ಶೇರ್
 
Comments

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಪ್ರಥಮ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಜನರಲ್ ಬಿಪಿನ್ ರಾವತ್ ಅವರನ್ನು ಅಭಿನಂದಿಸಿದರು.

“ಭಾರತದ ಪ್ರಥಮ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರನ್ನಾಗಿ ಜನರಲ್ ಬಿಪಿನ್ ರಾವತ್ ಅವರನ್ನು ಪಡೆದಿದ್ದೇವೆ. ಆ ಮೂಲಕ ನಾವು ಹೊಸ ವರ್ಷವನ್ನು ಮತ್ತು ಹೊಸ ದಶಕವನ್ನು ಹರ್ಷದಿಂದ ಆರಂಭಿಸುತ್ತಿದ್ದೇವೆ. ನಾನು ಅವರನ್ನು ಅಭಿನಂದಿಸುತ್ತೇನೆ ಮತ್ತು ಅವರ ಹೊಸ ಜಬಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲಿ ಎಂದು ಆಶಿಸುತ್ತೇನೆ. ಭಾರತಕ್ಕೆ ಭಾರಿ ಉತ್ಸಾಹದಿಂದ ಸೇವೆ ಸಲ್ಲಿಸಿದ ಅಪ್ರತಿಮ ಅಧಿಕಾರಿ ‘’ಎಂದು ಅವರು ಹೇಳಿದರು.

ಮೊದಲ ಬಾರಿಗೆ ಸಿಡಿಎಸ್ ಅಧಿಕಾರ ವಹಿಸಿಕೊಂಡ ನಂತರ, ನಾನು ನಮ್ಮ ದೇಶಕ್ಕಾಗಿ ಹುತಾತ್ಮರಾದ ಹಾಗೂ ಸೇವೆ ಸಲ್ಲಿಸಿದ ಎಲ್ಲರಿಗೂ ನಮನ ಸಲ್ಲಿಸುತ್ತೇನೆ. ನಾನು ಕಾರ್ಗಿಲ್ ಯುದ್ದದಲ್ಲಿ ಹೋರಾಡಿದ ಧೈರ್ಯಶಾಲಿಗಳನ್ನು ನೆನಪು ಮಾಡಿಕೊಳ್ಳುತ್ತೇನೆ. ಆನಂತರ ದೇಶದಲ್ಲಿ ಮಿಲಿಟರಿ ಸುಧಾರಣೆಗಳ ಕುರಿತು ಸಾಕಷ್ಟು ಚರ್ಚೆಗಳು ನಡೆದವು. ಅದರ ಪರಿಣಾಮ ಇಂದು ಐತಿಹಾಸಿಕ ಬೆಳವಣಿಗೆ ಆಗಿದೆ ಎಂದರು.

2019ರ ಆಗಸ್ಟ್ 15ರಂದು ಕೆಂಪು ಕೋಟೆಯ ಮೇಲೆ ನಾನು ಭಾರತ ಸದ್ಯದಲ್ಲೇ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರನ್ನು ಹೊಂದಲಿದೆ ಎಂದು ಪ್ರಕಟಿಸಿದ್ದೆ. ಈ ಸಂಸ್ಥೆ ನಮ್ಮ ಮಿಲಿಟರಿ ಪಡೆಗಳ ಆಧುನೀಕರಣದಲ್ಲಿ ಮಹತ್ವದ ಜವಾಬ್ದಾರಿಯನ್ನು ಹೊರಲಿದೆ. ಇದು 130 ಕೋಟಿ ಭಾರತೀಯರ ಭರವಸೆ ಮತ್ತು ಆಶೋತ್ತರಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಮಿಲಿಟರಿ ವ್ಯವಹಾರಗಳ ಇಲಾಖೆ ಸೃಷ್ಟಿಸಿ ಅಗತ್ಯ ಪರಿಣಿತಿ ಮತ್ತು ಸಾಂಸ್ಥಿಕ ರೂಪ ನೀಡಿ ಸಿಡಿಎಸ್ ಹುದ್ದೆ ಸೃಷ್ಟಿಸಿರುವುದು ಮಹತ್ವದ ಕ್ರಮವಾಗಿದೆ ಮತ್ತು ಆ ಮೂಲಕ ಆಧುನಿಕ ಯುದ್ದಭೂಮಿಯಲ್ಲಿ ಸದಾ ಬದಲಾಗುತ್ತಿರುವ ಸವಾಲುಗಳನ್ನು ಎದುರಿಸಲು ಸಮಗ್ರ ಸುಧಾರಣೆಗಳನ್ನು ತರಲಾಗುವುದು ನಮ್ಮ ದೇಶಕ್ಕೆ ನೆರವಾಗಲಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು.

20 ವರ್ಷಗಳ ಸೇವಾ ಮತ್ತು ಸಮರ್ಪಣದ 20 ಚಿತ್ರಗಳು
Mann KI Baat Quiz
Explore More
ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಸೈನಿಕರ ಜೊತೆ ದೀಪಾವಳಿ ಆಚರಣೆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರ ಸಂವಾದ

ಜನಪ್ರಿಯ ಭಾಷಣಗಳು

ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಸೈನಿಕರ ಜೊತೆ ದೀಪಾವಳಿ ಆಚರಣೆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರ ಸಂವಾದ
India achieves 40% non-fossil capacity in November

Media Coverage

India achieves 40% non-fossil capacity in November
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 4 ಡಿಸೆಂಬರ್ 2021
December 04, 2021
ಶೇರ್
 
Comments

Nation cheers as we achieve the target of installing 40% non fossil capacity.

India expresses support towards the various initiatives of Modi Govt.