ಶೇರ್
 
Comments
‘ವೀರ್‌ ಬಾಲ್‌ ದಿವಸ್‌’ ಘೋಷಣೆಯ ಮೂಲಕ ಚಾರ್‌ ಸಾಹಿಬ್ಜಾದೆ ಅವರನ್ನು ಗೌರವಿಸಿದ್ದಕ್ಕಾಗಿ ಸಿಖ್‌ ಸಮುದಾಯದ ಮುಖಂಡರು ಪ್ರಧಾನ ಮಂತ್ರಿಗಳಿಗೆ ಧನ್ಯವಾದ ಅರ್ಪಿಸಿದರು
ವೀರ್‌ ಬಾಲ್‌ ದಿವಸ್‌’ ದೇಶದ ಮೂಲೆ ಮೂಲೆಯಲ್ಲಿರುವ ಮಕ್ಕಳಿಗೆ ಚಾರ್‌ ಸಾಹಿಬ್ಜಾದೆ ಅವರ ಕೊಡುಗೆ ಮತ್ತು ತ್ಯಾಗದ ಬಗ್ಗೆ ಅರಿವು ಮೂಡಿಸುತ್ತದೆ: ಪ್ರಧಾನಿ
ಸಿಖ್‌ ಸಮುದಾಯದ ಸೇವಾ ಮನೋಭಾವವನ್ನು ಶ್ಲಾಘಿಸಿದ ಪ್ರಧಾನಮಂತ್ರಿ, ಜಗತ್ತಿಗೆ ಅದರ ಬಗ್ಗೆ ಹೆಚ್ಚು ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು
ಸಿಖ್‌ ಸಮುದಾಯದ ಕಲ್ಯಾಣಕ್ಕಾಗಿ ನನ್ನ ಸರ್ಕಾರ ಸಂಪೂರ್ಣ ಬದ್ಧವಾಗಿದೆ: ಪ್ರಧಾನಿ
ಸಿಖ್‌ ಸಮುದಾಯದ ಕಲ್ಯಾಣಕ್ಕಾಗಿ ತೆಗೆದುಕೊಂಡ ನಿರಂತರ ಕ್ರಮಗಳಿಗಾಗಿ ಪ್ರತಿನಿಧಿಗಳು ಪ್ರಧಾನ ಮಂತ್ರಿಗೆ ಧನ್ಯವಾದಗಳನ್ನು ಅರ್ಪಿಸಿದರು; ಜತೆಗೆ ಹೃದಯದಲ್ಲಿಸಿಖ್‌ ಎಂದು ಇದು ತೋರಿಸುತ್ತದೆ ಎಂದು ಅವರು ಹೇಳಿದರು
 
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಜಾನೆ 7 ಲೋಕ ಕಲ್ಯಾಣ ಮಾರ್ಗದಲ್ಲಿದೇಶಾದ್ಯಂತದ ಪ್ರಮುಖ ಸಿಖ್‌ರನ್ನು ಭೇಟಿ ಮಾಡಿದರು. ಸಿಖ್‌ ಸಮುದಾಯದ ಕಲ್ಯಾಣಕ್ಕಾಗಿ ನಿರಂತರವಾಗಿ ಕ್ರಮಗಳನ್ನು ಕೈಗೊಂಡಿದ್ದಕ್ಕಾಗಿ ಮತ್ತು ವಿಶೇಷವಾಗಿ ಡಿಸೆಂಬರ್‌ 26 ಅನ್ನು ವೀರ್‌ ಬಾಲ್‌ ದಿವಸ್‌ ಎಂದು ಘೋಷಿಸುವ ನಿರ್ಧಾರದ ಮೂಲಕ ಚಾರ್‌ ಸಾಹಿಬ್ಜಾದೆ ಅವರನ್ನು ಗೌರವಿಸಿದ್ದಕ್ಕಾಗಿ ನಿಯೋಗವು ಪ್ರಧಾನ ಮಂತ್ರಿಗೆ ಧನ್ಯವಾದಗಳನ್ನು ಅರ್ಪಿಸಿತು. ನಿಯೋಗದ ಪ್ರತಿಯೊಬ್ಬ ಸದಸ್ಯರು ಪ್ರಧಾನಿಯವರಿಗೆ ‘ಸಿರೋಪಾವೊ’ ಮತ್ತು ‘ಸಿರಿ ಸಾಹಿಬ…’ ನೀಡಿ ಗೌರವಿಸಿದರು.

ಚಾರ್‌ ಸಾಹಿಬ್ಜಾದೆ ಅವರ ಕೊಡುಗೆ ಮತ್ತು ತ್ಯಾಗದ ಬಗ್ಗೆ ದೇಶದ ಅನೇಕ ಪ್ರದೇಶಗಳ ಜನರಿಗೆ ತಿಳಿದಿಲ್ಲಎಂದು ಪ್ರಧಾನಿ ಹೇಳಿದರು. ಶಾಲೆಗಳಲ್ಲಿ ಮತ್ತು ಮಕ್ಕಳ ಮುಂದೆ ಮಾತನಾಡಲು ಅವಕಾಶ ಸಿಕ್ಕಾಗಲೆಲ್ಲ ಚಾರ್‌ ಸಾಹಿಬ್ಜಾದೆ ಬಗ್ಗೆ ಮಾತನಾಡುತ್ತಿದ್ದ ಕುರಿತು ಸ್ಮರಿಸಿದರು.

ಡಿಸೆಂಬರ್‌ 26 ರಂದು ವೀರ್‌ ಬಾಲ್‌ ದಿವಸ್‌ ಎಂದು ಆಚರಿಸುವ ನಿರ್ಧಾರವು ದೇಶದ ಮೂಲೆ ಮೂಲೆಗಳಿಂದ ಮಕ್ಕಳಿಗೆ ಅವರ ಬಗ್ಗೆ ಅರಿವು ಮೂಡಿಸುವಲ್ಲಿಬಹಳ ದೂರ ಹೋಗುತ್ತದೆ.

ತಮ್ಮನ್ನು ಭೇಟಿ ಮಾಡಿದ ಸಿಖ್‌ ಸಮುದಾಯದ ನಾಯಕರಿಗೆ ಪ್ರಧಾನಮಂತ್ರಿ ಧನ್ಯವಾದ ಅರ್ಪಿಸಿದರು ಮತ್ತು ತಮ್ಮ ಮನೆಯ ಬಾಗಿಲುಗಳು ಯಾವಾಗಲೂ ತೆರೆದಿರುತ್ತವೆ ಎಂದು ಹೇಳಿದರು. ಅವರು ಪಂಜಾಬ್‌ಲ್ಲಿದ್ದಾಗ ಅವರೊಂದಿಗಿನ ಸಂಪರ್ಕ ಮತ್ತು ಒಟ್ಟಿಗೆ ಕಳೆದ ಸಮಯವನ್ನು ನೆನಪಿಸಿಕೊಂಡರು.

ಪ್ರಧಾನಮಂತ್ರಿ ಅವರು ಸಿಖ್‌ ಸಮುದಾಯದ ಸೇವಾ ಮನೋಭಾವವನ್ನು ಶ್ಲಾಘಿಸಿದರು ಮತ್ತು ಜಗತ್ತಿಗೆ ಇದರ ಬಗ್ಗೆ ಹೆಚ್ಚು ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು. ಸಿಖ್‌ ಸಮುದಾಯದ ಕಲ್ಯಾಣಕ್ಕೆ ತಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು. ಈ ನಿಟ್ಟಿನಲ್ಲಿ ಸರಕಾರ ಕೈಗೊಂಡಿರುವ ಹಲವು ಕ್ರಮಗಳ ಕುರಿತು ಮಾತನಾಡಿದ ಪ್ರಧಾನಿ, ಅಫ್ಘಾನಿಸ್ತಾನದಿಂದ ಗುರು ಗ್ರಂಥ ಸಾಹಿಬ್‌ ಅನ್ನು ಪೂರ್ಣ ಗೌರವದಿಂದ ಮರಳಿ ತರಲು ಮಾಡಲಾದ ವಿಶೇಷ ವ್ಯವಸ್ಥೆಗಳ ಕುರಿತು ಚರ್ಚಿಸಿದರು. ಸಿಖ್‌ ಯಾತ್ರಾರ್ಥಿಗಳಿಗೆ ಕರ್ತಾರ್ಪುರ ಸಾಹಿಬ್‌ ಕಾರಿಡಾರ್‌ ಅನ್ನು ತೆರೆಯಲು ರಾಜತಾಂತ್ರಿಕ ಮಾರ್ಗಗಳ ಮೂಲಕ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆಯೂ ಅವರು ವಿವರಿಸಿದರು.

ವೀರ್‌ ಬಾಲ್‌ ದಿವಸ್‌ ಆಚರಿಸುವ ನಿರ್ಧಾರವು ಚಾರ್‌ ಸಾಹಿಬ್ಜಾದೆ ಅವರ ತ್ಯಾಗದ ಬಗ್ಗೆ ದೇಶಾದ್ಯಂತ ಮಕ್ಕಳಿಗೆ ಅರಿವು ಮೂಡಿಸುತ್ತದೆ ಎಂದು ಶ್ರೀ ಮಂಜಿಂದರ್‌ ಸಿಂಗ್‌ ಸಿರ್ಸಾ ಹೇಳಿದರು. ಸಿಂಗ್‌ ಸಾಹಿಬ್‌ ಗಿಯಾನಿ ರಂಜೀತ್‌ ಸಿಂಗ್‌, ಜತೇದಾರ್‌ ತಖ್ತ್‌ ಶ್ರೀ ಪಾಟ್ನಾ ಸಾಹಿಬ್‌, ಕರ್ತಾರ್ಪುರ ಸಾಹಿಬ್‌ ಕಾರಿಡಾರ್‌ ಅನ್ನು ಪುನಃ ತೆರೆಯುವ ಮತ್ತು ಲಂಗರ್‌ನ ಮೇಲಿನ ಜಿಎಸ್‌ಟಿಯನ್ನು ತೆಗೆದುಹಾಕುವಂತಹ ಕ್ರಮಗಳನ್ನು ಕೈಗೊಂಡಿದ್ದಕ್ಕಾಗಿ ಪ್ರಧಾನ ಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು. ಪ್ರಧಾನಮಂತ್ರಿಯವರು ಸಿಖ್‌ ಸಮುದಾಯಕ್ಕಾಗಿ ತೆಗೆದುಕೊಂಡ ಬಹು ಕ್ರಮಗಳು ಅವರು ಹೃದಯದಲ್ಲಿ ಸಿಖ್‌ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ  ಶ್ರೀ ತರ್ಲೋಚನ್‌ ಸಿಂಗ್‌ ಮಾತನಾಡಿ, ದೇಶ ವಿಭಜನೆಯ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಪ್ರಾಣತ್ಯಾಗ ಮಾಡಿದ ಸಿಖ್‌ ಸಮುದಾಯದ ಕೊಡುಗೆಯನ್ನು ಗುರುತಿಸುತ್ತಿರುವುದು ಸ್ವಾತಂತ್ರ್ಯದ ನಂತರ ಇದೇ ಮೊದಲು. ಸಿಖ್‌ ಸಮುದಾಯದ ಕೊಡುಗೆಯನ್ನು ವಿಶ್ವ ವೇದಿಕೆಗೆ ಕೊಂಡೊಯ್ದಿದ್ದಕ್ಕಾಗಿ ಅವರು ಪ್ರಧಾನಿಗೆ ಧನ್ಯವಾದ ಅರ್ಪಿಸಿದರು.

Explore More
Do things that you enjoy and that is when you will get the maximum outcome: PM Modi at Pariksha Pe Charcha

ಜನಪ್ರಿಯ ಭಾಷಣಗಳು

Do things that you enjoy and that is when you will get the maximum outcome: PM Modi at Pariksha Pe Charcha
PM Modi’s Mother Hiraba Joins ‘Har Ghar Tiranga’ Campaign In Gujarat

Media Coverage

PM Modi’s Mother Hiraba Joins ‘Har Ghar Tiranga’ Campaign In Gujarat
...

Nm on the go

Always be the first to hear from the PM. Get the App Now!
...
PM condoles passing away of noted stock investor Rakesh Jhunjhunwala
August 14, 2022
ಶೇರ್
 
Comments

The Prime Minister, Shri Narendra Modi has expressed deep grief over the passing away of noted stock investor Rakesh Jhunjhunwala.

In a tweet, the Prime Minister said;

"Rakesh Jhunjhunwala was indomitable. Full of life, witty and insightful, he leaves behind an indelible contribution to the financial world. He was also very passionate about India’s progress. His passing away is saddening. My condolences to his family and admirers. Om Shanti."