ಖ್ಯಾತ ಶಿಕ್ಷಣ ತಜ್ಞೆ ಮತ್ತು ಸಮಾಜ ಸೇವಕಿ ಶ್ರೀಮತಿ ಇಳಾ(ಲಾ)ಬೆನ್ ಭಟ್ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಯುವಜನರಲ್ಲಿ ಮಹಿಳಾ ಸಬಲೀಕರಣ, ಸಮಾಜ ಸೇವೆ ಮತ್ತು ಶಿಕ್ಷಣ ಉತ್ತೇಜಿಸಲು ಭಟ್ ಅವರು ಅಪಾರ ಪ್ರಯತ್ನಗಳನ್ನು ನಡೆಸಿದ್ದರು ಎಂದು ಪ್ರಧಾನಮಂತ್ರಿ ಸ್ಮರಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು;
"ಇಳಾಬೆನ್ ಭಟ್ ಅವರ ನಿಧನವು ಅತೀವ ದುಃಖ ತಂದಿದೆ. ಯುವಜನರಲ್ಲಿ ಮಹಿಳಾ ಸಬಲೀಕರಣ, ಸಮಾಜ ಸೇವೆ ಮತ್ತು ಶಿಕ್ಷಣ ಉತ್ತೇಜಿಸಲು ಅವರು ಮಾಡಿದ ನಿರಂತರ ಪ್ರಯತ್ನಗಳಿಗಾಗಿ ಅವರು ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತಾರೆ. ಅವರ ಕುಟುಂಬ ಸದಸ್ಯರು ಮತ್ತು ಅಪಾರ ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತೇನೆ, ಓಂ ಶಾಂತಿ."
ઇલાબેન ભટ્ટના અવસાનથી દુઃખ થયું. મહિલા સશક્તિકરણ, સમાજ સેવા અને યુવાનોમાં શિક્ષણને આગળ વધારવા માટેના પ્રયાસો માટે તેઓને દીર્ઘકાળ સુધી યાદ રાખવામાં આવશે. તેમના પરિવારજનો તથા પ્રશંસકો પ્રત્યે સંવેદના. ૐ શાંતિ…॥
— Narendra Modi (@narendramodi) November 2, 2022


