Prime Minister Shri Narendra Modi visited Varanasi with his Japanese counterpart Japnese PM Shinzo Abe. Both the Prime Ministers participated in Ganga Aarti at the Dashashwamedh Ghat in Varanasi.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿವೇಕಾನಂದ ಕೇಂದ್ರದ ಅಖಿಲ ಭಾರತ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಶ್ರೀ ಎ. ಬಾಲಕೃಷ್ಣನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಶ್ರೀ ಬಾಲಕೃಷ್ಣನ್ ಜಿ ಅವರು ಸಮಾಜಕ್ಕೆ ನೀಡಿರುವ ಗಣನೀಯ ಕೊಡುಗೆಯನ್ನು ಶ್ರೀ ನರೇಂದ್ರ ಮೋದಿ ಸ್ಮರಿಸಿದ್ದಾರೆ, ಅವರು ತಮ್ಮ ಜೀವನದ ಐದು ದಶಕಗಳಿಗೂ ಅಧಿಕ ಕಾಲ ಸ್ವಾಮಿ ವಿವೇಕಾನಂದರ ಆದರ್ಶಗಳಿಗೆ ಮತ್ತು ರಾಷ್ಟ್ರದ ಸೇವೆಗೆ ಮೀಸಲಿಟ್ಟಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. "ಅವರು ಈಶಾನ್ಯ ರಾಜ್ಯಗಳೊಂದಿಗೆ ವಿಶೇಷವಾಗಿ ಗಾಢವಾದ ಸಂಬಂಧವನ್ನು ಹೊಂದಿದ್ದರು. ಶೈಕ್ಷಣಿಕ, ಸಾಮಾಜಿಕ ಮತ್ತು ರಾಷ್ಟ್ರ ನಿರ್ಮಾಣ ಚಟುವಟಿಕೆಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ" ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಮಂತ್ರಿ ತಮ್ಮ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
ವಿವೇಕಾನಂದ ಕೇಂದ್ರದ ಅಖಿಲ ಭಾರತ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಶ್ರೀ ಎ. ಬಾಲಕೃಷ್ಣನ್ ಜಿ ಅವರ ನಿಧನದಿಂದ ತೀವ್ರ ದುಃಖವಾಗಿದೆ.
ಬಾಲಕೃಷ್ಣನ್ ತಮ್ಮ ಜೀವನದ ಐದು ದಶಕಗಳಿಗೂ ಅಧಿಕ ಸಮಯವನ್ನು ಸ್ವಾಮಿ ವಿವೇಕಾನಂದರ ಆದರ್ಶಗಳಿಗೆ ಮತ್ತು ಸಮಾಜದ ಸೇವೆಗೆ ಮೀಸಲಿಟ್ಟಿದ್ದರು. ವಿವೇಕಾನಂದ ಕೇಂದ್ರದ ಆರಂಭಿಕ ಜೀವನ್ರತಿಗಳಲ್ಲಿ ಒಬ್ಬರಾಗಿ, ಅವರು ದೇಶಾದ್ಯಂತ ಅವಿಶ್ರಾಂತವಾಗಿ ಕಾರ್ಯನಿರ್ವಹಿಸಿದರು. ಅವರು ಈಶಾನ್ಯ ರಾಜ್ಯಗಳೊಂದಿಗೆ ವಿಶೇಷವಾಗಿ ಗಾಢವಾದ ಸಂಬಂಧವನ್ನು ಹೊಂದಿದ್ದರು. ಅವರು ಶೈಕ್ಷಣಿಕ, ಸಾಮಾಜಿಕ ಮತ್ತು ರಾಷ್ಟ್ರ ನಿರ್ಮಾಣ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಇಡೀ ವಿವೇಕಾನಂದ ಕೇಂದ್ರ ಕುಟುಂಬ ಮತ್ತು ಅವರ ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಓಂ ಶಾಂತಿ.
@vkendra
Deeply saddened by the passing of Shri A. Balakrishnan Ji, who served as the All India President of Vivekananda Kendra.
— Narendra Modi (@narendramodi) August 27, 2026
Balakrishnan Ji devoted more than five decades of his life to the ideals of Swami Vivekananda and to the service of society. As one of the early Jeevanvratis… pic.twitter.com/oPJz3fZEgc


