ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೇಪಾಳದಲ್ಲಿ ಯಶಸ್ವಿಯಾಗಿ ಹಾಗೂ ಶಾಂತಿಯುತವಾಗಿ ನಡೆದ ಚುನಾವಣೆಯ ಹಿನ್ನೆಲೆಯಲ್ಲಿ ಅಲ್ಲಿನ ನಾಗರಿಕರಿಗೆ ಮತ್ತು ನೇಪಾಳ ಸರ್ಕಾರಕ್ಕೆ ಅಭಿನಂದನೆ ತಿಳಿಸಿದ್ದಾರೆ.
ನೇಪಾಳದ ಜನರು ಅಪಾರ ಉತ್ಸಾಹದೊಂದಿಗೆ ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಬಳಸುತ್ತಿರುವುದನ್ನು ನೋಡಲು ಸಂತೋಷವಾಗುತ್ತಿದೆ. ಈ ಯಶಸ್ವಿ ಚುನಾವಣೆ ಐತಿಹಾಸಿಕ ಮೈಲುಗಲ್ಲು ಹಾಗೂ ನೇಪಾಳದ ಪ್ರಜಾಸತ್ತಾತ್ಮಕ ಪಯಣದಲ್ಲಿ ಹೆಮ್ಮೆಯ ಕ್ಷಣವೆಂದು ಪ್ರಧಾನ ಮಂತ್ರಿ ಶ್ರೀ ಮೋದಿ ವರ್ಣಿಸಿದ್ದಾರೆ.
ನಮ್ಮ ನೆರೆಯ ಸ್ನೇಹ ರಾಷ್ಟ್ರವಾಗಿರುವ ನೇಪಾಳದ ಜನರು ಹಾಗೂ ಅಲ್ಲಿನ ನೂತನ ಸರ್ಕಾರದೊಂದಿಗೆ ಸೇರಿ ಶಾಂತಿ, ಪ್ರಗತಿ ಮತ್ತು ಸಮೃದ್ಧಿಯ ಹೊಸ ಎತ್ತರಗಳನ್ನು ಸಾಧಿಸಲು ಭಾರತ ಸರ್ಕಾರ ತನ್ನ ಬದ್ಧತೆಯನ್ನು ಮುಂದುವರಿಸುತ್ತದೆ ಎಂದು ಶ್ರೀ ಮೋದಿ ತಿಳಿಸಿದ್ದಾರೆ.
ಪ್ರಧಾನ ಮಂತ್ರಿಗಳು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:
“ನೇಪಾಳದಲ್ಲಿ ಯಶಸ್ವಿಯಾಗಿ ಮತ್ತು ಶಾಂತಿಯುತವಾಗಿ ನಡೆದ ಚುನಾವಣೆಯ ಹಿನ್ನೆಲೆಯಲ್ಲಿ ಅಲ್ಲಿನ ಜನರು ಮತ್ತು ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನನ್ನ ನೇಪಾಳಿ ಸಹೋದರ- ಸಹೋದರಿಯರು ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಉತ್ಸಾಹಭರಿತವಾಗಿ ಬಳಸುತ್ತಿರುವುದನ್ನು ನೋಡುವುದು ಸಂತೋಷಕರವಾಗಿದೆ.
ಈ ಐತಿಹಾಸಿಕ ಮೈಲುಗಲ್ಲು ನೇಪಾಳದ ಪ್ರಜಾಸತ್ತಾತ್ಮಕ ಪಯಣದಲ್ಲಿ ಹೆಮ್ಮೆಯ ಕ್ಷಣವಾಗಿದೆ.
ಹತ್ತಿರದ ನೆರೆಹೊರೆಯ ರಾಷ್ಟ್ರವಾಗಿರುವ ಭಾರತವು ನೇಪಾಳದ ಜನರು ಮತ್ತು ಅವರ ನೂತನ ಸರ್ಕಾರದೊಂದಿಗೆ ಸೇರಿ ಶಾಂತಿ, ಪ್ರಗತಿ ಮತ್ತು ಸಮೃದ್ಧಿಯ ಹೊಸ ಎತ್ತರಗಳನ್ನು ತಲುಪಲು ತನ್ನ ಬದ್ಧತೆಯನ್ನು ದೃಢವಾಗಿ ಮುಂದುವರಿಸುತ್ತದೆ.”
I warmly congratulate the people and Government of Nepal on the successful and peaceful conduct of elections. It is heartening to see my Nepali sisters and brothers exercise their democratic rights so vibrantly.
— Narendra Modi (@narendramodi) March 7, 2026
This historic milestone is a proud moment in Nepal’s democratic…
सफलतापूर्वक र शान्तिपूर्ण रूपमा निर्वाचन सम्पन्न भएकोमा म नेपालका जनता र सरकारलाई हार्दिक बधाई दिन चाहन्छु। मेरा नेपाली दिदीबहिनी तथा दाजुभाइहरूले आफ्नो लोकतान्त्रिक अधिकार यति जीवन्त रूपमा प्रयोग गरेको देख्न पाउँदा अत्यन्तै खुशी लागेको छ।
— Narendra Modi (@narendramodi) March 7, 2026
यो ऐतिहासिक उपलब्धि नेपालको…


