ಗೌರವಾನ್ವಿತ ಪ್ರಧಾನಮಂತ್ರಿ ಲಪಿಡ್ ಅವರೇ, 
ಘನತೆವೆತ್ತ ಷೇಕ್ ಮೊಹಮದ್ ಬಿನ್ ಜೈದ್ ಅಲ್ ನಹ್ಯಾನ್ ಅವರೇ, 
ಗೌರವಾನ್ವಿತ ಅಧ್ಯಕ್ಷ ಬೈಡನ್ ಅವರೇ 

ಮೊದಲನೆಯದಾಗಿ, ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಪ್ರಧಾನಿ ಲ್ಯಾಪಿಡ್ ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು.

ಇಂದಿನ ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. 

ನಿಜವಾದ ಅರ್ಥದಲ್ಲಿ ಇದು ಕಾರ್ಯತಂತ್ರದ ಪಾಲುದಾರರ ಸಭೆಯಾಗಿದೆ. 

ನಾವೆಲ್ಲರೂ ಉತ್ತಮ ಸ್ನೇಹಿತರಾಗಿದ್ದೇವೆ ಮತ್ತು ನಾವೆಲ್ಲರೂ ಸಾಮಾನ ದೃಷ್ಟಿಕೋನ ಮತ್ತು ಸಾಮಾನ ಆಸಕ್ತಿಗಳನ್ನು ಹೊಂದಿದ್ದೇವೆ. 

ಗೌರವಾನ್ವಿತರೇ, ಘನತೆವೆತ್ತವರೇ., 

‘ಐ2ಯು2’ ಇಂದಿನ ಮೊದಲ ಶೃಂಗಸಭೆಯಿಂದಲೇ ಸಕಾರಾತ್ಮಕ ಕಾರ್ಯಸೂಚಿ ಹೊಂದಿದೆ.

ನಾವು ಹಲವು ವಲಯಗಳಲ್ಲಿ ಜಂಟಿ ಯೋಜನೆಗಳನ್ನು ಗುರುತಿಸಿದ್ದೇವೆ ಮತ್ತು ಅವುಗಳಲ್ಲಿ ಮುಂದುವರಿಯಲು ಮಾರ್ಗಸೂಚಿಯನ್ನು ಸಹ ಸಿದ್ಧಪಡಿಸಿದ್ದೇವೆ. 

‘ಐ2ಯು2’ ಚೌಕಟ್ಟಿನ ಅಡಿಯಲ್ಲಿ ನೀರು, ಇಂಧನ, ಸಾರಿಗೆ, ಬಾಹ್ಯಾಕಾಶ ಆರೋಗ್ಯ ಮತ್ತು ಆಹಾರ ಭದ್ರತೆಯ ಆರು ಪ್ರಮುಖ ಕ್ಷೇತ್ರಗಳಲ್ಲಿ ಜಂಟಿ ಬಂಡವಾಳ ಹೂಡಿಕೆಯನ್ನು ವೃದ್ಧಿಸಲು ನಾವು ಒಪ್ಪಿಕೊಂಡಿದ್ದೇವೆ. 

 ‘ಐ2ಯು2’ ದೂರದೃಷ್ಟಿ ಮತ್ತು ಕಾರ್ಯಸೂಚಿಯು ಪ್ರಗತಿಪರ ಮತ್ತು ಪ್ರಾಯೋಗಿಕವಾಗಿದೆ ಎಂಬುದು ಸ್ಪಷ್ಟವಾಗಿದೆ. 

ನಮ್ಮ ರಾಷ್ಟ್ರಗಳ ಪರಸ್ಪರ ಸಾಮರ್ಥ್ಯಗಳನ್ನು ಕ್ರೂಢೀಕರಿಸುವ ಮೂಲಕ-ಬಂಡವಾಳ,  ನೈಪುಣ್ಯತೆ ಮತ್ತು ಮಾರುಕಟ್ಟೆ-ಬಳಸಿ ನಾವು ನಮ್ಮ ಕಾರ್ಯಸೂಚಿಗೆ ಇನ್ನಷ್ಟು   ವೇಗ ನೀಡಬಹುದು ಮತ್ತು ಜಾಗತಿಕ ಆರ್ಥಿಕತೆಗೆ ಗಮನಾರ್ಹ ಕೊಡುಗೆ ನೀಡಬಹುದು. 

ಹೆಚ್ಚಾಗುತ್ತಿರುವ ಜಾಗತಿಕ ಅನಿಶ್ಚಿತತೆಗಳ ಹಿನ್ನೆಲೆಯಲ್ಲಿ ನಮ್ಮ ಸಹಕಾರ ನೀತಿ ಪ್ರಾಯೋಗಿಕ ಸಹಕಾರಕ್ಕೆ ಉತ್ತಮ ಮಾದರಿಯಾಗಿದೆ. 

‘ಐ2ಯು2’ನೊಂದಿಗೆ ನಾವು ಜಾಗತಿಕ ಮಟ್ಟದಲ್ಲಿ ಇಂಧನ ಭದ್ರತೆ, ಆಹಾರ ಭದ್ರತೆ ಮತ್ತು ಆರ್ಥಿಕ ಬೆಳವಣಿಗೆಗೆ ಗಮನಾರ್ಹ ಕೊಡುಗೆಗಳನ್ನು ನೀಡುತ್ತೇವೆಂಬ ವಿಶ್ವಾಸ ನನಗಿದೆ. 

ಧನ್ಯವಾದಗಳು

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s GDP To Grow 7% In FY26: Crisil Revises Growth Forecast Upward

Media Coverage

India’s GDP To Grow 7% In FY26: Crisil Revises Growth Forecast Upward
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 16 ಡಿಸೆಂಬರ್ 2025
December 16, 2025

Global Respect and Self-Reliant Strides: The Modi Effect in Jordan and Beyond