ಪ್ರಧಾನಮಂತ್ರಿ ಅವರು ದೇಶೀಯವಾಗಿ ವಿನ್ಯಾಸಗೊಳಿಸಲಾದ ಐಎನ್ಎಸ್ ವಿಶಾಖಪಟ್ಟಣಂ ಕಾರ್ಯಾರಂಭ ಮಾಡಿರುವುದರಿಂದ ಇಂದು ಹೆಮ್ಮೆಯ ದಿನವಾಗಿದೆ ಎಂದು ಹೇಳಿದರು. ಪೂರ್ಣಶಕ್ತಿಯೊಂದಿಗೆ ರಕ್ಷಣಾ ಪಡೆಗಳ ಆಧುನೀಕರಣ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿಯಲಿವೆ ಎಂದು ಪ್ರಧಾನಮಂತ್ರಿ ಪುನರುಚ್ಛರಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ, “ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆ ಸಾಧಿಸುವ ಭಾರತದ ಅನ್ವೇಷಣೆಗೆ ಇಂದು ಹೆಮ್ಮೆಯ ದಿನವಾಗಿದೆ. ಐಎನ್ಎಸ್ ವಿಶಾಖಪಟ್ಟಣಂ ಇಂದು ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದೆ. ಇದು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ನಮ್ಮ ಭದ್ರತೆಯ ಸ್ಥಿತಿ ಬಲವರ್ಧನೆಗೊಳಿಸಲಿದೆ. ರಕ್ಷಣಾ ಪಡೆಗಳ ಆಧುನೀಕರಣ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಂಪೂರ್ಣ ಶಕ್ತಿಯೊಂದಿಗೆ ಮುಂದುವರಿಯಲಿದೆ.” ಎಂದು ಹೇಳಿದ್ದಾರೆ.
Today is a proud day for India’s quest to become Aatmanirbhar in the defence sector. INS Visakhapatnam is commissioned into Indian Navy! It is indigenously developed and will strengthen our security apparatus. Our efforts towards defence modernisation continues with full vigour. pic.twitter.com/LwVIX3ufzq
— Narendra Modi (@narendramodi) November 21, 2021


