ಇಂದು ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನ ಪುರುಷರ 400ಮೀಟರ್-ಟಿ64 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಕ್ಕಾಗಿ ಅಜಯ್ ಕುಮಾರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯ ಸಂದೇಶದಲ್ಲಿ ಈ ರೀತಿ ಹೇಳಿದ್ದಾರೆ:
"ಏಷ್ಯನ್ ಪ್ಯಾರಾ ಗೇಮ್ಸ್ ನ ಪುರುಷರ 400ಮೀ-ಟಿ64 ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದಕ್ಕಾಗಿ ಅಜಯ್ ಕುಮಾರ್ ಅವರಿಗೆ ಅಭಿನಂದನೆಗಳು. ಅವರ ಅತ್ಯುತ್ತಮ ಸಾಧನೆಯು ಅವರ ಕ್ರೀಡಾ ಸಮರ್ಪಣೆ ಮತ್ತು ನಿರ್ಣಯವನ್ನು ಸ್ಪಷ್ಟವಾಗಿ ಹೇಳುತ್ತದೆ."
Kudos to Ajay Kumar for clinching the Silver in the Men's 400m-T64 at the Asian Para Games. His outstanding accomplishment speaks volumes of his dedication and determination. pic.twitter.com/XVavTEuxU3
— Narendra Modi (@narendramodi) October 24, 2023


