“….. ಭ್ರಷ್ಟಾಚಾರ ಮುಗಿಲು ಮುಟ್ಟಿತ್ತು. ಅಲ್ಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತು. ನೈತಿಕ ಹೊಣೆಹೊತ್ತು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ರಾಜೀನಾಮೆ ನೀಡಿದರು. ರಾಷ್ಟ್ರಪತಿ ಅದನ್ನು ಸ್ವೀಕರಿಸಿದರು…..”

ಭಾರತದ ಇತಿಹಾಸದಲ್ಲಿ 21 ದಿನಗಳ ಕಪ್ಪು ಚುಕ್ಕೆ.. ಕತ್ತಲೆ ದಿನಗಳು ತುರ್ತುಪರಿಸ್ಥಿತಿ ಮೂಲಕ ನಮಗಾಯಿತು.

ಹಲವರು ಮತ್ತು ಹಲವು ಸಂಸ್ಥೆಗಳು ತಮ್ಮ ಸಂಪೂರ್ಣ ಜೀವಿತವನ್ನು ದೇಶಸೇವೆಗಾಗಿ ಅರ್ಪಿಸಲು ಇದು ಪ್ರೇರಣೆಯಾಯಿತು ಮತ್ತು ಹಾಗೆ ಮುಂದುವರಿಯಲು ಬಯಸಿದವು.

ಗುಜರಾತ್ ರಾಜ್ಯ ಮಾತ್ರವಲ್ಲದೆ ಮತ್ತು ದೇಶದ ಇತರ ರಾಜ್ಯಗಳಲ್ಲಿ ಪರಿಸ್ಥಿತಿ ಅಸ್ಥಿರವಾಗಿತ್ತು. ವಿವಿಧಡೆ ಕೋಮು ಜಗಳ ದಂಗೆ ಮುಗಿಲೆದ್ದಿತು. 1967ರಲ್ಲಿ ಶ್ರೀಮತಿ ಇಂದಿರಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ಸ್ ಇಬ್ಬಾಗವಾಯಿತು. ಮೊರಾರ್ಜಿ ದೇಸಾಯಿ ಇನ್ನೊಂದು ಪಂಗಡದ ನಾಯಕರಾಗಿದ್ದರು. 1971ರಲ್ಲಿ ಗಾಂಧಿ ಪುನಃ ಲೋಕಸಭೆಯಲ್ಲಿ 352 ಸ್ಥಾನ ಪಡೆದು ಅಧಿಕಾರ ಪಡೆದರು. ಗುಜರಾತ್ ನಲ್ಲೂ 50%ರಷ್ಟು ಮತಗಳಿಸಿ, ವಿಧಾನಸಭಾ 140 ಸ್ಥಾನ ಪಡೆದು ಅವರ ಪಕ್ಷ ಆಡಳಿತ ಪಡೆಯಿತು.

 

ಇಂದುಲಾಲ್ ಯಾಜ್ಞಿಕ್, ಜಿವರಾಜ್ ಮೆಹ್ತಾ ಮತ್ತು ಬಲ್ವಂತ್ರಾಜ್ ಮೆಹ್ತಾ ಮುಂತಾದವರ ಬಲಿದಾನ , ಮುಂದಿನ ಜನನಾಯಕರ ಹಣದಾಸೆಯ ಅಧಿಕಾರದ ರಾಜಕೀಯದಲ್ಲಿ ಬೆಲೆಕಳೆದುಕೊಂಡಿತು. 1960ರ ಕೊನೆಗೆ ಮತ್ತು 1970 ಅವಧಿಯಲ್ಲಿ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ, ದುರಾಡಳಿತ ಗುಜರಾತ್ ರಾಜ್ಯದಲ್ಲಿ ಅತ್ಯಧಿಕವಾಯಿತು. 1971ರಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿತು, ಮತ್ತು ಕಾಂಗ್ರೇಸ್ ಸರಕಾರ ಬಡತನದಿಂದ ಜನಸಾಮಾನ್ಯರನ್ನು ಮೇಲೆತ್ತುವ ಭರವಸೆ ನೀಡಿತು. ಕಾಂಗ್ರೆಸ್ ಸರಕಾರ ಬಡತನ ಹೊಡೆದೋಡಿಸಿ (ಗರೀಬಿ ಹಠಾವೋ) ಬದಲಾಗಿ ಬಡವರನ್ನು ಹೊಡೆದೋಡಿಸಿ (ಗರೀಬ್ ಹಠಾವೋ) ಎಂದು ತನ್ನ ನಿಲುವು ಬದಲಾಯಿಸಿತು. ಗುಜರಾತಿ ಜನತೆಯ , ಅದರಲ್ಲೂ ಬಡಜನಸಾಮಾನ್ಯರ ಜೀವನ ಆವಶ್ಯಕ ವಸ್ತುಗಳ ಖರೀದಿ ಕೂಡಾ ಸಾಧ್ಯವಾಗದೆ, ಬೆಲೆ ಏರಿಕೆಯಿಂದ ತತ್ತರವಾಯಿತು.

 ಹದಕೆಟ್ಟ ಪರಿಸ್ಥಿತಿಗೆ ಮಹತ್ವ ನೀಡಿ ಉತ್ತಮ ಪರಿಹಾರ ಕಂಡುಕೊಳ್ಳುವ ಬದಲಾಗಿ, ಆಂತರಿಕ ಗೊಂದಲ, ಜಗಳದಲ್ಲಿ ರಾಜಕಾರಣ ಮಾಡುತ್ತಾ ಗುಜರಾತನ್ನು ಅವ್ಯವಸ್ಥೆಯ ಅಧೋಗತಿಗೊಯಿದರು. ಘನಶ್ಯಾಮ ಓಝಾ ಅವರ ಸರಕಾರವನ್ನು  ಬದಲಾಯಿಸಿ ಚಿಮನ್ ಭಾಯಿ ಪಟೇಲ್ ಅವರ ಸರಕಾರ ಆಡಳಿತ ಹಿಡಿಯಿತು. ಆದರೂ ಅತ್ಯಂತ ಕಳಪೆ ಆಡಳಿತದಲ್ಲಿ ಸುಧಾರಣೆಯ ಗಾಳಿ ಗುಜರಾತಿನಿಂದ ದೂರ ಸಾಗಿತು.  1973 ಡಿಸೆಂಬರ್ ನಲ್ಲಿ ಅಸಮಾಧಾನ ಮುಗಿಲು ಮುಟ್ಟಿತು., ಮೋರ್ಬಿ ಎಂಜಿನೀಯರಿಂಗ್ ಕಾಲೇಜು ಕೆಲವು ವಿದ್ಯಾರ್ಥಿಗಳು ಅವರ ಆಹಾರದ ಶುಲ್ಕ ಮಿತಿಮೀರಿದ್ದನ್ನು ಪ್ರತಿಭಟಿಸಿದರು

ಮೊತ್ತಮೊದಲ ಕಾಂಗ್ರೆಸ್ಸೇತರ ಜನತಾ ಮೋರ್ಚ ಸರಕಾರ ಬಾಬುಭಾಯಿ ಪಟೇಲ್ ನೇತೃತ್ವದಲ್ಲಿ ಗುಜರಾತಿನಲ್ಲಿ ಆಡಲಿತ ಹಿಡಿಯಿತು. ಶ್ರೀಮತಿ ಇಂದಿರಾ ಗಾಂಧಿ ತಾನು ಗುಜರಾತಿನ ಮಗಳು ಎಂದು ಹೇಳುತ್ತಾ ಪ್ರತಿಯೊಂದಡೆ ಭಾಷಣಮಾಡ ತೊಡಗಿದರು. ಅಷ್ಟು ಹೀನಾಯ ಪರಿಸ್ಥಿತಿ ಕಾಂಗ್ರೆಸ್ ಪಾಲಾಯಿತುಅಲ್ಲದೆ ಗುಜರಾತ್ ಸರಕಾರ ಸಹಕರಿಸುತ್ತಿಲ್ಲ ಎಂಬ ಆರೋಪ ಮಾಡತೊಡಗಿದರು.

ಗುಜರಾತ್ ಮುಖ್ಯಮಂತ್ರಿ ಬಾಬುಭಾಯಿ ಪಟೇಲ್ ಅವರ ಆಗಸ್ಟ್ 15ರ  ರೇಡಿಯೋ ಭಾಷಣಕ್ಕೆ ಕತ್ತರಿ ಹಾಕಿದರು. ಆಗ ಸಂಪೂರ್ಣವಾಗಿ ದೇಶಸೇವೆಗಾಗಿ ತನ್ನನ್ನು ತಾನೇ ತೊಡಗಿಸಿಕೊಂಡ ಆರ್.ಎಸ್.ಎಸ್. ಪ್ರಚಾರಕ ಜೀವಿತದ ಹಂಗುತೊರೆದು ಪ್ರವಾಹದಲ್ಲಿ ಮುಂದುವರಿದರು, ಅವರೇ ಗುಜರಾತಿನ ನಮ್ಮ ಮುಖ್ಯಮಂತ್ರಿ ಶ್ರೀ ನರೇಂದ್ರ ಮೋದಿ.

ಅಧಿಕಾರ ಹಿಡಿದ ಕೂಡಲೇ ಕಾಂಗ್ರೆಸ್ಸ ಸರಕಾರ ಆರ್.ಎಸ್.ಎಸ್. ಸಂಘಟನೆಯನ್ನು ಬ್ಯಾನ್ ಮಾಡ ಬಯಸಿತು. ಇದರ ನಾಯಕರನ್ನು ವಿವಿಧ ಕೇಸುಗಳನ್ನು ಹೂಡಿ ಬಂಧಿಸಲಾಯಿತು. ವಿದೇಶಿ ಪತ್ರಕರ್ತರಿಗೆ ನಿಷೇಧ ಹೇರಲಾಯಿತು ಅದರಲ್ಲಿ ಬ್ರಟೀಷ್ ಪತ್ರಕರ್ತ ಮಾರ್ಕ್ ಟುಲ್ಲಿ ಒಬ್ಬರು.

ಶ್ರೀ ನರೇಂದ್ರ ಮೋದಿ ಅವರು ನಾವಿನ್ಯತೆ ಬಳಸಿ ಸಂಪರ್ಕ ವ್ಯವಸ್ಥೆ ರೂಪಿಸುತ್ತಿದ್ದರು. ಸಾಹಿತ್ಯ, ಸಂಸ್ಕೃತಿ, ಕಲೆ ಮಾಹಿತಿ ಕಾನೂನು ಅಲ್ಲದೆ ಸಂವಿಧಾನ ಕುರಿತಾಗಿ ವಿವರವಾಗಿ ಬರೆದು ಪ್ರಕಾಶಿಸುತ್ತಿದ್ದರು. ಗುಜರಾತಿನಾಧ್ಯಂತ ಹಂಚುತ್ತಿದ್ದರು. ಆರ್.ಎಸ್.ಎಸ್ಕುರಿತಾಗಿ ಅರಿತ ಹಾಗು ಅದನ್ನು ಬೆಂಬಲಿಸುವ ಜನರನ್ನು ಅರಿಯುವ, ಬೆರೆಸುವ, ಒಗ್ಗೂಡಿಸುವ  ಪ್ರಯತ್ನ ಮಾಡಿದರು.

ಆರ್.ಎಸ್.ಎಸ್.ನ್ನು ಬಗ್ಗು ಬಡಿಯಲು ಇಂದಿರಾ ಗಾಂಧಿ ಹೇಳಿದಾಗ ಮಣಿಭವನದಲ್ಲಿ ರಹಸ್ಯವಾಗಿ ಕಾರ್ಯಕ್ರಮ ಏರ್ಪಡಿಸುತ್ತಿದ್ದರು. ಭೂಗತವಾಗಿ ಕಾರ್ಯಚಟುವಟಿಕೆ ನಡೆಸುತ್ತಿದ್ದರು. ಜಾರ್ಜ್ ಫೆರ್ನಾಂಡೀಸ್ ಸಂಪರ್ಕ ಬೆಳೆಯಿತು. ಇವರ ಪ್ರತಿಭಟನೆಗಳು ಆಂದೋಲನಗಳು, ರಹಸ್ಯ ಕಾರ್ಯಚಟುವಟಿಕೆಗಳು ಇಂದಿರಾ ಗಾಂಧಿ ಕಣ್ಣಿಗೆ ಬಿದ್ದ ಅವರ ಕೋಪಕ್ಕೆ ಗುರಿಯಾದರು. ಜನಸಂಗರ್ಷಸಮಿತಿ ಕಾನೂನು, ನಿಯಮ ಮತ್ತು ಸಂವಿಧಾನದ ಕುರಿತಾಗಿ ಸಾರ್ವಜನಿಕವಾಗಿ ಓದಿ ಹೇಳುವ, ಪ್ರಯತ್ನಗಳು ನಡೆಸಿತು.

ಶ್ರೀ ನರೇಂದ್ರ ಮೋದಿ ಅವರು ಜನರನ್ನು ಸೇರಿಸುವ, ಅವರನ್ನು ಹುರಿದುಂಬಿಸುವ ಪ್ರಯತ್ನ ಮಾಡುತ್ತಿದ್ದರು. ಕಾಂಗ್ರೆಸ್ಸ ತುರ್ತುಪರಿಸ್ಥಿತಿ ಮೂಲಕ ಜನಸಾಮಾನ್ಯರ ಸ್ವಾತಂತ್ರ್ಯವನ್ನು ಹರಣಮಾಡಿತು. ತುರ್ತುಪರಿಸ್ಥಿಯ ವಿರುದ್ದ ಮೋದಿ ಅವರು ಸಾದ್ನ ಅನ್ನವ ಮ್ಯಾಗಜೀನ್ ನಲ್ಲಿ ಲೇಖನ ಪ್ರಕಟಿಸುವ ಮೂಲಕ ಜನಾಂದೋಲನ ಕೈಗೊಳ್ಳುತ್ತಿದ್ದರು.

ತುರ್ತುಪರಿಸ್ಥಿತಿಯಲ್ಲಿ  ಇಂದಿರಾ ಸರಕಾರದ ವಿರುದ್ದ ಪ್ರಚಾರಕರಿಗೆ ಮಾತ್ರವಲ್ಲದೆ ಇತರ ಜನನಾಯಕರುಗಳಿಗೆಲ್ಲ ಒಬ್ಬರಿಗೊಬ್ಬರು ಸಂಪರ್ಕ ಬೆಳೆಸಲು ನರೇಂದ್ರ ಭಾಯಿ ಕೊಂಡಿಯಾಗಿದ್ದರು. ಇವರು ಮುಕ್ತಿಜ್ಯೋತಿ ಯಾತ್ರಾ ನಡೆಸಿದರು. ಸೈಕಲು ಯಾತ್ರೆ ನಡೆಸಿದರು. ವಲ್ಲಭ ಭಾಯಿ ಪಟೇಲ್ ಅವರ ಮಗಳು ಶ್ರೀಮತಿ ಮಣಿಬೇನ್ ಪಟೇಲ್ ಉದ್ಘಾಟಿಸಿದರು. ಪತ್ರಕರ್ತ ಎಮ್. ವಿ . ಕಾಮತ್ ತಮ್ಮ ಶ್ರೀ ನರೇಂದ್ರ ಮೋದಿ ಅವರ ಬಗ್ಗೆ ಬರೆದ ಪುಸ್ತಕದಲ್ಲಿ ಈ ರೀತಿ ಹೇಳುತ್ತಾರೆ ತುರ್ತುಪರಿಸ್ಥಿತಿಯಲ್ಲಿ ಜನರು ಮೋದಿ ಅವರ ಕೌಶಲ್ಯತೆ ಅರಿತರು. ನಿಸ್ವಾರ್ಥ ಪ್ರಚಾರಕರಾಗಿ ಸಂಘಟನಾ ಶಕ್ತಿಯಿಂದ ಸಮಸ್ಯೆಗಳನ್ನು ಸುಲಭವಾಗಿ ಪರಿಹಿಸುವ ಕಲೆ ಇವರಲ್ಲಿ ಕರಗತವಾಗಿತ್ತು.

ಕಾಮತ್ ಅವರು ಹೇಳಿದಂತೆ, ನರೇಂದ್ರ ಭಾಯಿ ಅವರು ಪ್ರಚಾರಕರಿಗೆ ಕೇವಲ ಆರ್ಥಿಕ ಬೆಂಬಲ ಒದಗಿಸಿದರು, ಅಲ್ಲದೆ ವಿದೇಶಗಳಲ್ಲಿ ವಾಸವಿದ್ದ ಭಾರತೀಯರನ್ನೂ ಜೊತೆಗೂಡಿಸಿದರು. ಇಂದು ನಾವು ಅವರ ಉತ್ತಮ ಆಡಳಿತದ ಸವಿ ಉಂಡಿದ್ದೇವೆ. ಇದಕ್ಕೆ ತುರ್ತುಪರಿಸ್ಥಿತಿಯಲ್ಲಿ ಕಾರ್ಯಕರ್ತರಾಗಿ ಅವರು ಅನುಭವಿಸಿದ್ದ ಸೆರೆಮನೆ ವಾಸ ಕೂಡಾ ಕಾರಣ ಅನ್ನಬಹುದು.

ಇಂದು ದೇಶ ಒತ್ತಡದಲ್ಲಿದೆ, ತುರ್ತುಪರಿಸ್ಥಿತ ರೀತಿಯ ವಾತಾವರಣವಿದೆ. ಭ್ರಷ್ಟ ಕಾಂಗ್ರೆಸ್ಸ್ ಆಡಲಿತ ಕೊನೆಗೊಳಿಸಲು ಗುಜರಾತ್ ಮತ್ತು ರಾಷ್ಟ್ರದಲ್ಲಿ ಜನರು ಶ್ರೀ ನರೇಂದರ ಮೋದಿ ಅವರ ನವನಿರ್ಮಾಣ ಆಂದೋಲನವನ್ನು ಬಯಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಇದು ಸಾಧ್ಯವಾಗಲಿ ಎಂದು ಹಾರೈಸುತ್ತೇನೆ…

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s medical education boom: Number of colleges doubles, MBBS seats surge by 130%

Media Coverage

India’s medical education boom: Number of colleges doubles, MBBS seats surge by 130%
NM on the go

Nm on the go

Always be the first to hear from the PM. Get the App Now!
...
ಪ್ರಧಾನಿ ಮೋದಿಯವರಿಂದ ಹೃದಯ ಸ್ಪರ್ಶಿ ಪತ್ರ
December 03, 2024

ದಿವ್ಯಾಂಗ್ ಕಲಾವಿದೆ ದಿಯಾ ಗೋಸಾಯಿ ಅವರಿಗೆ, ಸೃಜನಶೀಲತೆಯ ಒಂದು ಕ್ಷಣವು ಜೀವನವನ್ನು ಬದಲಾಯಿಸುವ ಅನುಭವವಾಗಿ ಮಾರ್ಪಟ್ಟಿತು. ಅಕ್ಟೋಬರ್ 29 ರಂದು ಪ್ರಧಾನಿ ಮೋದಿಯವರ ವಡೋದರಾ ರೋಡ್‌ಶೋ ಸಮಯದಲ್ಲಿ, ಅವರು ತಮ್ಮ ರೇಖಾಚಿತ್ರಗಳನ್ನು ಪ್ರಸ್ತುತಪಡಿಸಿದರು ಮತ್ತು ಎಚ್.ಇ. ಶ್ರೀ ಪೆಡ್ರೊ ಸ್ಯಾಂಚೆಜ್, ಸ್ಪೇನ್ ಸರ್ಕಾರದ ಅಧ್ಯಕ್ಷ. ಇಬ್ಬರೂ ನಾಯಕರು ಅವಳ ಹೃತ್ಪೂರ್ವಕ ಉಡುಗೊರೆಯನ್ನು ವೈಯಕ್ತಿಕವಾಗಿ ಸ್ವೀಕರಿಸಲು ಮುಂದಾದರು, ಅವಳನ್ನು ಸಂತೋಷಪಡಿಸಿದರು.

ವಾರಗಳ ನಂತರ, ನವೆಂಬರ್ 6 ರಂದು, ದಿಯಾ ಅವರ ಕಲಾಕೃತಿಯನ್ನು ಶ್ಲಾಘಿಸಿ ಮತ್ತು ಶ್ರೀ ಸ್ಯಾಂಚೆಜ್ ಅದನ್ನು ಮೆಚ್ಚಿದರು. "ವಿಕಸಿತ್ ಭಾರತ್" ನಿರ್ಮಾಣದಲ್ಲಿ ಯುವಕರ ಪಾತ್ರದಲ್ಲಿ ನಂಬಿಕೆಯನ್ನು ವ್ಯಕ್ತಪಡಿಸುವ ಮೂಲಕ ಸಮರ್ಪಣಾ ಭಾವದಿಂದ ಲಲಿತಕಲೆಗಳನ್ನು ಮುಂದುವರಿಸಲು ಪ್ರಧಾನಿ ಮೋದಿ ಅವರನ್ನು ಪ್ರೋತ್ಸಾಹಿಸಿದರು. ಅವರು ತಮ್ಮ ವೈಯಕ್ತಿಕ ಸ್ಪರ್ಶವನ್ನು ಪ್ರದರ್ಶಿಸುವ ಮೂಲಕ ಅವರ ಕುಟುಂಬಕ್ಕೆ ಬೆಚ್ಚಗಿನ ದೀಪಾವಳಿ ಮತ್ತು ಹೊಸ ವರ್ಷದ ಶುಭಾಶಯಗಳನ್ನು ನೀಡಿದರು.

ಸಂತೋಷದಿಂದ ಮುಳುಗಿದ ದಿಯಾ ತನ್ನ ಹೆತ್ತವರಿಗೆ ಪತ್ರವನ್ನು ಓದಿದರು, ಅವರು ಕುಟುಂಬಕ್ಕೆ ಅಪಾರ ಗೌರವವನ್ನು ತಂದರು ಎಂದು ಹರ್ಷ ವ್ಯಕ್ತಪಡಿಸಿದರು. "ನಮ್ಮ ದೇಶದ ಚಿಕ್ಕ ಭಾಗವಾಗಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ. ಮೋದಿ ಜೀ, ನನಗೆ ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನೀಡಿದ್ದಕ್ಕಾಗಿ ಧನ್ಯವಾದಗಳು" ಎಂದು ದಿಯಾ ಹೇಳಿದರು, ಪ್ರಧಾನಿಯವರ ಪತ್ರವನ್ನು ಸ್ವೀಕರಿಸುವುದು ಜೀವನದಲ್ಲಿ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಸಬಲೀಕರಣಗೊಳ್ಳಲು ಆಳವಾಗಿ ಪ್ರೇರೇಪಿಸಿತು. ಇತರರು ಅದೇ ರೀತಿ ಮಾಡಲು.

ದಿವ್ಯಾಂಗರನ್ನು ಸಬಲೀಕರಣಗೊಳಿಸುವ ಮತ್ತು ಅವರ ಕೊಡುಗೆಗಳನ್ನು ಗುರುತಿಸುವ ಅವರ ಬದ್ಧತೆಯನ್ನು ಪಿಎಂ ಮೋದಿಯವರ ಇಂಗಿತ ಪ್ರತಿಬಿಂಬಿಸುತ್ತದೆ. ಸುಗಮ್ಯ ಭಾರತ್ ಅಭಿಯಾನದಂತಹ ಹಲವಾರು ಉಪಕ್ರಮಗಳಿಂದ ದಿಯಾ ಅವರಂತಹ ವೈಯಕ್ತಿಕ ಸಂಪರ್ಕಗಳವರೆಗೆ, ಅವರು ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಪ್ರತಿಯೊಂದು ಪ್ರಯತ್ನವೂ ಮುಖ್ಯವೆಂದು ಸಾಬೀತುಪಡಿಸುವ ಮೂಲಕ ಸ್ಫೂರ್ತಿ ಮತ್ತು ಉನ್ನತಿಯನ್ನು ಮುಂದುವರೆಸಿದ್ದಾರೆ.