ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಇಂದು 2025-26ನೇ ಹಣಕಾಸು ವರ್ಷಕ್ಕೆ ಮಾರ್ಪಡಿಸಿದ ಬಡ್ಡಿ ಸಹಾಯಧನ ಯೋಜನೆ (ಎಂ.ಐ.ಎಸ್.ಎಸ್.) ಅಡಿಯಲ್ಲಿ ಬಡ್ಡಿಸಹಾಯಧನ (ಐ.ಎಸ್.)ವನ್ನು ಮುಂದುವರಿಸಲು ಅನುಮೋದನೆ ನೀಡಿತು ಮತ್ತು ಅಗತ್ಯವಿರುವ ಸಹಾಯನಿಧಿ ವ್ಯವಸ್ಥೆಗಳನ್ನು ಅನುಮೋದಿಸಿತು.

ಎಂ.ಐ.ಎಸ್.ಎಸ್ ಎಂದರೆ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆ.ಸಿ.ಸಿ.)ಮೂಲಕ ರೈತರಿಗೆ ಕೈಗೆಟುಕುವ ಬಡ್ಡಿದರದಲ್ಲಿ ಅಲ್ಪಾವಧಿಯ ಸಾಲದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವ ಕೇಂದ್ರ ವಲಯದ ಯೋಜನೆಯಾಗಿದೆ.  ಈ ಯೋಜನೆಯಡಿಯಲ್ಲಿ:

  • ರೈತರು 7% ಸಬ್ಸಿಡಿ ಬಡ್ಡಿದರದಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ಗಳ (ಕೆ.ಸಿ.ಸಿ.) ಮೂಲಕ ರೂ.3 ಲಕ್ಷದವರೆಗೆ ಅಲ್ಪಾವಧಿಯ ಸಾಲವನ್ನು ಪಡೆಯುತ್ತಾರೆ ಮತ್ತು  ಅರ್ಹ ಸಾಲ ನೀಡುವ ಸಂಸ್ಥೆಗಳಿಗೆ 1.5% ಬಡ್ಡಿ ಸಹಾಯಧನವನ್ನು ನೀಡಲಾಗುತ್ತದೆ .
  • ಹೆಚ್ಚುವರಿಯಾಗಿ, ಸಾಲಗಳನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸುವ ರೈತರು 3% ವರೆಗಿನ ಪ್ರೋತ್ಸಾಹ ಧನಕ್ಕೆ ಅರ್ಹರಾಗುತ್ತಾರೆ, ಇದು ಕೆ.ಸಿ.ಸಿ ಸಾಲಗಳ ಮೇಲಿನ ಬಡ್ಡಿದರವನ್ನು 4% ಕ್ಕೆ ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ.
  • ಪಶುಸಂಗೋಪನೆ ಅಥವಾ ಮೀನುಗಾರಿಕೆಗಾಗಿ ಪ್ರತ್ಯೇಕವಾಗಿ ತೆಗೆದುಕೊಂಡ ಸಾಲಗಳಿಗೆ, ಬಡ್ಡಿಯ ಸೌಲಭ್ಯವು ರೂ.2 ಲಕ್ಷದವರೆಗೆ ಅನ್ವಯಿಸುತ್ತದೆ.

ಯೋಜನೆಯ ರಚನೆ ಅಥವಾ ಇತರ ಅಂಶಗಳಲ್ಲಿ ಯಾವುದೇ ಬದಲಾವಣೆಗಳನ್ನು ಪ್ರಸ್ತಾಪವು ಆಗಿಲ್ಲ.

ದೇಶದಲ್ಲಿ 7.75 ಕೋಟಿಗೂ ಹೆಚ್ಚು ಕೆಸಿಸಿ ಖಾತೆಗಳಿವೆ. ಈ ಬೆಂಬಲದ ಮುಂದುವರಿಕೆ ಕೃಷಿಗೆ ಸಾಂಸ್ಥಿಕ ಸಾಲದ ಹರಿವನ್ನು ಉಳಿಸಿಕೊಳ್ಳಲು  ಬಹು ಮುಖ್ಯವಾಗಿದೆ, ಇದು ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಸಣ್ಣ ಮತ್ತು ಅತಿ ಸಣ್ಣ ರೈತರು ಆರ್ಥಿಕವಾಗಿ ಒಳಗೊಳ್ಳುವುದನ್ನು  ಖಚಿತಪಡಿಸಿಕೊಳ್ಳಲು ಅತ್ಯಗತ್ಯವಾಗಿದೆ.

ಕೃಷಿ ಸಾಲದ ಪ್ರಮುಖ ಮುಖ್ಯಾಂಶಗಳು:

  • ಕೆಸಿಸಿ ಮೂಲಕ ಸಾಂಸ್ಥಿಕ ಸಾಲ ವಿತರಣೆಯು 2014 ರಲ್ಲಿ ರೂ.4.26 ಲಕ್ಷ ಕೋಟಿಯಿಂದ  ಡಿಸೆಂಬರ್ 2024 ರ ವೇಳೆಗೆ 10.05 ಲಕ್ಷ ಕೋಟಿ ರೂಪಾಯಿಯಷ್ಟು ಹೆಚ್ಚಾಗಿದೆ.
  • ಒಟ್ಟಾರೆ ಕೃಷಿ ಸಾಲದ ಹರಿವು ಕೂಡ  2013-14 ರ ಹಣಕಾಸು ವರ್ಷದಲ್ಲಿ ರೂ.7.3 ಲಕ್ಷ ಕೋಟಿಗಳಿಂದ 2023-24 ರ ಹಣಕಾಸು ವರ್ಷದಲ್ಲಿ ರೂ.25.49 ಲಕ್ಷ ಕೋಟಿಗೆ ಏರಿತು.
  • ಆಗಸ್ಟ್ 2023ರಲ್ಲಿ ಆರಂಭಿಸಿದ ಕಿಸಾನ್ ರಿನ್ ಪೋರ್ಟಲ್ (ಕೆ.ಆರ್.ಪಿ.) ನಂತಹ ಡಿಜಿಟಲ್ ಸುಧಾರಣೆಗಳು ಕ್ಲೇಮ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಿವೆ.

ಪ್ರಸ್ತುತ ಸಾಲ ವೆಚ್ಚದ ಪ್ರವೃತ್ತಿಗಳು, ಸರಾಸರಿ ಎಂ.ಸಿ.ಎಲ್.ಆರ್. ಮತ್ತು ರೆಪೊ ದರ ಚಲನೆಗಳನ್ನು ಗಮನಿಸಿದರೆ, ಬಡ್ಡಿ ಸಹಾಯಧನದ ದರವನ್ನು 1.5% ನಲ್ಲಿ ಕಾಯ್ದುಕೊಳ್ಳುವುದು ಗ್ರಾಮೀಣ ಮತ್ತು ಸಹಕಾರಿ ಬ್ಯಾಂಕುಗಳನ್ನು ಬೆಂಬಲಿಸಲು ಹಾಗು ರೈತರಿಗೆ ಕಡಿಮೆ ವೆಚ್ಚದ ಸಾಲಕ್ಕೆ ನಿರಂತರ ಸುಲಭಲಭ್ಯತೆಯನ್ನು   ಖಚಿತಪಡಿಸಿಕೊಳ್ಳಲು ಅತ್ಯಗತ್ಯವಾಗಿದೆ.

ಕೇಂದ್ರ ಸಚಿವ ಸಂಪುಟದ ನಿರ್ಧಾರವು ರೈತರ ಆದಾಯವನ್ನು ದ್ವಿಗುಣಗೊಳಿಸಲು, ಗ್ರಾಮೀಣ ಸಾಲ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಹಾಗು ಸಕಾಲಿಕ ಮತ್ತು ಕೈಗೆಟುಕುವ ಸಾಲ ಸುಲಭಲಭ್ಯತೆಯ ಮೂಲಕ ಕೃಷಿ ಬೆಳವಣಿಗೆಯನ್ನು ಹೆಚ್ಚಿಸಲು ಸರ್ಕಾರದ ಅಚಲ ಬದ್ಧತೆಯನ್ನು ಬಲಪಡಿಸುತ್ತದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Republic Day sales see fastest growth in five years on GST cuts, wedding demand

Media Coverage

Republic Day sales see fastest growth in five years on GST cuts, wedding demand
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 27 ಜನವರಿ 2026
January 27, 2026

India Rising: Historic EU Ties, Modern Infrastructure, and Empowered Citizens Mark PM Modi's Vision