ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಯುಎನ್ ಮಿಲಿಟರಿ ಜೆಂಡರ್ ಅಡ್ವೊಕೇಟ್ ಆಫ್ ದ ಇಯರ್’ ಪ್ರಶಸ್ತಿಗೆ ಭಾಜನರಾಗಿರುವ ಮೇಜರ್ ಅಭಿಲಾಷಾ ಬರಾಕ್ ಅವರನ್ನು ಇಂದು ಅಭಿನಂದಿಸಿದ್ದಾರೆ. ಮೇಜರ್ ಬರಾಕ್ ಅವರು ಲೆಬನಾನ್‌ ನ ವಿಶ್ವಸಂಸ್ಥೆ ಮಧ್ಯಂತರ ಪಡೆ (ಯು ಎನ್ ಐ ಎಫ್ ಐ ಎಲ್) ನಲ್ಲಿ ಎಂಗೇಜ್‌ ಮೆಂಟ್ ಟೀಮ್ ಕಮಾಂಡರ್ ಮತ್ತು ಜೆಂಡರ್ ಫೋಕಲ್ ಪಾಯಿಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಗಮನಿಸಿದರು.

ಈ ಗೌರವವು ಅವರ ಅನುಕರಣೀಯ ಸೇವೆಗೆ ಮನ್ನಣೆಯಾಗಿದೆ ಮತ್ತು ವಿಶ್ವಸಂಸ್ಥೆಯ ಶಾಂತಿಪಾಲನಾ ಪ್ರಯತ್ನಗಳಿಗೆ ಭಾರತದ ದೀರ್ಘಕಾಲದ ಕೊಡುಗೆಯಾಗಿದೆ ಎಂದು ಶ್ರೀ ಮೋದಿಯವರು ಹೇಳಿದ್ದಾರೆ.

ಅವರ ಸಾಧನೆಯು ದೇಶ ಮತ್ತು ಮಾನವೀಯತೆಗೆ ಸೇವೆ ಸಲ್ಲಿಸಲು ಆಶಿಸುವ ಅಸಂಖ್ಯಾತ ಯುವ ಭಾರತೀಯರಿಗೆ, ವಿಶೇಷವಾಗಿ ದೇಶದ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.

ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ : 

"ಯುಎನ್ ಮಿಲಿಟರಿ ಜೆಂಡರ್ ಅಡ್ವೊಕೇಟ್ ಆಫ್ ದಿ ಇಯರ್ ಪ್ರಶಸ್ತಿಗೆ ಭಾಜನರಾಗಿರುವ ಮೇಜರ್ ಅಭಿಲಾಷಾ ಬರಾಕ್ ಅವರಿಗೆ ಅಭಿನಂದನೆಗಳು. ಮೇಜರ್ ಬರಾಕ್ ಅವರು ಲೆಬನಾನ್‌ ನ ವಿಶ್ವಸಂಸ್ಥೆ ಮಧ್ಯಂತರ ಪಡೆ (ಯುನಿಫಿಲ್) ನಲ್ಲಿ ಎಂಗೇಜ್‌ಮೆಂಟ್ ಟೀಮ್ ಕಮಾಂಡರ್ ಮತ್ತು ಜೆಂಡರ್ ಫೋಕಲ್ ಪಾಯಿಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಗೌರವವು ಅವರ ಅನನ್ಯ ಸೇವೆ ಮತ್ತು ವಿಶ್ವಸಂಸ್ಥೆಯ ಶಾಂತಿಪಾಲನಾ ಪ್ರಯತ್ನಗಳಿಗೆ ಭಾರತದ ದೀರ್ಘಕಾಲೀನ ಕೊಡುಗೆಯನ್ನು ಗುರುತಿಸುತ್ತದೆ. ರಾಷ್ಟ್ರ ಮತ್ತು ಮಾನವೀಯತೆಗೆ ಸೇವೆ ಸಲ್ಲಿಸಲು ಬಯಸುವ ಅಸಂಖ್ಯಾತ ಯುವ ಭಾರತೀಯರಿಗೆ, ವಿಶೇಷವಾಗಿ ನಮ್ಮ ಹೆಣ್ಣುಮಕ್ಕಳಿಗೆ ಅವರ ಸಾಧನೆಯು ಸ್ಫೂರ್ತಿಯಾಗಿದೆ."

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s continuing tradition of celebrating its teachers

Media Coverage

India’s continuing tradition of celebrating its teachers
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 5 ಸೆಪ್ಟೆಂಬರ್ 2026
September 05, 2026

The New Indian Equation: Policy + People = Tangible Progress Under PM Modi