ಚೀನಾದ ಹ್ಯಾಂಗ್ ಝೌ ನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ನ ಪುರುಷರ ಎತ್ತರ ಜಿಗಿತ T47 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ರಾಂಪಾಲ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಪ್ರಧಾನ ಮಂತ್ರಿ X ನಲ್ಲಿ ಪೋಸ್ಟ್ ಮಾಡಿದ್ದಾರೆ:
“ಏಷ್ಯನ್ ಪ್ಯಾರಾ ಗೇಮ್ಸ್ ನ ಪುರುಷರ ಹೈ ಜಂಪ್ T47 ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಕ್ಕಾಗಿ ರಾಂಪಾಲ್ ಅವರಿಗೆ ಅಭಿನಂದನೆಗಳು. ಅವರು ಉನ್ನತ ಗುರಿಯನ್ನು ಇಟ್ಟುಕೊಂಡು ಬಹಳಷ್ಟು ಯಶಸ್ಸನ್ನು ಸಾಧಿಸಲಿ. ಅವರ ಸಾಧನೆಯಿಂದ ಭಾರತ ಸಂತಸಗೊಂಡಿದೆ” ಎಂದು ಪ್ರಧಾನಮಂತ್ರಿ ಸಂದೇಶ ನೀಡಿದ್ದಾರೆ.
Congratulations to Rampal on your outstanding Silver Medal win in the Men's High Jump T47 event at the Asian Para Games. May he keep aiming high and achieve a lot of success. India is delighted with his feat. pic.twitter.com/zctAJzZ2sf
— Narendra Modi (@narendramodi) October 23, 2023


