A. ಯೋಜನೆಗಳ ಶಂಕುಸ್ಥಾಪನೆ/ಪರಿಶೀಲನೆ

1. ಭಾರತದ ಆರ್ಥಿಕ ನೆರವಿನ, 500 ದಶಲಕ್ಷ ಅಮೆರಿಕನ್ ಡಾಲರ್ ವೆಚ್ಚದ ʻಗ್ರೇಟರ್ ಮಾಲೆ ಸಂಪರ್ಕ ಯೋಜನೆʼಗೆ ಮೊದಲ ಕಾಂಕ್ರೀಟ್ ಸುರಿಯುವ ಮೂಲಕ ಕಾಮಗಾರಿಗೆ ಚಾಲನೆ ನೀಡುವುದು. 

2. ʻಎಕ್ಸಿಮ್ ಬ್ಯಾಂಕ್ ಆಫ್ ಇಂಡಿಯಾʼದಿಂದ 227 ದಶಲಕ್ಷ ಡಾಲರ್ ಹಣಕಾಸು ನೆರವಿನೊಂದಿಗೆ ಹುಲ್ಹುಮಾಲೆಯಲ್ಲಿ ನಿರ್ಮಾಣಗೊಳ್ಳುತ್ತಿರುವ 4,000 ಸಾಮಾಜಿಕ ವಸತಿ ಕಟ್ಟಡಗಳ ಕಾಮಗಾರಿ ಪ್ರಗತಿ ಪರಿಶೀಲನೆ

3. ʻಭಾರತ ಮಾಲ್ಡೀವ್ಸ್ ಅಭಿವೃದ್ಧಿ ಸಹಕಾರʼದ ಅವಲೋಕನ. ಇದರಲ್ಲಿ ಅಡ್ಡು ನಗರದ ರಸ್ತೆಗಳು ಮತ್ತು ಪುನಶ್ಚೇತನ, 34 ದ್ವೀಪಗಳಲ್ಲಿ ನೀರು ಮತ್ತು ನೈರ್ಮಲ್ಯ ಹಾಗೂ ʻಫ್ರೈಡೇ ಮಸೀದಿʼಯ ಪುನರುಜ್ಜೀವನ ಯೋಜನೆಗಳು ಸೇರಿವೆ


B. ವಿನಿಮಯವಾದ ಒಪ್ಪಂದಗಳು/ ತಿಳುವಳಿಕಾ ಒಡಂಬಡಿಕೆಗಳು

1. ಮಾಲ್ಡೀವ್ಸ್‌ನ ಸ್ಥಳೀಯ ಮಂಡಳಿಗಳು ಮತ್ತು ಮಹಿಳಾ ಅಭಿವೃದ್ಧಿ ಸಮಿತಿಯ ಸದಸ್ಯರ ಸಾಮರ್ಥ್ಯ ವರ್ಧನೆ ಮತ್ತು ತರಬೇತಿ ಕುರಿತು ಭಾರತದ ʻಎನ್ಐಆರ್‌ಡಿಪಾರ್‌ʼ ಮತ್ತು ಮಾಲ್ಡೀವ್ಸ್‌ನ ಸ್ಥಳೀಯ ಸರಕಾರಿ ಪ್ರಾಧಿಕಾರದ ನಡುವೆ ಒಡಂಬಡಿಕೆ.


2. ಭಾರತದ ʻಇನ್ಕೋಯಿಸ್ʼ(INCOIS) ಮತ್ತು ಮಾಲ್ಡೀವ್ಸ್‌ನ ಮೀನುಗಾರಿಕಾ ಸಚಿವಾಲಯದ ನಡುವೆ ಸಂಭಾವ್ಯ ಮೀನುಗಾರಿಕಾ ವಲಯ ಮುನ್ಸೂಚನೆ ಸಾಮರ್ಥ್ಯ ವರ್ಧನೆ ಮತ್ತು ದತ್ತಾಂಶ ಹಂಚಿಕೆ ಹಾಗೂ ಸಾಗರ ವಿಜ್ಞಾನ ಸಂಶೋಧನೆಯಲ್ಲಿ ಸಹಯೋಗ ಕುರಿತ ತಿಳುವಳಿಕಾ ಒಡಂಬಡಿಕೆ.


3. ʻಸಿಇಆರ್‌ಟಿ-ಇಂಡಿಯಾʼ ಮತ್ತು ಮಾಲ್ಡೀವ್ಸ್‌ನ ʻಎನ್‌ಸಿಐಟಿʼ ನಡುವೆ ಸೈಬರ್ ಭದ್ರತೆ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ 

4. ಭಾರತದ ʻಎನ್‌ಡಿಎಂಎʼ ಮತ್ತು ಮಾಲ್ಡೀವ್ಸ್‌ನ ʻಎನ್‌ಡಿಎಂಎʼ ನಡುವೆ ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ

5. ಭಾರತದ ʻಎಕ್ಸಿಮ್ ಬ್ಯಾಂಕ್ʼ ಮತ್ತು ಮಾಲ್ಡೀವ್ಸ್‌ನ ಹಣಕಾಸು ಸಚಿವಾಲಯದ ನಡುವೆ ಮಾಲ್ಡೀವ್ಸ್‌ನಲ್ಲಿ ಪೊಲೀಸ್ ಮೂಲಸೌಕರ್ಯಕ್ಕೆ 41 ದಶಲಕ್ಷ ಡಾಲರ್ ಸಾಲ ನೀಡುವ ಒಪ್ಪಂದ

6. ಹುಲ್ಹುಮಾಲೆಯಲ್ಲಿ ಹೆಚ್ಚುವರಿ 2,000 ಸಾಮಾಜಿಕ ವಸತಿ ಕಟ್ಟಡಗಳನ್ನು ನಿರ್ಮಿಸಲು 119 ದಶಲಕ್ಷ ಅಮೆರಿಕನ್ ಡಾಲರ್ ಮೊತ್ತದ ಸಾಲಕ್ಕೆ ಅನುಮೋದನೆ ಕುರಿತು ʻಎಕ್ಸಿಮ್ ಬ್ಯಾಂಕ್ ಆಫ್ ಇಂಡಿಯಾʼ ಮತ್ತು ಮಾಲ್ಡೀವ್ಸ್ ಹಣಕಾಸು ಸಚಿವಾಲಯದ ನಡುವೆ ಬದ್ಧತಾ ಪತ್ರ

C. ಘೋಷಣೆಗಳು

1. ಮಾಲ್ಡೀವ್ಸ್‌ನಲ್ಲಿ ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ಒದಗಿಸಲು 100 ದಶಲಕ್ಷ ಡಾಲರ್ ಹೊಸ ಸಾಲ ವಿಸ್ತರಣೆ

2. ʻಲೈನ್ ಆಫ್ ಕ್ರೆಡಿಟ್ʼ ಅಡಿಯಲ್ಲಿ, 128 ದಶಲಕ್ಷ ಡಾಲರ್ ವೆಚ್ಚದಲ್ಲಿ ಹನಿಮಧೂ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಗೆ ಇಪಿಸಿ ಗುತ್ತಿಗೆ ನೀಡಲು ಅನುಮೋದನೆ

3. ಡಿಪಿಆರ್ ಅನುಮೋದನೆ ಮತ್ತು ಲೈನ್ ಆಫ್ ಕ್ರೆಡಿಟ್ ಅಡಿಯಲ್ಲಿ 324 ದಶಲಕ್ಷ ಅಮೆರಿಕನ್ ಡಾಲರ್ ಗುಲ್ಹಿಫಾಲು ಬಂದರು ಅಭಿವೃದ್ಧಿ ಯೋಜನೆಯ ಟೆಂಡರ್ ಪ್ರಕ್ರಿಯೆಗಳನ್ನು ಪ್ರಾರಂಭಿಸುವುದು

4. ʻಲೈನ್ ಆಫ್ ಕ್ರೆಡಿಟ್ʼಅಡಿಯಲ್ಲಿ 30 ದಶಲಕ್ಷ ಅಮೆರಿಕನ್ ಡಾಲರ್ ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸುವ ಯೋಜನೆಗೆ ಕಾರ್ಯಸಾಧ್ಯತಾ ವರದಿ ಮತ್ತು ದಾಖಲೆಪತ್ರಗಳ ಅನುಮೋದನೆ

5. ಹುಲ್ಹುಮಾಲೆಯಲ್ಲಿ ಹೆಚ್ಚುವರಿ 2,000 ಸಾಮಾಜಿಕ ವಸತಿ ಕಟ್ಟಡಗಳಿಗೆ ʻಎಕ್ಸಿಮ್ ಬ್ಯಾಂಕ್ ಆಫ್ ಇಂಡಿಯಾʼದಿಂದ 119 ದಶಲಕ್ಷ ಡಾಲರ್ ಸಾಲದ ನೆರವು.

6. ಮಾಲ್ಡೀವ್ಸ್‌ನಿಂದ ಭಾರತಕ್ಕೆ ಸುಂಕ ಮುಕ್ತ ಟ್ಯೂನಾ ರಫ್ತಿಗೆ ಅನುಕೂಲ ಕಲ್ಪಿಸುವುದು.

7. ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆಗೆ ಈ ಹಿಂದೆ ಒದಗಿಸಲಾದ ʻಸಿಜಿಎಸ್ ಹುರವೀʼ ಹಡಗಿಗೆ ಬದಲು ಪರ್ಯಾಯ ಹಡಗು ಪೂರೈಕೆ.

8. ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆಗೆ ಎರಡನೇ ʻಲ್ಯಾಂಡಿಂಗ್ ಕ್ರಾಫ್ಟ್ ಅಸಾಲ್ಟ್ʼ(ಎಲ್‌ಸಿಎ) ಪೂರೈಕೆ.

9. ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆಗೆ 24 ಯುಟಿಲಿಟಿ ವಾಹನಗಳನ್ನು ಉಡುಗೊರೆಯಾಗಿ ನೀಡುವುದು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Operation Sagar Bandhu: India provides assistance to restore road connectivity in cyclone-hit Sri Lanka

Media Coverage

Operation Sagar Bandhu: India provides assistance to restore road connectivity in cyclone-hit Sri Lanka
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 5 ಡಿಸೆಂಬರ್ 2025
December 05, 2025

Unbreakable Bonds, Unstoppable Growth: PM Modi's Diplomacy Delivers Jobs, Rails, and Russian Billions