ASEAN is central to India's 'Act East' policy: PM Modi
Our engagement is driven by common priorities, bringing peace, stability and prosperity in the region: PM at ASEAN
Enhancing connectivity central to India's partnership with ASEAN: PM Modi
Export of terror, growing radicalisation pose threat to our region: PM Modi at ASEAN summit

ಘನತೆವೆತ್ತ ಪ್ರಧಾನಮಂತ್ರಿ ತಾಂಗಲ್ವೋನ್ ಸಿಸೌಲಿತ್ ಅವರೇ,

ಘನತೆವೆತ್ತರೇ,

ಇದು ನನ್ನ ಮೂರನೇ ಭಾರತ- ಆಸಿಯಾನ್ ಶೃಂಗಸಭೆಯಾಗಿದೆ. ಹಲವು ವರ್ಷಗಳಿಂದ ನಾವು ಆಸಿಯಾನ್ ಜೊತೆಯಲ್ಲಿ ಹೊಂದಿರುವ ಆತ್ಮೀಯ ಬಾಂಧವ್ಯವನ್ನು ನವೀಕರಿಸಲು ನಾನು ಸಂತೋಷಭರಿತನಾಗಿದ್ದೇನೆ. ಅದ್ಭುತವಾದ ಸಿದ್ಧತೆಗಳಿಗಾಗಿ ಮತ್ತು ನಿಮ್ಮ ಆತ್ಮೀಯ ಆಹ್ವಾನಕ್ಕಾಗಿ ನಾನು ಧನ್ಯವಾದಗಳನ್ನು ಅರ್ಪಿಸಲು ಇಚ್ಛಿಸುತ್ತೇನೆ. ಸುಂದರವಾದ ಪಾರಂಪರಿಕ ನಗರಿ ವಿಯೆಂಟಿಯಾನ್ ಭೇಟಿ ನನಗೆ, ಈ ನಗರ ಭಾರತದೊಂದಿಗೆ ಹೊಂದಿರುವ ಆಳವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ನಂಟನ್ನು ನೆನಪಿಸುತ್ತದೆ. ಆಸಿಯಾನ್- ಭಾರತ ಬಾಂಧವ್ಯಕ್ಕೆ ದೇಶದ ಸಂಚಾಲಕನಾಗಿ ವಿಯಟ್ನಾಂನ ಸಮರ್ಥ ನಾಯಕತ್ವಕ್ಕೂ ನಾನು ಅಭಿನಂದನೆ ಸಲ್ಲಿಸುತ್ತೇನೆ.

ಘನತೆವೆತ್ತರೇ

ಆಸಿಯಾನ್ ಜೊತೆಗಿನ ನಮ್ಮ ಕಾರ್ಯಕ್ರಮಗಳು ಪಾರಂಪರಿಕ ನಾಗರಿಕತೆಯ ಹಂಚಿಕೊಂಡ ಆಧಾರದ ಭದ್ರ ಬುನಾದಿಯಷ್ಟೇ ಅಲ್ಲ. ಅದು ನಮ್ಮ ಸಮಾನ ಕಾರ್ಯತಂತ್ರಾತ್ಮಕ ಆದ್ಯತೆಗಳಿಂದ ಸಾಗಿದ್ದು, ನಮ್ಮ ಸಮಾಜವನ್ನು ಕಾಪಾಡುತ್ತಿದೆ ಮತ್ತು ವಲಯದಲ್ಲಿ ಪ್ರಗತಿ, ಸ್ಥಿರತೆ ಮತ್ತು ಶಾಂತಿಯನ್ನು ತರುತ್ತಿದೆ. ಆಸಿಯಾನ್ ಭಾರತದ ಪೂರ್ವದತ್ತ ಕ್ರಮ ನೀತಿಯ ಕೇಂದ್ರವಾಗಿದೆ. ಮತ್ತು ನಮ್ಮ ಬಾಂಧವ್ಯಗಳು ವಲಯದಲ್ಲಿ ಸಮತೋಲನ ಮತ್ತು ಸೌಹಾರ್ದದ ಮೂಲವಾಗಿದೆ.

ಘನತೆವೆತ್ತರೇ,

ನಮ್ಮ ಕಾರ್ಯತಂತ್ರಾತ್ಮಕ ಪಾಲುದಾರಿಕೆಯ ಅಂಶಗಳು ಆಸಿಯಾನ್ ಚಟುವಟಿಕೆಗಳಾದ ಭದ್ರತೆ, ಆರ್ಥಿಕ ಮತ್ತು ಸಾಮಾಜಿಕ-ಸಾಂಸ್ಕೃತಿಕ ಈ ಮೂರೂ ಪ್ರಮುಖ ಭಾಗಗಳನ್ನೂ ಒಳಗೊಂಡಿದೆ. ಮತ್ತು ಆಸಿಯಾನ್ ಭಾರತದ 2016-2020ರ ಅವಧಿಯ ಕ್ರಿಯಾ ಯೋಜನೆಯು ನಮ್ಮ ಉದ್ದೇಶಗಳನ್ನು ಈಡೇರಿಸಲು ಉತ್ತಮವಾಗಿ ನೆರವಾಗಿದೆ. ನಾವು ಈಗಾಗಲೇ ಕ್ರಿಯಾ ಯೋಜನೆಯಲ್ಲಿ ಗುರುತಿಸಲಾದ 130 ಚಟುವಟಿಕೆಗಳ ಪೈಕಿ 54ನ್ನು ಜಾರಿ ಮಾಡಿದ್ದೇವೆ.

ಘನತೆವೆತ್ತರೇ,

ಭೌತಿಕ, ಡಿಜಿಟಲ್, ಆರ್ಥಿಕ, ಸಾಂಸ್ಥಿಕ ಮತ್ತು ಸಾಂಸ್ಕೃತಿಕ- ಹೀಗೆ ತನ್ನ ಎಲ್ಲ ಆಯಾಮಗಳಲ್ಲಿ ಹೆಚ್ಚಿನ ಸಂಪರ್ಕವು ಆಸಿಯಾನ್ ನೊಂದಿಗಿನ ಕಾರ್ಯತಂತ್ರಾತ್ಮಕ ಪಾಲುದಾರಿಕೆಯಲ್ಲಿ ಭಾರತದ ಹೃದಯದಲ್ಲಿದೆ. ಆಸಿಯಾನ್ ರಾಷ್ಟ್ರಗಳೊಂದಿಗೆ ಅದರಲ್ಲೂ ನಮ್ಮ ಕಾರ್ಯಕ್ರಮ ಮುನ್ನಡೆಸುತ್ತಿರುವ ಸಿ.ಎಲ್.ಎಂ.ವಿ. ರಾಷ್ಟ್ರಗಳೊಂದಿಗೆ ನಮ್ಮ ಅಭಿವೃದ್ಧಿಯ ಅನುಭವಗಳನ್ನು ಮತ್ತು ನಮ್ಮ ಆರ್ಥಿಕ ಯಶಸ್ಸಿನ ಕೊಂಡಿಗಳನ್ನು ಹಂಚಿಕೊಳ್ಳಲು ಸಿದ್ಧವಿದೆ.

ಘನತೆವೆತ್ತರೇ,

ಹೆಚ್ಚುತ್ತಿರುವ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಸವಾಲುಗಳನ್ನು ಎದುರಿಸಲು, ರಾಜಕೀಯ-ಭದ್ರತೆ ಸಹಕಾರವು ಹೊರಹೊಮ್ಮುತ್ತಿರುವ ನಮ್ಮ ಬಾಂಧವ್ಯದ ಆಧಾರ ಸ್ತಂಭವಾಗಿದೆ. ಹೆಚ್ಚುತ್ತಿರುವ ಭಯೋತ್ಪಾದನೆಯ ರಫ್ತು, ದ್ವೇಷ ಸಿದ್ಧಾಂತದ ಮೂಲಕ ಬೆಳೆಯುತ್ತಿರುವ ಮೂಲಭೂತವಾದ ಮತ್ತು ವಿಪರೀತ ಹಿಂಸೆಯ ಹರಡುವಿಕೆಗಳು ನಮ್ಮ ಸಮಾಜದಲ್ಲಿ ಸಾಮಾನ್ಯ ಭದ್ರತಾ ಬೆದರಿಕೆಗಳನ್ನು ಬಿಂಬಿಸುತ್ತಿವೆ. ಅದೇ ವೇಳೆ ಈ ಭೀತಿಯು ಪ್ರಾದೇಶಿಕ, ಸ್ಥಳೀಯ ಮತ್ತು ಬಹುರಾಷ್ಟ್ರೀಯವಾಗಿದೆ. ಆಸಿಯಾನ್ ನೊಂದಿಗಿನ ನಮ್ಮ ಪಾಲುದಾರಿಕೆಯು ಸಮನ್ವಯ ಮೇಲೆ ನಿಂತಿರುವ ಅನೇಕ ಹಂತಗಳ ಸಹಕಾರ ಮತ್ತು ಅನುಭವಗಳ ಹಂಚಿಕೆ ಅವಲಂಬಿಸಿದೆ.

ಘನತೆವೆತ್ತರೇ,

ಮುಂದಿನ ವರ್ಷ ನಮ್ಮ ಬಾಂಧವ್ಯ ಐತಿಹಾಸಿಕ ಮೈಲಿಗಲ್ಲಾಗಲಿದೆ. ನಾವು 25ನೇ ವರ್ಷದ ಮಾತುಕತೆಯ ಪಾಲುದಾರಿಕೆ, 15ನೇ ವರ್ಷದ ನಮ್ಮ ಶೃಂಗ ಮಟ್ಟದ ಸಂವಾದ ಮತ್ತು 5 ವರ್ಷಗಳ ನಮ್ಮ ಕಾರ್ಯತಂತ್ರಾತ್ಮಕ ಪಾಲುದಾರಿಕೆಯನ್ನು ಆಚರಿಸಲಿದ್ದೇವೆ,

ಈ ಆಚರಣೆಗೆ 2017ರ ಆಸಿಯಾನ್ – ಭಾರತ ವಿದೇಶಾಂಗ ಸಚಿವರುಗಳ ಸಭೆಯಲ್ಲಿ ಚಾಲನೆ ದೊರಕಲಿದೆ. ನಾವು ಇದರ ಸ್ಮರಣಾರ್ಥ “ವಿನಿಮಯಿತ ಮೌಲ್ಯಗಳು, ಸಮಾನ ಗುರಿಯ ಸ್ಥಾನ’’ ಕುರಿತ ಧ್ಯೇಯದ ಮೇಲೆ ಶೃಂಗಸಭೆ ಆಯೋಜಿಸುತ್ತಿದ್ದೇವೆ. ಇತರ ಆಯೋಜಿತ ಕಾರ್ಯಕ್ರಮಗಳಲ್ಲಿ – ವಾಣಿಜ್ಯ ಶೃಂಗ, ಸಿ.ಇ.ಓ. ವೇದಿಕೆ, ಕಾರು ರಾಲಿ ಮತ್ತು ತೇಲುವ ಯಾತ್ರೆ ಮತ್ತು ಸಾಂಸ್ಕೃತಿಕ ಹಬ್ಬಗಳನ್ನು ಸೇರಿಸಲು ಯೋಜಿಸಲಾಗಿದೆ. ಈ ಸಮಾರಂಭವನ್ನು ಯಶಸ್ವಿಗೊಳಿಸಲು ನಿಮ್ಮೆಲ್ಲರೊಂದಿಗೆ ಒಗ್ಗೂಡಿ ಶ್ರಮಿಸಲು ನಾನು ಎದಿರು ನೋಡುತ್ತಿದ್ದೇನೆ.

ಧನ್ಯವಾದಗಳು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Kashi to Ayodhya to Prayagraj: How Cultural Hubs Have Seen A Rejuvenation Since 2014

Media Coverage

Kashi to Ayodhya to Prayagraj: How Cultural Hubs Have Seen A Rejuvenation Since 2014
NM on the go

Nm on the go

Always be the first to hear from the PM. Get the App Now!
...
Prime Minister condoles the demise of legendary Gujarati singer Purushottam Upadhyay
December 11, 2024

The Prime Minister Shri Narendra Modi condoled the demise of legendary Gujarati singer Purushottam Upadhyay today.

Shri Modi in a post on X wrote:

“ગુજરાતી ભાષાને સુગમ સંગીત થકી વિશ્વભરમાં જીવંત રાખનારા સુપ્રસિદ્ધ સ્વરકાર પુરૂષોત્તમ ઉપાધ્યાયના નિધનના સમાચારથી ઊંડો આઘાત અનુભવું છું. કલા જગત માટે આ એક ન પુરી શકાય તેવી ખોટ છે. તેમના મધુર અવાજમાં સ્વરાંકન સંગીત રચનાઓ હંમેશાં આપણા હૃદયમાં જીવંત રહેશે.

સદ્ગતના આત્માની શાંતિ માટે પ્રાર્થના તથા શોકગ્રસ્ત પરિવારને સાંત્વના...

ૐ શાંતિ 🙏”