ಚೀನಾದ ಹ್ಯಾಂಗ್‌ಝೌನಲ್ಲಿ ಏಷ್ಯನ್ ಪ್ಯಾರಾ ಗೇಮ್ಸ್ 2022ರಲ್ಲಿ ಮಿಶ್ರ 50 ಮೀ ರೈಫಲ್ ಎಸ್ ಹೆಚ್1 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ರುದ್ರಾಂಶ್ ಖಂಡೇಲ್ವಾಲ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು,
ಮಿಶ್ರ 50 ಮೀ ರೈಫಲ್ ಎಸ್ ಹೆಚ್1 ಸ್ಪರ್ಧೆಯಲ್ಲಿ ಅದ್ವಿತೀಯ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದ ರುದ್ರಾಂಶ್ ಖಂಡೇಲ್ವಾಲ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಸಮರ್ಪಣೆ ಮತ್ತು ಪರಾಕ್ರಮವು ನಿಜವಾಗಿಯೂ ಶ್ಲಾಘನೀಯವಾಗಿದ್ದು ಮಹತ್ವಾಕಾಂಕ್ಷಿ ಕ್ರೀಡಾಪಟುಗಳಿಗೆ ಮಾನದಂಡವಾಗಿದೆ. ಅವರ ಸಾಧನೆಗೆ ಭಾರತ ಹೆಮ್ಮೆಪಡುತ್ತದೆ ಎಂದು ಬರೆದಿದ್ದಾರೆ.
Heartiest congratulations to @1903rudransh on the incredible Silver Medal in the Mixed 50m Rifle SH1 event. His dedication and prowess are truly commendable, setting a benchmark for aspiring athletes. India beams with pride at his achievement. pic.twitter.com/XH50A5mISL
— Narendra Modi (@narendramodi) October 23, 2023


