ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಹುದ್ದೆಯಿಂದ ನಿರ್ಗಮಿಸುವುದಾಗಿ ಪ್ರಕಟಿಸಿರುವ ಡಾ. ಕೆ ವಿ ಸುಬ್ರಮಣಿಯನ್ ಅವರಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭ ಹಾರೈಸಿದ್ದು, ಅವರಿಗೆ ಉಜ್ವಲ ಭವಿಷ್ಯ ಸಿಗಲಿ ಎಂದು ಆಶಿಸಿದ್ದಾರೆ.
ಡಾ. ಸುಬ್ರಮಣಿಯನ್ ಅವರು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಹುದ್ದೆಯನ್ನು ಮೂರು ವರ್ಷ ಪೂರ್ಣಗೊಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು, “ಡಾ. ಸುಬ್ರಮಣಿಯನ್ ಅವರೊಂದಿಗೆ ಕೆಲಸ ಮಾಡುವುದೇ ಸಂತೋಷದಾಯಕ ವಿಷಯವಾಗಿತ್ತು. ಪ್ರಮುಖ ಆರ್ಥಿಕ ಮತ್ತು ನೀತಿ ವಿಷಯಗಳಲ್ಲಿ ಅವರಿಗಿದ್ದ ಶೈಕ್ಷಣಿಕ ಬುದ್ಧಿವಂತಿಕೆ, ಅನನ್ಯ ದೃಷ್ಟಿಕೋನ ಮತ್ತು ಸುಧಾರಣೆಗಳನ್ನು ತರುವ ಹುಮ್ಮಸ್ಸು ಮತ್ತು ಮಹತ್ವಕಾಂಕ್ಷೆ ಗಮನಾರ್ಹವಾದುದು. ಅವರ ಭವಿಷ್ಯದ ಎಲ್ಲಾ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ” ಎಂದಿದ್ದಾರೆ.
Its been a delight to work with @SubramanianKri. His academic brilliance, unique perspectives on key economic as well as policy matters and reformist zeal are noteworthy. Wishing him the very best for his coming endeavours. https://t.co/jZjrqWaJU7
— Narendra Modi (@narendramodi) October 8, 2021


