ನಾರ್ವೆ ಚೆಸ್ 2025ರ 6ನೇ ಸುತ್ತಿನಲ್ಲಿ ಮ್ಯಾಗ್ನಸ್ ಕಾರ್ಲ್ ಸನ್ ವಿರುದ್ಧ ಮೊದಲ ಗೆಲುವು ಸಾಧಿಸಿದ ಗುಕೇಶ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. "ಅತ್ಯದ್ಭುತ ಗೆಲುವಿಗಾಗಿ ಅಭಿನಂದನೆಗಳು. ನಾರ್ವೆ ಚೆಸ್ 2025ರ 6ನೇ ಸುತ್ತಿನಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಅವರ ಪ್ರಪ್ರಥಮ ಗೆಲುವು ಅವರ ಪ್ರತಿಭೆ ಮತ್ತು ಸಮರ್ಪಣೆಯನ್ನು ಪ್ರದರ್ಶಿಸುತ್ತದೆ" ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
"ಗುಕೇಶ್ ಅವರಿಂದ ಅಸಾಧಾರಣ ಸಾಧನೆ! ಅತ್ಯುತ್ತಮ ಪ್ರದರ್ಶನ ನೀಡಿದ ಅವರಿಗೆ ಅಭಿನಂದನೆಗಳು. ನಾರ್ವೆ ಚೆಸ್ 2025ರ 6 ನೇ ಸುತ್ತಿನಲ್ಲಿ ಮ್ಯಾಗ್ನಸ್ ಕಾರ್ಲ್ ಸನ್ ವಿರುದ್ಧ ಅವರ ಮೊಟ್ಟ ಮೊದಲ ಗೆಲುವು ಅವರ ಪ್ರತಿಭೆ ಮತ್ತು ಸಮರ್ಪಣೆಯನ್ನು ಪ್ರದರ್ಶಿಸುತ್ತದೆ. ಅವರ ಮುಂದಿನ ಪಯಣದಲ್ಲಿ ಅವರಿಗೆ ಯಶಸ್ಸು ದೊರೆಯುತ್ತಿರಲಿ ಎಂದು ಹಾರೈಸುತ್ತೇನೆ."
@DGukesh
An exceptional achievement by Gukesh! Congratulations to him for triumphing over the very best. His first-ever win against Magnus Carlsen in Round 6 of Norway Chess 2025 showcases his brilliance and dedication. Wishing him continued success in the journey ahead.@DGukesh pic.twitter.com/TjxyPzn3uN
— Narendra Modi (@narendramodi) June 2, 2025


