ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ವಾಲ್ಟರ್ ರಸೆಲ್ ಮೀಡ್ ನೇತೃತ್ವದ ಅಮೆರಿಕದ ಚಿಂತಕರು ಮತ್ತು ವ್ಯಾಪಾರ ನಾಯಕರ ನಿಯೋಗದೊಂದಿಗೆ ಸಂವಾದ ನಡೆಸಿದರು.
ಭಾರತ-ಅಮೆರಿಕ ಸಂಬಂಧಗಳನ್ನು ಬಲಪಡಿಸುವಲ್ಲಿ ಹಾಗೂ ಜಾಗತಿಕ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗಾಗಿ ಎರಡೂ ರಾಷ್ಟ್ರಗಳ ನಡುವಿನ ಪಾಲುದಾರಿಕೆಯನ್ನು ಮುನ್ನಡೆಸುವಲ್ಲಿ ಅವರ ಕೊಡುಗೆಗಳನ್ನು ಪ್ರಧಾನಮಂತ್ರಿ ಶ್ಲಾಘಿಸಿದರು.
ಪ್ರಧಾನಮಂತ್ರಿಯವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
“ಶ್ರೀ ವಾಲ್ಟರ್ ರಸೆಲ್ ಮೀಡ್ ನೇತೃತ್ವದ ಅಮೆರಿಕದ ಚಿಂತಕರು ಮತ್ತು ವ್ಯಾಪಾರ ನಾಯಕರ ನಿಯೋಗದೊಂದಿಗೆ ಸಂವಹನ ನಡೆಸಿ ಸಂತೋಷವಾಗಿದೆ. ಭಾರತ-ಅಮೆರಿಕ ಸಂಬಂಧಗಳನ್ನು ಬಲಪಡಿಸುವಲ್ಲಿ ಹಾಗೂ ಜಾಗತಿಕ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗಾಗಿ ನಮ್ಮ ಪಾಲುದಾರಿಕೆಯನ್ನು ಮುನ್ನಡೆಸುವಲ್ಲಿ ಅವರ ಕೊಡುಗೆಗಳು ಶ್ಲಾಘನೀಯ.
@wrmead”
Glad to interact with a US delegation of thinkers and business leaders led by Mr. Walter Russell Mead. Value their contribution in strengthening India-US ties and advancing our partnership for global peace, progress and prosperity.@wrmead pic.twitter.com/Nw3snfzB4C
— Narendra Modi (@narendramodi) October 7, 2025


