ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೊಯಿಡಾದಲ್ಲಿ ನಡೆದ ಪೆಟ್ರೋಟೆಕ್ 2019 ರ ಉದ್ಘಾಟನಾ ಸಮಾರಂಭದಲ್ಲಿ ಮಾಡಿದ ಉದ್ಘಾಟನಾ ಭಾಷಣ ಇಂತಿದೆ.

 

ನಮಸ್ತೇ,

ಸಾರಿಗೆಯ ಕಾರಣದಿಂದಾಗಿ ಮೊದಲಿಗೇ ನಾನು ವಿಳಂಬವಾದುದಕ್ಕೆ ಕ್ಷಮೆ ಕೇಳುತ್ತೇನೆ.

ಭಾರತದ ಪ್ರಮುಖ ಹೈಡ್ರೋಕಾರ್ಬನ್ ಸಮ್ಮೇಳನದ ಹದಿಮೂರನೇ ಆವೃತ್ತಿಯಾದ  ಪೆಟ್ರೋಟೆಕ್ -2019 ಕ್ಕೆ ನಿಮ್ಮೆಲ್ಲರನ್ನೂ ಸ್ವಾಗತಿಸಲು ನಾನು ಹರ್ಷಿಸುತ್ತೇನೆ. 

ನಾನು ಗೌರವಾನ್ವಿತರಾದ ಡಾ. ಸುಲ್ತಾನ್ ಅಲ್ ಜಬೀರ್ ಅವರನ್ನು ಇಂಧನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಮತ್ತು ಭವಿಷ್ಯದ ಚಿಂತನೆಗಾಗಿ ಅಭಿನಂದಿಸಲು ಬಯಸುತ್ತೇನೆ.

ಕಳೆದ ಕಾಲು ಶತಮಾನದಲ್ಲಿ ,ಪೆಟ್ರೋಟೆಕ್,  ಇಂಧನ ಕ್ಷೇತ್ರದಲ್ಲಿ ನಾವು ಎದುರಿಸುತ್ತಿರುವ ಸವಾಲುಗಳಿಗೆ  ಪರಿಹಾರಗಳನ್ನು ಚರ್ಚಿಸಲು ವೇದಿಕೆಯಾಗಿ ಒದಗಿ ಬಂದಿದೆ.

ನಮ್ಮ ಪ್ರತೀ ದೇಶಗಳಲ್ಲೂ , ನಮ್ಮ ನಾಗರಿಕರಿಗೆ ನಾವು ಕೈಗೆಟಕುವ ದರದಲ್ಲಿ , ದಕ್ಷ, ಸ್ವಚ್ಚ ಮತ್ತು ಭರವಸೆ ಇಡುವ ರೀತಿಯಲ್ಲಿ ಇಂಧನ ಪೂರೈಕೆಯನ್ನು ಮಾಡಲು ಇಚ್ಚಿಸುತ್ತೇವೆ.

ಇಲ್ಲಿ ಅರುವತ್ತಕ್ಕೂ ಅಧಿಕ ರಾಷ್ಟ್ರಗಳ ಮತ್ತು ಏಳು ಸಾವಿರ ಪ್ರತಿನಿಧಿಗಳ ಹಾಜರಾತಿಯು ಆ ಸಾಮಾನ್ಯ ಆಶಯದ ಪ್ರತಿಬಿಂಬದಂತಿದೆ.

ಹಲವಾರು ದಶಕಗಳ ಸಾರ್ವಜನಿಕ ಜೀವನ ನನಗೆ ಇಂಧನವು ಸಾಮಾಜಿಕ-ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲಕ ಶಕ್ತಿಯಾಗಿರುವುದನ್ನು ಮನವರಿಕೆ ಮಾಡಿಕೊಟ್ಟಿದೆ. ಸೂಕ್ತ ದರದಲ್ಲಿ, ಸ್ಥಿರ ಮತ್ತು ಸಹ್ಯ ಇಂಧನ ಪೂರೈಕೆ ಆರ್ಥಿಕತೆಯ ತ್ವರಿತ ಬೆಳವಣಿಗೆಗೆ ಅವಶ್ಯಕ.  ಅದು ಸಮಾಜದ ಬಡ ಮತ್ತು ದುರ್ಬಲ ವರ್ಗದವರಿಗೂ ನೆರವಾಗುತ್ತದೆ, ಆರ್ಥಿಕ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುತ್ತದೆ. 

ಇಂಧನ ವಲಯವು ಬೃಹತ್ ಮಟ್ಟದಲ್ಲಿ ಬೆಳವಣಿಗೆ ಸಾಧ್ಯ ಮಾಡುವ ಪ್ರಮುಖ ವಲಯವಾಗಿದೆ.

ಸ್ನೇಹಿತರೇ,

ನಾವಿಲ್ಲಿ ಜಾಗತಿಕ ಇಂಧನದ ವರ್ತಮಾನ ಮತ್ತು ಭವಿಷ್ಯಗಳ ಬಗ್ಗೆ ಚರ್ಚಿಸಲು ನೆರೆದಿರುವಂತೆಯೇ, ಜಾಗತಿಕ ಇಂಧನ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುವುದು ಕಾಣಿಸುತ್ತಿದೆ.

ಇಂಧನ ಪೂರೈಕೆ, ಇಂಧನ ಮೂಲಗಳು ಮತ್ತು ಇಂಧನ ಬಳಕೆ ಮಾದರಿಗಳು ಬದಲಾಗುತ್ತಿವೆ. ಇದೊಂದು ಚಾರಿತ್ರಿಕ ಪರಿವರ್ತನೆ.

ಇಂಧನ ಬಳಕೆಯಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಸ್ಥಿತ್ಯಂತರವಾಗಿರುವುದು ಗೋಚರಕ್ಕೆ ಬರುತ್ತದೆ.

ಶಾಲೇ ಕ್ರಾಂತಿಯ ಬಳಿಕ ಅಮೇರಿಕಾವು  ವಿಶ್ವದ ಅತ್ಯಂತ ದೊಡ್ದ ತೈಲ ಮತ್ತು ಅನಿಲ ಉತ್ಪಾದಕ ರಾಷ್ಟ್ರವಾಗಿದೆ.

ಸೌರ ಶಕ್ತಿ ಮತ್ತು ಇತರ ಮರುನವೀಕರಿಸಬಹುದಾದ ಇಂಧನಗಳು ಹೆಚ್ಚೆಚ್ಚು ಸ್ಪರ್ಧಾತ್ಮಕವಾಗುತ್ತಿವೆ. ಅವುಗಳು ಸಾಂಪ್ರದಾಯಿಕ ಇಂಧನ ಮೂಲಗಳಿಗೆ ಸಹ್ಯ ಪರ್ಯಾಯವಾಗಿ ಮೂಡಿ ಬರುತ್ತವೆ.

ಜಾಗತಿಕ ಇಂಧನ ಮಿಶ್ರಣದಲ್ಲಿ ನೈಸರ್ಗಿಕ ಅನಿಲವು ಅತ್ಯಂತ ದೊಡ್ಡ ಇಂಧನವಾಗುತ್ತಿದೆ. 

ಕಡಿಮೆ ಖರ್ಚಿನ ಮರುನವೀಕರಿಸಬಹುದಾದ ಇಂಧನ, ತಂತ್ರಜ್ಞಾನಗಳು, ಮತ್ತು ಡಿಜಿಟಲ್ ಅಪ್ಲಿಕೇಶನ್ ಗಳ ನಡುವೆ ಸಾಮೀಪ್ಯದ ಸಂಕೇತಗಳು ಗೋಚರಿಸುತ್ತಿವೆ. ಇದು ಹಲವು ಸಹ್ಯ ಅಭಿವೃದ್ದಿ ಗುರಿಗಳನ್ನು ಸಾಧಿಸಲು ವೇಗೋತ್ಕರ್ಷ ಒದಗಿಸಬಹುದು.

ವಾತಾವರಣ ಬದಲಾವಣೆಯನ್ನು ನಿಭಾಯಿಸಲು ರಾಷ್ಟ್ರಗಳು ಪರಸ್ಪರ ಹತ್ತಿರವಾಗುತ್ತಿವೆ. ಭಾರತ ಮತ್ತು ಫ್ರಾನ್ಸ್ ಪ್ರಾಯೋಜಿತ ಅಂತಾರಾಷ್ಟ್ರೀಯ ಸೌರ ಮಿತ್ರಕೂಟದಂತಹ ಜಾಗತಿಕ ಸಹಭಾಗಿತ್ವದಲ್ಲಿ ಇದು ಸ್ಪಷ್ಟವಾಗಿ ಗೋಚರವಾಗುತ್ತಿದೆ. 

ನಾವು ಬೃಹತ್ ಪ್ರಮಾಣದ ಇಂಧನ ಲಭ್ಯತೆಯ ಶಕೆಯನ್ನು ಪ್ರವೇಶಿಸುತ್ತಿದ್ದೇವೆ. 

ಜಾಗತಿಕವಾಗಿ ಒಂದು ಬಿಲಿಯನ್ನಿಗೂ ಅಧಿಕ ಜನರು ಈಗಲೂ ವಿದ್ಯುತ್ ಪಡೆಯಲು ಶಕ್ತರಾಗಿಲ್ಲ. ಅದಕ್ಕಿಂತ ಹೆಚ್ಚು ಜನರಿಗೆ ಸ್ವಚ್ಚ ಅಡುಗೆ ಅನಿಲ ಲಭ್ಯತೆ ಇಲ್ಲ.

ಇಂಧನ ಲಭ್ಯತೆಯ ಈ ವಿಷಯಗಳನ್ನು ಪರಿಹರಿಸಲು ಭಾರತವು ಮುಂಚೂಣಿ ಕ್ರಮವನ್ನು ಕೈಗೊಂಡಿದೆ. ಇಂಧನ ಲಭ್ಯತೆಯ ಸಮಸ್ಯೆಯನ್ನು ಸೂಕ್ತವಾಗಿ ನಿಭಾಯಿಸುವ ನಿಟ್ಟಿನಲ್ಲಿ ನಮ್ಮ ಯಶಸ್ಸು , ವಿಶ್ವಕ್ಕೆ ಒಂದು ಆಶಾಕಿರಣವಾಗಬಹುದು ಎಂದು ನಾನು ಭಾವಿಸುತ್ತೇನೆ. 

ಜನತೆಗೆ ಸ್ವಚ್ಚ, ಕೈಗೆಟಕುವ ದರದಲ್ಲಿ , ಸಹ್ಯ ಮತ್ತು ಸಮಾನ ಇಂಧನ ಪೂರೈಕೆ ಸಾರ್ವತ್ರಿಕವಾಗಿ ಲಭ್ಯ ಇರಬೇಕು.

ಇಂಧನ ನ್ಯಾಯದ ಆಧಾರದಲ್ಲಿ ಹೊಸ ಶಕೆ ಉದಯಿಸುವುದಕ್ಕೆ ಭಾರತದ ಕಾಣಿಕೆ ಪ್ರಮುಖವಾದುದಾಗಿದೆ.

ಪ್ರಸ್ತುತ , ಭಾರತವು ವಿಶ್ವದಲ್ಲಿಯೇ ಅತ್ಯಂತ ತ್ವರಿತವಾಗಿ ಬೆಳೆಯುತ್ತಿರುವ ಬೃಹತ್ ಆರ್ಥಿಕತೆಯಾಗಿದೆ. ಐ.ಎಂ.ಎಫ್. ಮತ್ತು ವಿಶ್ವ ಬ್ಯಾಂಕಿನಂತಹ  ಪ್ರಮುಖ ಏಜೆನ್ಸಿಗಳು ಬರಲಿರುವ ವರ್ಷಗಳಲ್ಲಿಯೂ ಇಂತಹದೇ ಬೆಳವಣಿಗೆ ಮುಂದುವರಿಯಲಿದೆ ಎಂಬುದನ್ನು ಊಹಿಸಿವೆ. 

ಅನಿಶ್ಚಿತ ಜಾಗತಿಕ ಆರ್ಥಿಕ ಪರಿಸರದಲ್ಲಿ , ಭಾರತವು ವಿಶ್ವದ ಆರ್ಥಿಕತೆಯ ಭಾರೀ ಚೇತರಿಕೆಯನ್ನು ತೋರಿಸಿದೆ.

ಭಾರತವು ಇತ್ತೀಚೆಗೆ ವಿಶ್ವದ ಆರನೇ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಇತ್ತೀಚಿನ ವರದಿಗಳ ಪ್ರಕಾರ ,2030  ವೇಳೆಗೆ ಭಾರತವು ವಿಶ್ವದ ಆರ್ಥಿಕತೆಯ ದ್ವಿತೀಯ ದೊಡ್ಡ ಆರ್ಥಿಕತೆಯಾಗಿ ಮೂಡಿಬರಲಿದೆ.

ವಿಶ್ವದ ಇಂಧನ ಬಳಕೆದಾರರಲ್ಲಿ ನಾವು ಮೂರನೇ ಸ್ಥಾನದಲ್ಲಿದ್ದೇವೆ. ಬೇಡಿಕೆ ಪ್ರಮಾಣ ವಾರ್ಷಿಕವಾಗಿ ಐದು ಪ್ರತಿಶತಕ್ಕೂ ಅಧಿಕ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

2040 ರ ವೇಳೆಗೆ ಇಂಧನ ಬೇಡಿಕೆ ದುಪ್ಪಟ್ಟಿಗಿಂತಲೂ ಅಧಿಕಗೊಳ್ಳುವುದರಿಂದ ಇಂಧನ ಕಂಪೆನಿಗಳಿಗೆ ಭಾರತವು ಆಕರ್ಷಕ ಮಾರುಕಟ್ಟೆಯಾಗಿ ಉಳಿದಿದೆ.

ಇಂಧನ ಯೋಜನೆಗೆ ಸಂಬಂಧಿಸಿ ನಾವು ಸಮಗ್ರ ಧೋರಣೆಯನ್ನು ಅಳವಡಿಸಿಕೊಂಡಿದ್ದೇವೆ. 2016 ರ ಡಿಸೆಂಬರ್ ತಿಂಗಳಲ್ಲಿ ನಡೆದ ಪೆಟ್ರೋಟೆಕ್ ಸಮ್ಮೇಳನದಲ್ಲಿ , ನಾನು ಭಾರತದ ಇಂಧನ ಭವಿಷ್ಯಕ್ಕೆ ಸಂಬಂಧಿಸಿದ ನಾಲ್ಕು ಸ್ತಂಭಗಳ ಬಗ್ಗೆ ಮಾತನಾಡಿದ್ದೆ. ಅವುಗಳೆಂದರೆ – ಇಂಧನ ಲಭ್ಯತೆ, ಇಂಧನ ದಕ್ಷತೆ, ಇಂಧನ ಸಹ್ಯತೆ ಮತ್ತು ಇಂಧನ ಭದ್ರತೆ.

ಸ್ನೇಹಿತರೇ,

ನನಗೆ ಇಂಧನ ನ್ಯಾಯ ಕೂಡಾ ಪ್ರಮುಖ ಉದ್ದೇಶವಾಗಿದೆ. ಮತ್ತು ಅದು ಭಾರತದ ಗರಿಷ್ಟ ಆದ್ಯತೆಯ ವಿಷಯವಾಗಿದೆ. ಈ ನಿಟ್ಟಿನಲ್ಲಿ , ನಾವು ಹಲವು ನೀತಿಗಳನ್ನು ಅಭಿವೃದ್ದಿಪಡಿಸಿ ಅನುಷ್ಟಾನಿಸಿದ್ದೇವೆ. ಈ ಪ್ರಯತ್ನಗಳ ಫಲಿತಾಂಶ ಈಗ ಗೋಚರಿಸುತ್ತಿದೆ.

ವಿದ್ಯುತ್ ನಮ್ಮ ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ತಲುಪಿದೆ.

ಈ ವರ್ಷ ಭಾರತದ ಎಲ್ಲಾ 100 % ಮನೆಗಳಿಗೆ ಗುರಿ ಕೇಂದ್ರಿತ ಸೌಭಾಗ್ಯ ಯೋಜನೆಯ ಮೂಲಕ ವಿದ್ಯುದ್ದೀಕರಣ ಮಾಡುವ ಗುರಿ ಹೊಂದಿದ್ದೇವೆ.

ಉತ್ಪಾದನೆಯನ್ನು ಹೆಚ್ಚಿಸಿದಂತೆ , ನಾವು ಪ್ರಸರಣದಲ್ಲಿ ಮತ್ತು ವಿತರಣೆಯಲ್ಲಿ  ನಷ್ಟದ ಪ್ರಮಾಣವನ್ನು ಕಡಿಮೆ ಮಾಡಲು ಉದ್ದೇಶಿಸಿದ್ದೇವೆ. ನಮ್ಮ ಉದಯ್ ಯೋಜನೆಯಲ್ಲಿ ಈ ಗುರಿ, ಉದ್ದೇಶ ಸಾಧನೆಯ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ.

ವಿದ್ಯುತ್ ಸಂಪರ್ಕ ಪಡೆಯುವುದಕ್ಕೆ ಅನುಕೂಲಕರ ವಾತಾವರಣ ಸಂಬಂಧಿ ವಿಶ್ವ ಬ್ಯಾಂಕ್ ಶ್ರೇಯಾಂಕದಲ್ಲಿ ಭಾರತದ ಸ್ಥಾನ ಮಾನ 2014 ರಲ್ಲಿ 111ರಲ್ಲಿದ್ದುದು 2018 ರಲ್ಲಿ 29 ಕ್ಕೇರಿದೆ.

ಉಜಾಲಾ ಯೋಜನೆ ಅಡಿಯಲ್ಲಿ ದೇಶಾದ್ಯಂತ ಎಲ್.ಇ.ಡಿ. ಬಲ್ಬುಗಳನ್ನು ವಿತರಿಸಲಾಗಿದ್ದು, ಅದರಿಂದ ವಾರ್ಷಿಕ 17,000 ಕೋ.ರೂ.ಗಳ ಉಳಿತಾಯ ಅಂದರೆ 2.5 ಬಿಲಿಯನ್ ಡಾಲರುಗಳ ಉಳಿತಾಯವಾಗಿದೆ.

ಅಡುಗೆಗೆ ಸ್ವಚ್ಚ ಇಂಧನ ಲಭ್ಯತೆ ವಿಶೇಷವಾಗಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪ್ರಮುಖ ಪ್ರಯೋಜನಗಳನ್ನು ಒದಗಿಸಿದೆ. ಅವರನ್ನು ಹೊಗೆ ಮಾಲಿನ್ಯದಿಂದ ಪಾರು ಮಾಡಿದೆ.

ಉಜ್ವಲಾ ಯೋಜನೆ ಅಡಿಯಲ್ಲಿ ಬರೇ ಮೂರು ವರ್ಷಗಳಲ್ಲಿ 64 ಮಿಲಿಯನ್ ಅಂದರೆ 6.4 ಕೋಟಿಗೂ ಅಧಿಕ ಮನೆಗಳಿಗೆ ಎಲ್.ಪಿ.ಜಿ. ಸಂಪರ್ಕವನ್ನು ಒದಗಿಸಲಾಗಿದೆ. ’ನೀಲ ಜ್ವಾಲೆ ಕ್ರಾಂತಿ” ಪ್ರಗತಿಯಲ್ಲಿದೆ. ಎಲ್.ಪಿ.ಜಿ. ವ್ಯಾಪ್ತಿ ಐದು ವರ್ಷಗಳ ಹಿಂದೆ 55 % ಇದ್ದಿತು, ಅದೀಗ 90 % ಗೂ ಅಧಿಕವಾಗಿದೆ.

ಸ್ವಚ್ಚ ಸಾರಿಗೆಗೆ ಹೆಚ್ಚಿನ ಉತ್ತೇಜನ ಲಭಿಸುತ್ತಿದೆ.ನಾವು 2020 ರ ಏಪ್ರಿಲ್ ತಿಂಗಳೊಳಗೆ ನಾವು ಬಿ.ಎಸ್. 4 ರಿಂದ ನೇರವಾಗಿ ಬಿ.ಎಸ್. 6 ಇಂಧನಕ್ಕೆ ನೆಗೆಯಲಿದ್ದೇವೆ. ಇದು ಯುರೋ 6 ಮಾನದಂಡಕ್ಕೆ ಸಮನಾದುದಾಗಿದೆ.

ಶೇಖಡಾ ನೂರು ವಿದ್ಯುದ್ದೀಕರಣದ ಸಾಧನೆ ಮತ್ತು ಎಲ್.ಪಿ.ಜಿ.ವ್ಯಾಪ್ತಿಯ ವಿಸ್ತರಣೆ ಸಾಧ್ಯವಾಗಿರುವುದು ಜನತೆಯ ಪಾಲ್ಗೊಳ್ಳುವಿಕೆಯಿಂದ. ಇಂಧನ ನ್ಯಾಯವನ್ನು ಒದಗಿಸಲು ಸಾಧ್ಯವಾಗುವುದು ಜನತೆ ತಮ್ಮ ಸಾಮೂಹಿಕ ಶಕ್ತಿಯಲ್ಲಿ ನಂಬಿಕೆ ಇಟ್ಟಾಗ ಮಾತ್ರ. ಆ ನಂಬಿಕೆಯನ್ನು ವಾಸ್ತವವನ್ನಾಗಿ ಪರಿವರ್ತಿಸುವಿಕೆಯಲ್ಲಿ ಮಾತ್ರ ಸರಕಾರದ ಪಾತ್ರವಿರುತ್ತದೆ. 

ಕಳೆದ ಐದು ವರ್ಷಗಳಲ್ಲಿ  ಭಾರತದ ತೈಲ ಮತ್ತು ಅನಿಲ ವಲಯದಲ್ಲಿ ಪ್ರಮುಖ ಸುಧಾರಣೆಗಳು ದೃಗೋಚರವಾಗಿವೆ. ನಾವು ನಮ್ಮ ಮೇಲ್ಮಟ್ಟದ ನೀತಿಗಳನ್ನು, ನಿಯಂತ್ರಣ ನಿಯಮಾವಳಿಗಳನ್ನು ಪುನಾರೂಪಿಸಿದ್ದೇವೆ. ನಾವು ಹೈಡ್ರೋಕಾರ್ಬನ್ ಅನ್ವೇಷಣೆ ಮತ್ತು ಲೈಸೆನ್ಸಿಂಗ್ ನೀತಿಯನ್ನು ಈ ವಲಯದಲ್ಲಿ ಪಾರದರ್ಶಕತೆ ಮತ್ತು ಸ್ಪರ್ಧಾತ್ಮಕತೆಯನ್ನು ತರುವುದಕ್ಕಾಗಿ ಆರಂಭಿಸಿದ್ದೇವೆ.

ಹರಾಜು ಮಾನದಂಡಗಳನ್ನು ಆದಾಯ ಹಂಚಿಕೆಗೆ ಬದಲಾಯಿಸಲಾಗಿದೆ. ಇದು ಸರಕಾರದ ಮಧ್ಯಪ್ರವೇಶವನ್ನು ಕಡಿಮೆ ಮಾಡಲು ನೆರವಾಗಿದೆ. ಮುಕ್ತ ಏಕರೇಜ್ ಲೈಸೆನ್ಸಿಂಗ್ ನೀತಿ ಮತ್ತು ರಾಷ್ಟ್ರೀಯ ದತ್ತಾಂಶ ಸಂಗ್ರಹಾಲಯ ಭಾರತೀಯ ಕ್ಷೇತ್ರಗಳಲ್ಲಿ ಅನ್ವೇಷಣೆಯ  ಅಸಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತಿದೆ.

ಅನಿಲ ದರ ಸುಧಾರಣೆಗಳನ್ನೂ ಜಾರಿಗೆ ತರಲಾಗಿದೆ. ಮೇಲ್ದರ್ಜೆಗೇರಿಸಿದ ತೈಲ ಮರುಪಡೆ ನೀತಿ ತೈಲ ಕ್ಷೇತ್ರಗಳ ಉತ್ಪಾದಕತೆಯನ್ನು ಹೆಚ್ಚಿಸುವ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ.

ನಮ್ಮ ಕೆಳ ಹಂತದ ವಲಯವನ್ನು ಸಂಪೂರ್ಣವಾಗಿ ಮುಕ್ತಗೊಳಿಸಲಾಗಿದೆ. ಮಾರುಕಟ್ಟೆ ಚಾಲಿತ ಪೆಟ್ರೋಲ್ ಮತ್ತು ಡೀಸಿಲ್ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಾದ ಬದಲಾವಣೆಯನ್ನು ಪ್ರತಿಫಲಿಸುತ್ತವೆ. ಭಾರತವು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ತೈಲ ಶುದ್ದೀಕರಣ ಸಾಮರ್ಥ್ಯವನ್ನು ಹೊಂದಿರುವ ರಾಷ್ಟ್ರಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇದು 2030 ರ ವೇಳೆಗೆ 200 ಮಿಲಿಯನ್ ಮೆಟ್ರಿಕ್ ಟನ್ ನಷ್ಟು ಬೆಳವಣಿಗೆ ಸಾಧಿಸುವ ಸಾಧ್ಯತೆ ಇದೆ.

ರಾಷ್ಟ್ರೀಯ ಜೈವಿಕ ಇಂಧನ ನೀತಿಯನ್ನು ಕಳೆದ ವರ್ಷ ಜಾರಿಗೆ ತರಲಾಗಿದೆ. ಎರಡನೆ ಮತ್ತು ಮೂರನೇ ತಲೆಮಾರಿನ ಜೈವಿಕ ಇಂಧನ ಸಂಶೋಧನೆಯನ್ನು ಉತ್ತೇಜಿಸಲಾಗುತ್ತಿದೆ. 11 ರಾಜ್ಯಗಳಲ್ಲಿ 12 ಎರಡನೇ ತಲೆಮಾರಿನ ಜೈವಿಕ ಇಂಧನ ಶುದ್ದೀಕರಣಾಗಾರಗಳನ್ನು ಸ್ಥಾಪಿಸಲಾಗುತ್ತಿದೆ. ಎಥೆನಾಲ್ ಮಿಶ್ರಣ ಮತ್ತು ಜೈವಿಕ ಡೀಸಿಲ್ ಕಾರ್ಯಕ್ರಮ ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತಿದೆ ಮತ್ತು ರೈತರ ಆದಾಯವನ್ನು ಹೆಚ್ಚಿಸುತ್ತಿದೆ. ಜೈವಿಕ ವಾಯುಯಾನ ಟರ್ಬೈನ್ ಇಂಧನವನ್ನು ನಮ್ಮ ನಾಗರಿಕ ವಾಯುಯಾನ ವಲಯದಲ್ಲಿ ಈಗಾಗಲೇ ಪ್ರಯೋಗಿಸಲಾಗಿದೆ.

ನಮ್ಮ ಸರಕಾರ ಇಡೀಯ ತೈಲ ಮತ್ತು ಅನಿಲ ಮೌಲ್ಯವರ್ಧನೆ ಸರಪಳಿಯಲ್ಲಿ ಖಾಸಗಿ ಸಹಭಾಗಿತ್ವವನ್ನು ಉತ್ತೇಜಿಸಿದೆ. ಭಾರತವು ವಿದೇಶೀ ಹೂಡಿಕೆಗೆ ಅತ್ಯಾಕರ್ಷಕ ತಾಣವಾಗುತ್ತಿದೆ. ಸೌದಿ ಆರ್ಮ್ಕೋ , ಎ.ಡಿ.ಎನ್.ಒ.ಸಿ., ಟೋಟಲ್, ಎಕ್ಸಾನ್ ಮೊಬೈಲ್, ಬಿ.ಪಿ. ಮತ್ತು ಶೆಲ್ ಗಳು ಮೌಲ್ಯವರ್ಧನೆ ಸರಪಳಿಯಲ್ಲಿ ತಮ್ಮ ಹೂಡಿಕೆಯನ್ನು ಹೆಚ್ಚಿಸಲು ನೋಡುತ್ತಿವೆ.

ಅನಿಲ ಆಧಾರಿತ ಆರ್ಥಿಕತೆಯಲ್ಲಿ ಭಾರತ  ದಾಪುಗಾಲನ್ನಿಡುತ್ತಿದೆ. 16  ಸಾವಿರಕ್ಕೂ ಅಧಿಕ ಕಿಲೋ ಮೀಟರ್ ಉದ್ದದ ಅನಿಲ ಕೊಳವೆ ಮಾರ್ಗವನ್ನು ನಿರ್ಮಿಸಲಾಗಿದೆ. ಮತ್ತು ಇನ್ನು 11 ಸಾವಿರ ಕಿಲೋಮೀಟರುಗಳ ಕೊಳವೆ ಮಾರ್ಗ ನಿರ್ಮಾಣ ಹಂತದಲ್ಲಿದೆ.

ಪೂರ್ವ ಭಾರತದಲ್ಲಿ 3 ಸಾವಿರದ ಇನ್ನೂರು ಕಿಲೋ ಮೀಟರ್ ಅನಿಲ ಕೊಳವೆ ಮಾರ್ಗ ಅನುಷ್ಟಾನ ಆರಂಭಗೊಂಡಿದೆ . ಇದು ಈಶಾನ್ಯ ಭಾರತವನ್ನು ರಾಷ್ಟ್ರೀಯ ಅನಿಲ ಜಾಲದ ಜೊತೆ ಜೋಡಿಸಲಿದೆ.

ಇನ್ನೊಂದು ತಿಂಗಳಲ್ಲಿ ನಗರ ಅನಿಲ ವಿತರಣಾ ವ್ಯವಸ್ಥೆಗೆ ಸಂಬಂಧಿಸಿದ ಹತ್ತನೆ ಸುತ್ತಿನ ಹರಾಜು ಪೂರ್ಣಗೊಳ್ಳಲಿದೆ. ಇದು ನಾಲ್ಕು ನೂರಕ್ಕೂ ಅಧಿಕ ಜಿಲ್ಲೆಗಳನ್ನು ಒಳಗೊಳ್ಳುತ್ತದೆ. ಇದು ನಗರ ಅನಿಲ ವಿತರಣಾ ವ್ಯಾಪ್ತಿಯನ್ನು ನಮ್ಮ ಜನಸಂಖ್ಯೆಯ 70 ಶೇಖಡಾದಷ್ಟು ಪ್ರಮಾಣಕ್ಕೆ ವಿಸ್ತರಿಸಲಿದೆ.

ಕೈಗಾರಿಕಾ 4.0 . ಗೆ ನಾವು ತಯಾರಾಗುತ್ತಿದ್ದೇವೆ. ಹೊಸ ತಂತ್ರಜ್ಞಾನ ಮತ್ತು ಸಂಸ್ಕರಣಾ ವಿಧಾನಗಳೊಂದಿಗೆ ಕೈಗಾರಿಕಾ ಕಾರ್ಯಾಚರಣೆಯನ್ನು ಇದು ಬದಲಾಯಿಸಲಿದೆ. ದಕ್ಷತೆ ಹೆಚ್ಚಳಕ್ಕಾಗಿ, ಸುರಕ್ಷೆ ಹೆಚ್ಚಳಕ್ಕಾಗಿ ಮತ್ತು ಖರ್ಚು ಕಡಿಮೆ ಮಾಡುವುದಕ್ಕಾಗಿ ನಮ್ಮ ಕಂಪೆನಿಗಳು ಅತ್ಯಾಧುನಿಕ ತಂತ್ರಜ್ಞಾನವನ್ನ ಅಳವಡಿಸಿಕೊಳ್ಳುತ್ತಿವೆ.ಇದು ಕೆಳಹಂತದ ಚಿಲ್ಲರೆ ವಲಯದಿಂದ ಹಿಡಿದು ಮೇಲ್ ಸ್ತರದ ತೈಲ ಮತ್ತು ಅನಿಲ ಉತ್ಪಾದನಾ ಕ್ಷೇತ್ರದವರೆಗೆ ಆಸ್ತಿ ನಿರ್ವಹಣೆ ಮತ್ತು ದೂರ ನಿಯಂತ್ರಕ ನಿಗಾ ಮೂಲಕ ಮಾಡಲಾಗುತ್ತಿದೆ.

 ಇತ್ತೀಚಿನ ವರ್ಷಗಳಲ್ಲಿ  ನಾವು, ಅಂತಾರಾಷ್ಟ್ರೀಯ ಇಂಧನ ಏಜೆನ್ಸಿ  ಮತ್ತು ಒ.ಪಿ.ಇ.ಸಿ. ಯಂತಹ ಸಂಘಟನೆಗಳ ಜೊತೆ ಅಂತಾರಾಷ್ಟ್ರೀಯ ಬಾಂಧವ್ಯವನ್ನು ಇನ್ನಷ್ಟು ಆಳಗೊಳಿಸಿಕೊಂಡಿದ್ದೇವೆ. 2016 ರಿಂದ 2018 ರ ವರೆಗೆ ನಾವು ಅಂತಾರಾಷ್ಟ್ರೀಯ ಇಂಧನ ವೇದಿಕೆಯ ಅಧ್ಯಕ್ಷತೆ ವಹಿಸಿಕೊಂಡಿದ್ದೆವು. ನಾವು ನಮ್ಮ ಸಾಂಪ್ರದಾಯಿಕ ಮಾರಾಟಗಾರ – ಖರೀದಿದಾರ ವ್ಯವಸ್ಥೆಯನ್ನು ದ್ವಿಪಕ್ಷೀಯ ಹೂಡಿಕೆಯ ಮೂಲಕ ವ್ಯೂಹಾತ್ಮಕ ಸಹಭಾಗಿತ್ವವನ್ನಾಗಿ ಬದಲಾಯಿಸುವಲ್ಲಿ ಸಮರ್ಥರಾಗಿದ್ದೇವೆ. ನಾವು ನಮ್ಮ “ನೆರೆಹೊರೆಯವರು ಪ್ರಥಮ” ನೀತಿಯನ್ನು ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ್, ಮತ್ತು ಮ್ಯಾನ್ಮಾರ್ ಗಳ ಜೊತೆ ಇಂಧನ ಒಪ್ಪಂದ ಮೂಲಕ ಬಲಪಡಿಸಿಕೊಂಡಿದ್ದೇವೆ.

ತೈಲ ಮತ್ತು ಅನಿಲ ವಲಯದ ಜಾಗತಿಕ ಸಿ.ಇ.ಒ.ಗಳ ಜೊತೆ ನಾನು ನಿಯಮಿತವಾಗಿ ಸಂಪರ್ಕದಲ್ಲಿರುತ್ತೇನೆ. ವಿಶ್ವ ನಾಯಕರು ಮತ್ತು ಸಿ.ಇ.ಒ.ಗಳ ಜೊತೆಗಿನ ನನ್ನ ಸಂವಾದದಲ್ಲಿ ನಾನು ಸದಾ ಹೇಳುತ್ತಿರುತ್ತೇನೆ ಏನೆಂದರೆ, ತೈಲ ಮತ್ತು ಅನಿಲ ವ್ಯಾಪಾರದ ಸರಕು ಮಾತ್ರವಲ್ಲ ಅದು ಆವಶ್ಯಕತೆ ಕೂಡ ಎಂಬುದಾಗಿ. ಅದು ಜನ ಸಾಮಾನ್ಯನ ಅಡುಗೆ ಮನೆಗಿರಲಿ,  ಅಥವಾ ವಿಮಾನಕ್ಕಿರಲಿ,  ಇಂಧನ ಅತ್ಯಾವಶ್ಯಕ.

ಬಹಳ ಧೀರ್ಘ ಕಾಲದಿಂದ ಕಚ್ಚಾ ತೈಲ ಬೆಲೆಗಳು ಭಾರೀ ಏರಿಳಿತಗಳನ್ನು ಕಾಣುತ್ತಿವೆ. ಉತ್ಪಾದಕ ಮತ್ತು ಬಳಕೆದಾರ –ಈ ಇಬ್ಬರ ಹಿತವನ್ನು  ಸಮತೋಲನಗೊಳಿಸುವ ಜವಾಬ್ದಾರಿಯುತ ದರ ನಿಗದಿ ಮಾಡುವುದು ನಮಗೆ ಅವಶ್ಯವಿದೆ. ನಾವು ತೈಲ ಮತ್ತು ಅನಿಲಕ್ಕೆ ಸಂಬಂಧಿಸಿ ಪಾರದರ್ಶಕ ಮತ್ತು ಹೊಂದಾಣಿಕೆಯ ಮಾರುಕಟ್ಟೆಗಳತ್ತ ಸಾಗಬೇಕಾದ ಆವಶ್ಯಕತೆ ಇದೆ. ಆಗ ಮಾತ್ರ ನಾವು ಮಾನವ ಕುಲದ ಇಂಧನ ಆವಶ್ಯಕತೆಗಳನ್ನು ಅತ್ಯುತ್ತಮ ರೀತಿಯಲ್ಲಿ ಪೂರೈಸುವುದಕ್ಕೆ ಸಾಧ್ಯವಾಗಬಹುದು.

ವಿಶ್ವ ಜೊತೆಗೂಡಬೇಕಾದ ಇನ್ನೊಂದು ಪ್ರಮುಖ ವಿಷಯ ಎಂದರೆ ವಾತಾವರಣ ಬದಲಾವಣೆ. ಎಲ್ಲರೂ ಒಟ್ಟಾಗಿ ಪ್ಯಾರಿಸ್ ನ ಸಿ.ಒ.ಪಿ-21 ರಲ್ಲಿ ನಾವು  ನಮಗೆ ವಿಧಿಸಿಕೊಂದ ಗುರಿಗಳನ್ನು ಸಾಧಿಸಬಹುದು. ಸಭೆಯಲ್ಲಿ ವ್ಯಕ್ತಪಡಿಸಿದ ಬದ್ದತೆಗೆ ಅನುಗುಣವಾಗಿ ಭಾರತವು ತ್ವರಿತಗತಿಯ ಸಾಧನೆಗಳನ್ನು ಮಾಡಿದೆ. ಗುರಿ ತಲುಪುವ ಹಾದಿಯಲ್ಲಿ ನಾವಿದ್ದೇವೆ.

ಇಂಧನ ವಲಯದ ಭವಿಷ್ಯಕ್ಕೆ ಸಂಬಂಧಿಸಿ ಪೆಟ್ರೋಟೆಕ್ ಒಂದು ಸೂಕ್ತ ವ್ಯವಸ್ಥೆಯನ್ನು ಒದಗಿಸುತ್ತದೆ. ಜಾಗತಿಕ ಸ್ಥಿತ್ಯಂತರಗಳು, ಪರಿವರ್ತನೆಗಳು, ನೀತಿಗಳು ಮತ್ತು ಹೊಸ ತಂತ್ರಜ್ಞಾನಗಳು ಹೇಗೆ ಮಾರುಕಟ್ಟೆ  ಸ್ಥಿರತೆಯನ್ನು ಪ್ರಭಾವಿಸುತ್ತವೆ ಮತ್ತು ಈ ವಲಯದಲ್ಲಿ ಭವಿಷ್ಯದ ಹೂಡಿಕೆಯನ್ನು ಹೇಗೆ ಪ್ರಭಾವಿಸುತ್ತವೆ ಎಂಬುದನ್ನು ಪ್ರತಿಫಲಿಸಲು ಇದು ಉತ್ತಮ ವೇದಿಕೆ.

ಇದು ನಿಮ್ಮೆಲ್ಲರಿಗೂ ಅತ್ಯಂತ ಯಶಸ್ವೀ ಮತ್ತು ಫಲಪ್ರದ ಸಮ್ಮೇಳನವಾಗಲಿ ಎಂದು ಹಾರೈಸುತ್ತೇನೆ.

ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
From Roots To Rockets: How PM Modi's Mann Ki Baat Captured India's Journey In 2025

Media Coverage

From Roots To Rockets: How PM Modi's Mann Ki Baat Captured India's Journey In 2025
NM on the go

Nm on the go

Always be the first to hear from the PM. Get the App Now!
...
PM Modi expresses concern over reports on Russian President’s Residence
December 30, 2025

Prime Minister Shri Narendra Modi today expressed deep concern over reports regarding the targeting of the residence of the President of the Russian Federation.

Shri Modi underscored that ongoing diplomatic efforts remain the most viable path toward ending hostilities and achieving lasting peace. He urged all concerned parties to remain focused on these efforts and to avoid any actions that could undermine them.

Shri Modi in a post on X wrote:

“Deeply concerned by reports of the targeting of the residence of the President of the Russian Federation. Ongoing diplomatic efforts offer the most viable path toward ending hostilities and achieving peace. We urge all concerned to remain focused on these efforts and to avoid any actions that could undermine them.

@KremlinRussia_E”