’ರೈತರು ಮೊದಲು’ ಎನ್ನುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಗುರಿ. ಕೇಂದ್ರ ಸರ್ಕಾರವಾಗಿರಲಿ ಅಥವಾ ರಾಜ್ಯವಾಗಿರಲಿ, ಬಿಜೆಪಿ ಸರಕಾರಕ್ಕೆ ರೈತರ ಕಲ್ಯಾಣ ಪ್ರಥಮ ಆದ್ಯತೆಯ ವಿಷಯವಾಗಿದೆ. ರೈತನು ಉತ್ತಮ ಇಳುವರಿಯನ್ನು ಪಡೆಯುತ್ತಾನೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಬಲಪಡಿಸುವ ಬಗ್ಗೆ ಗಮನ ಹರಿಸಬೇಕು.
ಯುಪಿಎ ಸರ್ಕಾರದ ಐದು ವರ್ಷದ ಅವಧಿಯಲ್ಲಿ ಕೃಷಿಗಾಗಿ ಅವರ ಬಜೆಟ್ ಹಂಚಿಕೆ ರೂ. 1.21 ಲಕ್ಷ ಕೋಟಿ ಇತ್ತು. ಅದೇ ಮೋದಿ ಸರ್ಕಾರವು ಐದು ವರ್ಷಗಳಲ್ಲಿ ಇದನ್ನು ಭಾಗಷಃ ದುಪ್ಪಟ್ಟುಗೊಳಿಸಿದ್ದು, ಈಗ ರೂ. 2.11 ಲಕ್ಷ ಕೋಟಿಗಳಷ್ಟಿದೆ.
’ಪ್ರತಿ ಹನಿಗೂ ಹೆಚ್ಚು ಬೆಳೆ’ಯನ್ನು ಖಾತ್ರಿಪಡಿಸಲು ಕೃಷಿ ಸಿಂಚಾಯಿ ಯೋಜನೆಯನ್ನು ಮಿಷನ್ ಮೋಡ್ ನಲ್ಲಿ ಜಾರಿಗೆ ತರಲಾಗುತ್ತಿದ್ದು, 2020ರೊಳಗೆ ಬರಗಾಲದ ಭಯ ಮತ್ತು ಬೆದರಿಕೆಗಳು ಗಣನೀಯವಾಗಿ ಕಡಿಮೆಯಾಗುತ್ತದೆ. ಇದು ನೀರಾವರಿ ಮೂಲಗಳನ್ನು ನಿರ್ಮಿಸಲು ಮತ್ತು ಸೂಕ್ಷ್ಮ ಮಟ್ಟದಲ್ಲಿ ಮಳೆನೀರನ್ನು ಬಳಸಲು ಸಹಾಯ ಮಾಡುತ್ತದೆ. ಇದರಿಂದ ಪ್ರತಿ ರೈತರು ತಮ್ಮ ಪ್ರತಿ ಹನಿ ನೀರಿನಿಂದಲೂ ಉತ್ಪಾದಕತೆಯನ್ನು ಹೆಚ್ಚಿಸಬಹುದು. 21 ಫೆಬ್ರವರಿ 2019ರಲ್ಲಿ ಮೋದಿ ಸರ್ಕಾರವು ಪಿಎಂ ಕೃಷಿ ಸಿಂಚಾಯಿ ಯೋಜನೆಯ ಅಡಿಯಲ್ಲಿ 37.49 ಲಕ್ಷ ಹೆಕ್ಟೇರುಗಳಷ್ಟು ಸೂಕ್ಷ್ಮ ನೀರಾವರಿಯನ್ನು, ಹಿಂದೆಂದೂ ಕಂಡಿರದ ರೀತಿಯಲ್ಲಿ ಪೂರ್ಣಗೊಳಿಸಿದೆ. ಪ್ರತೀ ಜಮೀನಿಗೂ ನೀರು ಒದಗಿಸುವ ಉದ್ದೇಶಕ್ಕಾಗಿ ರೂ.50,000 ಕೋಟಿಯನ್ನು ಮೀಸಲಿಡಲಾಗಿದೆ.
ಮಣ್ಣಿನ ಆರೋಗ್ಯದಿಂದ ನೀರಾವರಿ ಸೌಲಭ್ಯಕ್ಕೆ ಬೆಳೆ ರೋಗ ನಿಯಂತ್ರಣಕ್ಕೆ, ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಅಥವಾ ಬೆಳೆಯ ತೀವ್ರತೆಯನ್ನು ಹೆಚ್ಚಿಸಲು ಸಮಗ್ರ ವಿಧಾನವನ್ನು ಮೋದಿ ಸರಕಾರವು ಅಳವಡಿಸಿಕೊಂಡಿದೆ. ಕೃಷಿಯಲ್ಲಿ ಮಣ್ಣಿನ ಆರೋಗ್ಯವು ಮೂಲಭೂತ ಪಾತ್ರ ವಹಿಸುತ್ತದೆ ಎಂದು ಪರಿಗಣಿಸಿ, ಸರ್ಕಾರವು ರೈತರಿಗೆ 18.5 ಕೋಟಿಗೂ ಹೆಚ್ಚು ಮಣ್ಣಿನ ಆರೋಗ್ಯ ಕಾರ್ಡುಗಳನ್ನು ರವಾನಿಸಿದೆ. ಮಣ್ಣಿನ ಆರೋಗ್ಯ ಕಾರ್ಡುಗಳು ರೈತರು ತಮ್ಮ ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯ ಮಾಡಲು ಪೋಷಕಾಂಶಗಳು ಮತ್ತು ರಸಗೊಬ್ಬರಗಳಿಗಾಗಿ ಬೆಳೆ-ನಿರ್ದಿಷ್ಟ ಶಿಫಾರಸುಗಳನ್ನು ಒಯ್ಯುತ್ತವೆ. ಈ ಮಣ್ಣಿನ ಆರೋಗ್ಯ ಕಾರ್ಡುಗಳ ಮೂಲಕ, ರೈತರು ತಮ್ಮ ಮಣ್ಣಿಗೆ ಅಗತ್ಯವಿರುವ ಸರಿಯಾದ ಪೋಷಕಾಂಶಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಖರ್ಚು ಮಾಡುತ್ತಾರೆ. ಅವರು ಮಾಡಬೇಕಾಗಿರುವುದರ ಬಗ್ಗೆ ಕತ್ತಲೆಯಲ್ಲಿರುವ ಬದಲಿಗೆ ರಸಗೊಬ್ಬರದ ಬಳಕೆಯನ್ನು ಸರಳೀಕರಿಸುವಲ್ಲಿ ಮತ್ತು ಉತ್ತಮ ಬೆಳೆಯನ್ನು ಬೆಳೆಯಲು ತಯಾರಾಗಲು ಇದು ಅವರಿಗೆ ಸಹಾಯ ಮಾಡುತ್ತಿದೆ.
ರಸಗೊಬ್ಬರಗಳ ವೆಚ್ಚವನ್ನು ಮತ್ತಷ್ಟು ಕಡಿಮೆ ಮಾಡಲು, ಎಲ್ಲಾ ದೇಶೀಯವಾಗಿ ತಯಾರಿಸಲ್ಪಟ್ಟ ಮತ್ತು ರಫ್ತು ಮಾಡಲಾದ ಯೂರಿಯಾವು ಈಗ ಬೇವು ಲೇಪಿತವಾಗಿದೆ ಮತ್ತು ಮೋದಿ ಸರಕಾರವು 100% ಬೇವು ಲೇಪಿತ ಯೂರಿಯಾವನ್ನು ಪೂರೈಸುವ ಕಾರ್ಯವನ್ನು ಪೂರ್ಣಗೊಳಿಸಿದೆ. ಬೇವು ಲೇಪಿತ ಯೂರಿಯಾವು ಬೆಳೆಗಳಿಗೆ ಹೆಚ್ಚು ಪರಿಣಾಮಕಾರಿಯಾಗಿದೆ ಮತ್ತು ನಿರೀಕ್ಷಿತ ಯೂರಿಯಾ ಸೇವನೆಯ ಸುಮಾರು 10 ಪ್ರತಿಶತವನ್ನು ಕಡಿಮೆ ಮಾಡುತ್ತದೆ. ಇದು ರೈತರಿಗೆ ಕೃಷಿ ವೆಚ್ಚವನ್ನು ಕಡಿಮೆ ಮಾಡುವುದು ಮಾತ್ರವಲ್ಲ, ಮಣ್ಣಿನ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸರ್ಕಾರವು ಬಳಕೆಯಲ್ಲಿಲ್ಲದ ರಸಗೊಬ್ಬರ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸುವ ಮತ್ತು ಹೊಸ ಕಾರ್ಖಾನೆಗಳನ್ನು ಸ್ಥಾಪಿಸುವ ಮೂಲಕ, ದೇಶದಲ್ಲಿ ಯೂರಿಯಾ ಉತ್ಪಾದನೆ ಹೆಚ್ಚಾಗಿದೆ. ಇದು ಯೂರಿಯಾದ ಬಳಕೆಯ ತಿರುವನ್ನು ತೆಗೆದುಹಾಕಿದೆ, ಕೊರತೆಯನ್ನು ಎದುರಿಸದೇ ರೈತರಿಗೆ ಯೂರಿಯಾವನ್ನು ಸುಲಭವಾಗಿ ಪಡೆಯಲು ಸಹಾಯ ಮಾಡುವ ಜೊತೆಗೆ ಕೃಷಿಯನ್ನು ಹೆಚ್ಚು ಪರಿಣಾಮಕಾರಿಯಾಗಿದೆ.
2017-18 ರಲ್ಲಿ ಒಟ್ಟು ದಾಖಲೆಯ 2,848.3 ಲಕ್ಷ ಟನ್ ಧಾನ್ಯ ಉತ್ಪಾದನೆಯೊಂದಿಗೆ (4ನೇ ಉನ್ನತ ಅಂದಾಜಿನ ಪ್ರಕಾರ) ಮೋದಿ ಸರ್ಕಾರವು ತನ್ನ ಸುಧಾರಿತ ನೀತಿಗಳಿಂದ ಕೃಷಿಯ ಎಲ್ಲಾ ಅಂಶಗಳನ್ನೂ ನಿರ್ವಹಿಸಿದೆ.
2009-14ರ ವರೆಗಿನ ಸಂಗ್ರಹಣೆಗೆ ಹೋಲಿಸಿದರೆ 2014ರಿಂದ ಇಂದಿನವರೆಗಿನ ಧಾನ್ಯ ಹಾಗೂ ಎಣ್ಣೆ ಬೀಜಗಳ ಸಂಗ್ರಹಣೆಯು ಸುಮಾರು 13 ಪಟ್ಟು ಹೆಚ್ಚಿದೆ. ಯುಪಿಎ ಯ ಐದು ವರ್ಷಗಳ ಅವಧಿಯ 3,117 ಕೋಟಿ ರೂಪಾಯಿಯ (7.28 ಲಕ್ಷ MT) ಸಂಗ್ರಹಣೆಗೆ ಹೋಲಿಸಿದರೆ ಡಿಸೆಂಬರ್ 4, 2019ರ ಪ್ರಕಾರ NDA ಸರ್ಕಾರವು 44,142 ಕೋಟಿ ರೂಪಾಯಿ ಮೌಲ್ಯದ ಧಾನ್ಯ ಹಾಗೂ ಎಣ್ಣೆಬೀಜಗಳನ್ನು ರೈತರಿಂದ ಸಂಗ್ರಹಿಸಿದೆ (93.97 ಲಕ್ಷ MT). ಇದು 54 ಲಕ್ಷ ರೈತರಿಗೆ ಲಾಭದಾಯಕವಾಗಿದೆ.
ಭಾರತದ ರೈತರ ಶ್ರಮದ ಕೆಲಸ ಮತ್ತು ರೈತರ ಕಲ್ಯಾಣ ಸರ್ಕಾರದ ಸಮಗ್ರ ಗಮನದಿಂದಾಗಿ ದಾಖಲೆಗಳು ವೈಶಿಷ್ಟ್ಯವಾಗಿ ಮಾರ್ಪಟ್ಟಿವೆ.
ಉತ್ಪಾದನಾ ಖರ್ಚಿಗಿಂತ MSP ಯ ಐತಿಹಾಸಿಕ 1.5 ಪಟ್ಟು ಏರಿಕೆಯು ರೈತರ ಆದಾಯವನ್ನು ಹೆಚ್ಚಿಸುವುದಾಗಿ ಸರ್ಕಾರ ನೀಡಿದ್ದ ಮಾತಿಗೆ ಸಾಕ್ಷಿಯಾಗಿದೆ. ಕಬ್ಬು ಬೆಳೆಗಾರರಿಗೆ, ಕ್ವಿಂಟಾಲಿಗೆ ರೂ. 275ರಂತೆ ಕಬ್ಬಿನ MSP ಯನ್ನು 175% ಹೆಚ್ಚಿಸಿದ್ದು ಅವರ ಉತ್ಪನ್ನಕ್ಕೆ ತಕ್ಕ ಬೆಲೆಯನ್ನು ಖಾತ್ರಿಪಡಿಸುತ್ತದೆ. ಇದನ್ನು ಹೊರತುಪಡಿಸಿ, ಕಬ್ಬು ಬೆಳೆಗಾರರ ಬಾಕಿಯನ್ನು ವಜಾಗೊಳಿಸಿರುವ ಸರ್ಕಾರದ ಕ್ರಮವು ಅವರ ಹೊರೆಯನ್ನು ಕಡಿಮೆ ಮಾಡಿದೆ. ಈ ವಲಯಕ್ಕೆ ಸ್ಥಿರತೆಯನ್ನು ತರಲು, ಕಬ್ಬಿನಿಂದ ಇಂಧನವನ್ನು ತಯಾರಿಸಲಾಗುತ್ತಿದೆ. 2013-14 ರಲ್ಲಿ 40 ಕೋಟಿ ಲೀಟರಿನಷ್ಟು ಉತ್ಪಾದನೆಯಾಗುತ್ತಿದ್ದ ಇಥೆನಾಲ್ 2017-18 ರಲ್ಲಿ 140 ಕೋಟಿ ಲೀಟರಿನಷ್ಟು ಉತ್ಪಾದನೆಯಾಗುವ ಮೂಲಕ ದೊಡ್ದ ಜಿಗಿತವನ್ನು ಕಂಡಿದೆ.
ವಿಜ್ಞಾನ, ವೇಗ ಮತ್ತು ಪ್ರಮಾಣವು ಭಾರತದಲ್ಲಿ ಕೃಷಿಯನ್ನು ಪುನಶ್ಚೇತನಗೊಳಿಸುತ್ತಿದೆ. ಮೋದಿ ಸರಕಾರದ ಪ್ರತಿ ಕ್ರಮವೂ ಒಂದಿಲ್ಲೊಂದು ಈ ಅಂಶಗಳನ್ನು ಮಿಶ್ರಣವಾಗಿ ಒಳಗೊಂಡಿದ್ದು, ರೈತರಿಗಾಗಿ ಉತ್ತಮವಾದುದನ್ನು ನೀಡಲು ಬಳಕೆಯಾಗುತ್ತಿದೆ.




