ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾಮನ್ ವೆಲ್ತ್ ಕ್ರೀಡಾಕೂಟದ ಪುರುಷರ ಹೇವಿವೇಟ್ ಪ್ಯಾರಾ ಪವರ್ ಲಿಫ್ಟಿಂಗ್ ನಲ್ಲಿ ಚಿನ್ನದ ಪದಕ ಗೆದ್ದ ಸುಧೀರ್ ಅವರನ್ನು ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ “ಸುಧೀರ್ ಅವರಿಂದ ಸಿಡಬ್ಲೂಜಿ 2022 ಪ್ಯಾರಾ-ಕ್ರೀಡೆಯ ಪದಕ ಎಣಿಕೆಗೆ ಉತ್ತಮ ಆರಂಭವಾಗಿದೆ! ಅವರು ಪ್ರತಿಷ್ಠಿತ ಚಿನ್ನದ ಪದಕವನ್ನು ಜಯಿಸಿದ್ದಾರೆ ಮತ್ತು ಮತ್ತೊಮ್ಮೆ ತಮ್ಮ ಸಮರ್ಪಣೆ ಮತ್ತು ದೃಢತೆ ಪ್ರದರ್ಶಿಸಿದ್ದಾರೆ. ಅವರು ಮೈದಾನದಲ್ಲಿ ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮುಂಬರುವ ಅವರ ಎಲ್ಲಾ ಪ್ರಯತ್ನಗಳಿಗೆ ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು’’.
A great start to the CWG 2022 para-sports medal count by Sudhir! He wins a prestigious Gold and shows yet again his dedication and determination. He has been consistently performing well on the field. Congratulations and best wishes to him for all upcoming endeavours. pic.twitter.com/6V2mXZsEma
— Narendra Modi (@narendramodi) August 5, 2022


