2025ರ ಮಹಿಳಾ ಕಬಡ್ಡಿ ವಿಶ್ವಕಪ್ ಸ್ಪರ್ಧೆಯಲ್ಲಿ ಗಮನಾರ್ಹ ಹಾಗೂ ಮಹತ್ವಪೂರ್ಣ ಗೆಲುವು ಸಾಧಿಸಿದ ಭಾರತೀಯ ಮಹಿಳಾ ಕಬಡ್ಡಿ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.
ಎಕ್ಸ್ ತಾಣದ ಸಂದೇಶದಲ್ಲಿ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ:
"2025 ರ ಮಹಿಳಾ ಕಬಡ್ಡಿ ವಿಶ್ವಕಪ್ ವಿಜೇತರಾಗುವ ಮೂಲಕ ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ್ದಕ್ಕಾಗಿ ನಮ್ಮ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು! ಅವರು ಅತ್ಯುತ್ತಮ ಧೈರ್ಯ, ಕೌಶಲ್ಯ ಮತ್ತು ಸಮರ್ಪಣೆಯನ್ನು ಪ್ರದರ್ಶಿಸಿದ್ದಾರೆ. ಅವರ ಗೆಲುವು ಅಸಂಖ್ಯಾತ ಯುವಕರಿಗೆ ಕಬಡ್ಡಿಯನ್ನು ವೃತ್ತಿಪರ ಕ್ರೀಡೆಯಾಗಿ ಮುಂದುವರಿಸಲು, ದೊಡ್ಡ ಕನಸು ಕಾಣಲು ಮತ್ತು ಹೆಚ್ಚಿನ ಗುರಿಯನ್ನು ಸಾಧಿಸಲು ಸ್ಫೂರ್ತಿ ನೀಡುತ್ತದೆ."
Congratulations to our Indian Women’s Kabaddi Team for making the nation proud by winning the Kabaddi World Cup 2025! They have showcased outstanding grit, skills and dedication. Their victory will inspire countless youngsters to pursue Kabaddi, dream bigger and aim higher. pic.twitter.com/XRM8J2I2h0
— Narendra Modi (@narendramodi) November 24, 2025


