ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಲೋಕ ಕಲ್ಯಾಣ ಮಾರ್ಗದಲ್ಲಿ ಪಿಎಂಓ ಅಧಿಕಾರಿಗಳು ಮತ್ತು ಎಸ್.ಪಿ.ಜಿ. ಸಿಬ್ಬಂದಿಯನ್ನು ಭೇಟಿ ಮಾಡಿ ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡರು. ಈ ಸಂವಾದದ ವೇಳೆ 1000ಕ್ಕೂ ಹೆಚ್ಚು ಜನರು ಹಾಜರಿದ್ದರು. ಅವರು ಮಾಡಿರುವ ಉತ್ತಮ ಕಾರ್ಯವನ್ನು ಪ್ರಧಾನಿಯವರು ಪ್ರಶಂಸಿಸಿ, ಭವಿಷ್ಯದಲ್ಲೂ ಈ ಪ್ರಯತ್ನ ಮುಂದುವರಿಸುವಂತೆ ಉತ್ತೇಜಿಸಿದರು.





