ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯಾ ಪ್ಯಾರಾ ಗೇಮ್ಸ್-2022ರ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ವೈಷ್ಣವಿ ಪುನಿಯಾನಿ ಅವರನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಈ ಕುರಿತು X ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನ ಮಂತ್ರಿ:
“ಏಷ್ಯಾ ಪ್ಯಾರಾ ಗೇಮ್ಸ್-2022ರ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗಳಿಸಿದ್ದಕ್ಕಾಗಿ ವೈಷ್ಣವಿ ಪುನಿಯಾನಿ ಅವರಿಗೆ ಅಭಿನಂದನೆಗಳು. ಈ ಮಹೋನ್ನತ ಸಾಧನೆಯು ಆಕೆಯ ಬದ್ಧತೆ ಮತ್ತು ದೃಢನಿಶ್ಚಯವನ್ನು ಸಾರುತ್ತದೆ. ಆಕೆಯ ಮುಂದಿನ ಕ್ರೀಡಾ ಪ್ರಯತ್ನಗಳಿಗೆ ಶುಭಾಶಯಗಳು” ಎಂದಿದ್ದಾರೆ.
Congratulations to Vaishnavi Puneyani for securing the Bronze medal in Badminton Women's Singles at the Asian Para Games. This outstanding accomplishment speaks volumes about her commitment and determination. Best wishes for her future endeavours. pic.twitter.com/r4Bj5GlbqC
— Narendra Modi (@narendramodi) October 25, 2023


