ಪ್ರಪ್ರಥಮ ಖೋ ಖೋ ವಿಶ್ವಕಪ್ ಗೆದ್ದ ಭಾರತೀಯ ಮಹಿಳಾ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.
ಅವರು ಎಕ್ಸ್ ನ ತಮ್ಮ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:
“ಪ್ರಪ್ರಥಮ ಖೋ ಖೋ ವಿಶ್ವಕಪ್ ಗೆದ್ದ ಭಾರತೀಯ ಮಹಿಳಾ ತಂಡಕ್ಕೆ ಅಭಿನಂದನೆಗಳು! ಅನನ್ಯ ಕೌಶಲ್ಯ, ದೃಢಸಂಕಲ್ಪ ಮತ್ತು ತಂಡವಾಗಿ ಕಾರ್ಯನಿರ್ವಹಿಸಿದ ಪರಿಣಾಮವಾಗಿ ಈ ಐತಿಹಾಸಿಕ ಗೆಲುವು ದೊರೆತಿದೆ.
ಈ ವಿಜಯೋತ್ಸವವು ಭಾರತದ ಅತ್ಯಂತ ಹಳೆಯ ಸಾಂಪ್ರದಾಯಿಕ ಕ್ರೀಡೆಯೊಂದಕ್ಕೆ ಹೆಚ್ಚಿನ ಮಹತ್ವ ತಂದಿದ್ದು, ರಾಷ್ಟ್ರಾದ್ಯಂತದ ಅಸಂಖ್ಯಾತ ಯುವ ಕ್ರೀಡಾಪಟುಗಳಿಗೆ ಪ್ರೇರಣೆ ನೀಡಿದೆ. ಇನ್ನಷ್ಟು ಯುವಕರು ಮುಂದಿನ ದಿನಗಳಲ್ಲಿ ಈ ಕ್ರೀಡೆಯಲ್ಲಿ ತೊಡಗಲು ಈ ಸಾಧನೆಯು ದಾರಿದೀಪವಾಗಲಿ.”
Congratulations to the Indian women’s team on winning the first-ever Kho Kho World Cup! This historic victory is a result of their unparalleled skill, determination and teamwork.
— Narendra Modi (@narendramodi) January 19, 2025
This triumph has brought more spotlight to one of India’s oldest traditional sports, inspiring… pic.twitter.com/5lMftjZB5Z