ಪರೋಪಕಾರಿ ಮತ್ತು ಮಾನವತಾವಾದಿ ಬಿಲ್ಕಿಸ್ ಈಧಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಮಾನವೀಯ ಕೆಲಸಕ್ಕಾಗಿ ಈಕೆ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿದ್ದು, ಇವರ ಸೇವೆ ಜಗತ್ತಿನಾದ್ಯಂತ ಮುಟ್ಟಿದೆ ಎಂದು ಹೇಳಿದ್ದಾರೆ.
ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು,
“ಬಲ್ಕಿಸ್ ಈಧಿ ನಿಧನಕ್ಕೆ ನನ್ನ ಪ್ರಾಮಾಣಿಕ ಸಂತಾಪಗಳು. ಮಾನವೀಯ ಕೆಲಸಕ್ಕಾಗಿ ಈಕೆ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿದ್ದು, ಇವರ ಕರ್ತವ್ಯ ಜಗತ್ತಿನಾದ್ಯಂತ ಮುಟ್ಟಿದೆ. ಭಾರತದ ಜನತೆ ಕೂಡ ಈಕೆಯನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ. ಇವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಹೇಳಿದ್ದಾರೆ.
My sincere condolences on the passing of Bilquis Edhi. Her life long dedication to humanitarian work touched the lives of people across the globe. People in India too remember her fondly. May her soul rest in peace.
— Narendra Modi (@narendramodi) April 16, 2022


