ದಾರೆ. ಇದು ದೇಶದ ಬಾಹ್ಯಾಕಾಶ ಪಯಣದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲು ಎಂದು ಅವರು ಬಣ್ಣಿಸಿದ್ದಾರೆ.

ವಿಕ್ರಮ್ -1 ರ ಉಡಾವಣೆಯು ಭಾರತದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳಿಗೆ ಹೊಸ ಅವಕಾಶಗಳನ್ನು ತೆರೆಯಲಿದೆ ಹಾಗೂ ನಾವೀನ್ಯತೆ, ತಂತ್ರಜ್ಞಾನ ಮತ್ತು ಉದ್ಯಮಶೀಲತೆಯಲ್ಲಿ ದೇಶದ ವರ್ಧಿಸುತ್ತಿರುವ ಸಾಮರ್ಥ್ಯದ ಪ್ರತಿಬಿಂಬವಾಗಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಈ ಮಹತ್ವದ ಉಡಾವಣೆ ವೀಕ್ಷಿಸುವಂತೆ ನಾಗರಿಕರಿಗೆ, ವಿಶೇಷವಾಗಿ ಯುವಜನರಿಗೆ ಪ್ರಧಾನಮಂತ್ರಿ ಕರೆ ನೀಡಿದ್ದಾರೆ.

ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

ಭಾರತದ ಬಾಹ್ಯಾಕಾಶ ಪಯಣಕ್ಕೆ ಒಂದು ಐತಿಹಾಸಿಕ ಹೊಸ ವಿಸ್ತಾರ!

ಸ್ಕೈರೂಟ್ ಏರೋಸ್ಪೇಸ್ ಇಂದು ಬೆಳಗ್ಗೆ 11:30 ಕ್ಕೆ, ಭಾರತದ ಮೊದಲ ಖಾಸಗಿ ನಿರ್ಮಿತ ಉಡಾವಣಾ ವಾಹಕವಾದ ವಿಕ್ರಮ್ -1 ರ ಚೊಚ್ಚಲ ಕಕ್ಷಾ ಉಡಾವಣೆಯನ್ನು ಕೈಗೊಳ್ಳಲಿದೆ.

ಈ ನಾಲ್ಕು ಹಂತದ ರಾಕೆಟ್ ಅನ್ನು ತ್ವರಿತ ಮತ್ತು ಬೇಡಿಕೆ ಮೇರೆಗೆಯ ಉಡಾವಣಾ ಸೇವೆಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಈ ಮಿಷನ್ ನಮ್ಮ ಯುವಜನರ ಪ್ರತಿಭೆ, ಬದ್ಧತೆ ಮತ್ತು ಉದ್ಯಮಶೀಲತಾ ಚೈತನ್ಯವನ್ನು ಪ್ರದರ್ಶಿಸಿದೆ. ನಾವೀನ್ಯತೆ ಮತ್ತು ಉದ್ಯಮಶೀಲತೆಗೆ ನಮ್ಮ ಬಾಹ್ಯಾಕಾಶ ವಲಯದ ಸುಧಾರಣೆಗಳು ಹೇಗೆ ಹೊಸ ಅವಕಾಶಗಳನ್ನು ತೆರೆಯುತ್ತಿವೆ ಎಂಬುದನ್ನು ಸಹ ಇದು ಪ್ರದರ್ಶಿಸಿದೆ.

ಸ್ಕೈರೂಟ್ ಏರೋಸ್ಪೇಸ್ ನ ಇಡೀ ತಂಡಕ್ಕೆ ಯಶಸ್ವಿ ಉಡಾವಣೆಗಾಗಿ ನನ್ನ ಶುಭ ಹಾರೈಕೆಗಳು. ವಿಕ್ರಮ್-1 ಎತ್ತರಕ್ಕೆ ಚಿಮ್ಮಿ, ಇತಿಹಾಸ ನಿರ್ಮಿಸಲಿ ಮತ್ತು ಹೊಸ ಪೀಳಿಗೆಗೆ ಸ್ಫೂರ್ತಿ ನೀಡಲಿ.

ಎಲ್ಲಾ ಭಾರತೀಯರು, ವಿಶೇಷವಾಗಿ ನನ್ನ ಯುವ ಸ್ನೇಹಿತರು, ಈ ಐತಿಹಾಸಿಕ ಉಡಾವಣೆ ನಡೆದು ಬಂದ‌ ಹಾದಿ ಮತ್ತು ಉಡಾವಣೆ ವೀಕ್ಷಿಸುವಂತೆ ಹಾಗೂ #IndiaWithVikram1 ಹ್ಯಾಷ್ ಟ್ಯಾಗ್ ಮೂಲಕ ಸ್ಕೈರೂಟ್ ತಂಡಕ್ಕೆ ಶುಭ ಹಾರೈಸುವಂತೆ ನಾನು ಮನವಿ ಮಾಡುತ್ತೇನೆ.‌

@SkyrootA

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Move from endless war to end of war': PM Modi to Russian President Putin

Media Coverage

Move from endless war to end of war': PM Modi to Russian President Putin
NM on the go

Nm on the go

Always be the first to hear from the PM. Get the App Now!
...
Prime Minister congratulates the nation on achieving 7.8% GDP growth; highlights surging economic confidence
September 01, 2026

Prime Minister Shri Narendra Modi today congratulated the nation on achieving a Gross Domestic Product (GDP) growth rate of 7.8% in the first quarter of the financial year. Sharing a video message, the Prime Minister highlighted the strong economic numbers, emphasizing that these figures reflect a surging economic confidence.

In a post on X, the Prime Minister shared:

"7.8% growth.

Strong numbers.

Even stronger confidence."