ಭಾರತೀಯ ವಿದೇಶಾಂಗ ಸೇವೆಯ (ಐ.ಎಫ್‌.ಎಸ್) 2023 ಶ್ರೇಣಿಯ ಅಧಿಕಾರಿ ಪ್ರಶಿಕ್ಷಣಾರ್ಥಿಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಇಂದು ಮುಂಜಾನೆ 7, ಲೋಕ ಕಲ್ಯಾಣ್ ಮಾರ್ಗ್‌ ನಲ್ಲಿರುವ ಪ್ರಧಾನಮಂತ್ರಿಯವರ ನಿವಾಸದಲ್ಲಿ ಭೇಟಿ ಮಾಡಿದರು. ಇವರು 15 ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಆಯ್ಕೆ ಆಗಿರುವ 2023 ರ ಶ್ರೇಣಿಯ 36 ಐ.ಎಫ್‌.ಎಸ್ ಅಧಿಕಾರಿ ಪ್ರಶಿಕ್ಷಣಾರ್ಥಿಗಳಾಗಿದ್ದಾರೆ.

ಪ್ರಧಾನ ಮಂತ್ರಿಯವರ ನೇತೃತ್ವದಲ್ಲಿ ವಿದೇಶಾಂಗ ನೀತಿಯ ಯಶಸ್ಸನ್ನು ಅಧಿಕಾರಿ ಪ್ರಶಿಕ್ಷಣಾರ್ಥಿಗಳು ಶ್ಲಾಘಿಸಿದರು ಮತ್ತು ಅವರುಗಳ ಮುಂಬರುವ ಹೊಸ ಕಾರ್ಯ ಯೋಜನೆಗಳಿಗಾಗಿ ಪ್ರಧಾನಮಂತ್ರಿ ಅವರಿಂದ ಸಲಹೆಗಳು ಮತ್ತು ಮಾರ್ಗದರ್ಶನವನ್ನು ಕೋರಿದರು.ದೇಶದ ಸಂಸ್ಕೃತಿಯನ್ನು ಯಾವಾಗಲೂ ತಮ್ಮೊಂದಿಗೆ ಹೆಮ್ಮೆ ಮತ್ತು ಘನತೆಯಿಂದ ಕೊಂಡೊಯ್ಯಬೇಕು ಮತ್ತು ಅವರುಗಳಿಗೆ ಎಲ್ಲಿ ಉದ್ಯೋಗ ನೇಮಕಾತಿ ಮಾಡಿದರೂ ಕೂಡ ಅದನ್ನು ಅತ್ಯುತ್ತಮ ರೀತಿಯಲ್ಲಿ ಪ್ರದರ್ಶಿಸಲು ಪ್ರಯತ್ನಿಸಬೇಕು ಎಂದು ಪ್ರಧಾನಮಂತ್ರಿ ಅವರು ಸಲಹೆ ನೀಡಿದರು. ವೈಯಕ್ತಿಕ ನಡವಳಿಕೆ ಸೇರಿದಂತೆ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ವಸಾಹತುಶಾಹಿ ಮನಸ್ಥಿತಿಯನ್ನು ಹೋಗಲಾಡಿಸುವ ಬಗ್ಗೆ  ಮತ್ತು ಬದಲಾಗಿ ದೇಶದ ಹೆಮ್ಮೆಯ ಪ್ರತಿನಿಧಿಗಳಾಗಿ ತಾವೆಲ್ಲರೂ ತಮ್ಮನ್ನು ತಾವು ಒಯ್ಯುತ್ತೀರಿ ಎಂಬ ಭರವಸೆ ಹೊಂದಿರುವುದಾಗಿ ಪ್ರಧಾನಮಂತ್ರಿ ಅವರು ತಿಳಿಸಿದರು.

ವಿಶ್ವ ವೇದಿಕೆಯಲ್ಲಿ ದೇಶದ ಗ್ರಹಿಕೆ ಹೇಗೆ ಬದಲಾಗುತ್ತಿದೆ ಎಂಬುದನ್ನೂ ಪ್ರಧಾನಮಂತ್ರಿ ಅವರು ಚರ್ಚಿಸಿದರು.  ಈಗ ನಾವು ಪ್ರಪಂಚದೊಂದಿಗೆ ಸಮಾನ ನೆಲೆಯಲ್ಲಿ, ಪರಸ್ಪರ ಗೌರವ ಮತ್ತು ಘನತೆಯಿಂದ ತೊಡಗಿಸಿಕೊಂಡಿದ್ದೇವೆ ಎಂದು ಅವರು ಹೇಳಿದರು.  ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತವು ಕೋವಿಡ್ ಸಾಂಕ್ರಾಮಿಕವನ್ನು ಹೇಗೆ ನಿಭಾಯಿಸಿದೆ ಎಂಬುದರ ಕುರಿತು ಅವರು ವಿವರವಾಗಿ ಮಾತನಾಡಿದರು.  ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ದೇಶದ ಪ್ರಗತಿಯ ಬಗ್ಗೆಯೂ ಪ್ರಧಾನಮಂತ್ರಿ ಅವರು ಪ್ರಸ್ತಾಪಿಸಿದರು.

ಒಂದು ವೇಳೆ ಅವಕಾಶ ಸಿಕ್ಕಿ ವಿದೇಶದಲ್ಲಿ ಉದ್ಯೋಗ ಮಾಡಿದರೆ, ಆದಗ ಅನಿವಾಸಿ ಭಾರತೀಯ ಸಮುದಾಯ ( ಡಯಾಸ್ಪೊರಾ) ದೊಂದಿಗೆ ತಮ್ಮ ಉತ್ತಮ ಸಂಪರ್ಕ -ನಿಶ್ಚಿತಾರ್ಥವನ್ನು ವಿಸ್ತರಿಸಲು ಐ.ಎಫ್‌.ಎಸ್ ಅಧಿಕಾರಿ ಪ್ರಶಿಕ್ಷಣಾರ್ಥಿಗಳಿಗೆ ಪ್ರಧಾನಮಂತ್ರಿ ಅವರು ಸಲಹೆ ನೀಡಿದರು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
During Diplomatic Dinners to Hectic Political Events — Narendra Modi’s Austere Navratri Fasting

Media Coverage

During Diplomatic Dinners to Hectic Political Events — Narendra Modi’s Austere Navratri Fasting
NM on the go

Nm on the go

Always be the first to hear from the PM. Get the App Now!
...
ಸೋಶಿಯಲ್ ಮೀಡಿಯಾ ಕಾರ್ನರ್ 6 ಅಕ್ಟೋಬರ್ 2024
October 06, 2024

PM Modi’s Inclusive Vision for Growth and Prosperity Powering India’s Success Story