ಏಷ್ಯನ್ ಗೇಮ್ಸ್ ನಲ್ಲಿ ಶೂಟಿಂಗ್ ನಲ್ಲಿ ಚಿನ್ನದ ಪದಕ ಗೆದ್ದ 10 ಮೀಟರ್ ಏರ್ ಪಿಸ್ತೂಲ್ ಪುರುಷರ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಶೂಟರ್ ಗಳಾದ ಸರಬ್ಜೋತ್ ಸಿಂಗ್, ಅರ್ಜುನ್ ಸಿಂಗ್ ಚೀಮಾ ಮತ್ತು ಶಿವ ನರ್ವಾಲ್ ತಮ್ಮ ನಿಖರತೆ ಮತ್ತು ಕೌಶಲ್ಯದಿಂದ ಇಡೀ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಹೇಳಿದ್ದಾರೆ;
“ಏಷ್ಯನ್ ಗೇಮ್ಸ್ ನಲ್ಲಿ ನಮ್ಮ ಗಮನಾರ್ಹ ಕ್ರೀಡಾ ಪ್ರದರ್ಶನ ನೀಡಿದ, 10 ಮೀ ಏರ್ ಪಿಸ್ತೂಲ್ ಪುರುಷರ ತಂಡದಿಂದ ಶೂಟಿಂಗ್ನಲ್ಲಿ ಮತ್ತೊಂದು ಚಿನ್ನ! ಸರಬ್ಜೋತ್ ಸಿಂಗ್, ಅರ್ಜುನ್ ಸಿಂಗ್ ಚೀಮಾ ಮತ್ತು ಶಿವ ನರ್ವಾಲ್ ಅವರು ತಮ್ಮ ನಿಖರತೆ ಮತ್ತು ಕೌಶಲ್ಯದಿಂದ ಇಡೀ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ನಾನು ಅವರನ್ನು ಅಭಿನಂದಿಸುತ್ತೇನೆ ಮತ್ತು ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ.”
Another Gold in Shooting by our remarkable 10m Air Pistol Men's team at the Asian Games! Sarabjot Singh, Arjun Singh Cheema and Shiva Narwal have made the entire nation proud with their precision and skill. I congratulate them and wish them the very best for their future… pic.twitter.com/832D0UEl39
— Narendra Modi (@narendramodi) September 28, 2023


