Cabinet approves continuation of the National Health Mission – w.e.f. 1st April 2017 to 31st March 2020 with a budgetary support of Rs. 85,217 crore as Central Share
Cabinet approves continuation of the Prime Minister’s Development Package for Jammu & Kashmir 2015

ಪ್ರಧಾನಿ ನರೇಂಧ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಆರೋಗ್ಯ ಮೂಲಸೌಕರ್ಯಕ್ಕೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್(ಎನ್‍ಹೆಚ್‍ಎಂ)ನ್ನು ಏಪ್ರಿಲ್ 1,2017ರಿಂದ 31-03-2020ರವರೆಗೆ ಮುಂದುವರಿಕೆಗೆ ಸಮ್ಮತಿ ನೀಡಿದ್ದು, ಈ ಅವಧಿಯಲ್ಲಿ ಕೇಂದ್ರದ ಪಾಲು ಎಂದು 85,217 ಕೋಟಿ ರೂ. ಬಜೆಟ್ ಬೆಂಬಲ ನೀಡಲು ನಿರ್ಧರಿಸ ಲಾಯಿತು.

 

ಇದೇ ವೇಳೆ ಸಂಪುಟ ಸಭೆಯು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಧಾನಿಯವರ ಅಭಿವೃದ್ಧಿ ಪ್ಯಾಕೇಜ್ 2015ನ್ನು ಮುಂದುವರಿಸಲು ನಿರ್ಧರಿಸಿದ್ದು, “ಜಿಲ್ಲಾ ಆಸ್ಪತ್ರೆ, ಉಪ ಜಿಲ್ಲಾಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಐದು ವರ್ಷ ಕಾಲ’ ಏಪ್ರಿಲ್ 1, 2017ರಿಂದ 31 ಮಾರ್ಚ್ 2020ರವರೆಗೆ 625.20 ಕೋಟಿ ರೂ ಬಜೆಟ್ ಬೆಂಬಲ ನೀಡಲು ನಿರ್ಧರಿಸಿತು. ಇದು ಸಂಪೂರ್ಣ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯಾಗಿದೆ.

 

ಪ್ರಮುಖ ಅಂಶಗಳು:

  1. ಯುಹೆಚ್‍ಸಿ(ಸಾರ್ವತ್ರಿಕ ಆರೋಗ್ಯ ರಕ್ಷಣೆಯ ವಿಸ್ತರಿಸುವಿಕೆ)ಯನ್ನು ಸಾಧಿಸಲು ಎನ್‍ಹೆಚ್‍ಎಂ ಪ್ರಮುಖ ಸಾಧನವಾಗಲಿದೆ.
  2. ರಾಷ್ಟ್ರೀಯ ಆರೋಗ್ಯ ಕಾರ್ಯನೀತಿ 2017 ಹಾಗೂ ಎಸ್‍ಡಿಜಿ-3ರ ಜೊತೆಗೆ ಇದರ ಗುರಿ/ಲಕ್ಷ್ಯವನ್ನು ಜೋಡಿಸಲಾಗಿದೆ.
  3. ಎಂಡಿಜಿಯನ್ನು ಸಾಧಿಸಲು ಎನ್‍ಹೆಚ್‍ಎಂ ನೆರವು ನೀಡಿದೆ ಹಾಗೂ ಯುಹೆಚ್‍ಸಿ ಸೇರಿದಂತೆ ಎಸ್‍ಡಿಜಿ-3ರ ಗುರಿಗಳನ್ನು ಸಾಧಿಸಲು ಪ್ರಮುಖ ಸಾಧನವಾಗಲಿದೆ.
  4. ಮೇಲೇರುವ ಬಯಕೆಯಿರುವ ಜಿಲ್ಲೆಗಳು ಸೇರಿದಂತೆ ಹೆಚ್ಚು ಆದ್ಯತೆಯ ಜಿಲ್ಲೆಗಳಲ್ಲಿ ಎನ್‍ಹೆಚ್‍ಎಂ, ಪ್ರಾಥಮಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದನ್ನು ಮುಂದುವರಿಸಲಿದೆ.
  5. ಆಯ್ದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಬದಲು ಸಮಗ್ರ ಪ್ರಾಥಮಿಕ ಆರೋಗ್ಯ ರಕ್ಷಣೆಗಾಗಿ ಎಸ್‍ಹೆಚ್‍ಸಿ/ಪಿಹೆಚ್‍ಸಿಗಳನ್ನು ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರ(ಹೆಚ್‍ಡಬ್ಲ್ಯುಸಿ)ಗಳಾಗಿ ಬಲಪಡಿಸುವಿಕೆ. ಈ ಮೂಲಕ ಸೋಂಕಿನಿಂದ ಹರಡದ ಸಾಮಾನ್ಯ ಕಾಯಿಲೆಗಳು, ವಯಸ್ಕರ ಆರೋಗ್ಯ ರಕ್ಷಣೆ, ಉಪಶಮನ ಚಿಕಿತ್ಸೆ ಹಾಗೂ ಪುನರ್‍ವಸತಿ ಆರೋಗ್ಯ ಸೇವೆ ನೀಡುವುದು.
  6. ಹೆಚ್‍ಡಬ್ಲ್ಯುಸಿಗಳು ಎನ್‍ಸಿಡಿ ಪತ್ತೆಹಚ್ಚುವಿಕೆ ಮತ್ತು ನಿರ್ವಹಣೆ ಸೇರಿದಂತೆ ತಡೆಯಬಹುದಾದ, ಉತ್ತೇಜಕ, ಉಪಶಮನಕರ, ಗುಣಪಡಿಸುವ ಹಾಗೂ ಪುನರ್‍ವಸತಿ ಸೇವೆಗಳನ್ನು ಒದಗಿಸಲಿದ್ದು, ಅವುಗಳನ್ನು ಸಿಹೆಚ್‍ಸಿ ಹಾಗೂ ಡಿಹೆಚ್‍ಗಳ ಜೊತೆಗೆ ದ್ವಿಮುಖ ರೆಫರಲ್ ಹಾಗೂ ಫಾಲೋಅಪ್ ವ್ಯವಸ್ಥೆಯೊಡನೆ ಜೋಡಿಸುವ ನಿರೀಕ್ಷೆಯಿದೆ. ಇದರಿಂದ ಸೇವೆಯಲ್ಲಿ ಏಕರೂಪತೆ ಬರಲಿದ್ದು, ಆರೋಗ್ಯ ರಕ್ಷಣೆಯ ನಿರಂತರತೆ ಉತ್ತಮಗೊಳ್ಳಲಿದೆ. ಸಾಮಾನ್ಯ ಎನ್‍ಸಿಡಿಗಳ ಪುಕ್ಕಟೆ ಪತ್ತೆಹಚ್ಚುವಿಕೆ ಸೇರಿದಂತೆ ಹನ್ನೆರಡು ಸೇವೆಗಳ ಪ್ಯಾಕೇಜ್ ಇರಲಿದೆ.
  7. ಉಪ ಕೇಂದ್ರದ ಹಂತದಲ್ಲಿ ಪ್ರಾಥಮಿಕ ಆರೋಗ್ಯ ಸೇವೆಯಲ್ಲಿ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ತರಬೇತಿ ಪಡೆದ ಮಧ್ಯಮ ಹಂತದ ಆರೋಗ್ಯ ರಕ್ಷಕನನ್ನು ನೇಮಿಸಲಾಗುವುದು.
  8. ಆಯುಶ್‍ನ್ನು ಒಳಗೊಂಡ ಯೋಗಕ್ಷೇಮ ರಕ್ಷಣೆಗೆ ಆದ್ಯತೆ ಹಾಗೂ ಮರುಕಳಿಸುವ ಕಾಯಿಲೆಗಳ ತಡೆ ಮೂಲಕ ಆರೋಗ್ಯ ರಕ್ಷಣೆಗೆ ಗಮನ ನೀಡುವುದು
  9. ಪ್ರಮುಖ ಆರೋಗ್ಯ ಸೂಚ್ಯಂಕಗಳು ಸೇರಿದಂತೆ ಬೆಳವಣಿಗೆಯನ್ನು ಉತ್ತೇಜಿಸಲು ಮಹತ್ವಾಕಾಂಕ್ಷಿ ಗುರಿ ನಿಗದಿ
  10. ಆರೋಗ್ಯ ಕ್ಷೇತ್ರದ ಸುಧಾರಣೆಗಳನ್ನು ಪ್ರೋತ್ಸಾಹಿಸಲು ಹಾಗೂ ಉತ್ತಮ ಸಾಧನೆಗೆ ಪ್ರೋತ್ಸಾಹ ನೀಡಲು ಹೆಚ್ಚುವರಿ ಅನುದಾನ ನಿಗದಿ.
  11. ಎಲ್ಲ ಲಂಬ ರೋಗ ಕಾರ್ಯಕ್ರಮಗಳನ್ನು ಸಮಗ್ರಗೊಳಿಸುವ ಮೂಲಕ ಆರೋಗ್ಯ ಮತ್ತು ಯೋಗಕ್ಷೇಮ ರಕ್ಷಣೆಗೆ ಸೂಕ್ತ ಮಾರ್ಗವನ್ನು ಖಾತ್ರಿಪಡಿಸಿಕೊಳ್ಳುವುದು
  12. ನಿರ್ಧರಿತ ಗುರಿಯನ್ನು ತಲುಪಲು ಮಧ್ಯಪ್ರವೇಶಗಳು ಹಾಗೂ ವಿಶೇಷವಾಗಿ ರೂಪುಗೊಳಿಸಿದ ಕಾರ್ಯನೀತಿಯ ಬಳಕೆ
  13. ಎನ್‍ಹೆಚ್‍ಎಂನಿಂದ ಪುಕ್ಕಟೆ ಔಷಧಗಳು ಹಾಗೂ ಆರೋಗ್ಯ ಪತ್ತೆ ಸೇವಾ ಉಪಕ್ರಮಗಳು, ಪ್ರಧಾನ ಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮ ಮತ್ತಿತರ ಯೋಜನೆಗಳ ಮೂಲಕ ಜೇಬಿನಿಂದ ಹಣ ಖರ್ಚು ಮಾಡುವುದು(ಓಓಪಿಇ) ಕಡಿಮೆಗೊಳಿಸಲು ವಿಶೇಷ ಗಮನ-ಓಓಪಿಇಯನ್ನು ಕಡಿತಗೊಳಿಸುವುದನ್ನು ವಿಶೇಷ ಗುರಿ ಎಂದು ಪರಿಗಣನೆ.
  14. ಆರೋಗ್ಯ ಕ್ಷೇತ್ರದ ನಾನಾ ವಿಭಾಗಗಳ ಲಭ್ಯ ವೇದಿಕೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು
  15. ಮುನ್ಪಡೆಯ ಕಾರ್ಯಕರ್ತರನ್ನು ಉತ್ತೇಜಿಸಲು ಹಾಗೂ ಅವರ ನಡುವೆ ಸಹಕಾರ ಭಾವನೆಯನ್ನು ಮೈಗೂಡಿಸಲು ತಂಡವನ್ನು ಆಧರಿಸಿದ ಪ್ರೋತ್ಸಾಹಧನ ನೀಡಿಕೆ
  16. ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲು ಕಾಯಕಲ್ಪ್, ಲಕ್ಷ್ಯಾ ಇನ್ನಿತರ ಗುಣಮಟ್ಟ ಸರ್ಟಿಫಿಕೇಟ್. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಬಳಕೆಯು ನಿರ್ದಿಷ್ಟ ಗುರಿ ಆಗಿರಲಿದೆ.
  17. ಮಕ್ಕಳಿಗೆ ಎಲ್ಲ ವ್ಯಾಕ್ಸಿನ್ ನೀಡುವಿಕೆಯನ್ನು ಎಲ್ಲ ರಾಜ್ಯಗಳಿಗೂ ವಿಸ್ತರಿಸಲು ಉದ್ದೇಶವಿದೆ.
  18. ಆಯುಷ್ಮಾನ್ ಭಾರತ್ ಅಡಿ ಉದ್ದೇಶಿತ ರಾಷ್ಟ್ರೀಯ ಆರೋಗ್ಯ ರಕ್ಷಣೆ ಆಂದೋಲನವನ್ನು ಏಕತ್ರಗೊಳಿಸುವಿಕೆ

ಪರಿಣಾಮ:

 

ಇದರಿಂದ ಆಗುವ ಪರಿಣಾಮ/ಅನುಕೂಲಗಳೆಂದರೆ,

  1. ವಿಸ್ತರಿಸಿದ ಅವಧಿಯೊಳಗೆ ಎನ್‍ಹೆಚ್‍ಎಂಗೆ ವಿಧಿಸಿದ ಗುರಿಯನ್ನು ಸಾಧಿಸುವುದು
  2. ಮಕ್ಕಳು ಹುಟ್ಟಿದ ತಕ್ಷಣ ಸಾವು(ಎನ್‍ಎಂಆರ್), ಎಳವೆಯಲ್ಲೇ ಶಿಶುವಿನ ಸಾವು(ಐಎಂಆರ್), ಐದು ವರ್ಷ ತಲುಪುವ ಮುನ್ನವೇ ಸಾವು(ಯು5 ಎಂಆರ್), ತಾಯಿಯ ಸಾವಿನ ಪ್ರಮಾಣ ಮತ್ತು ಒಟ್ಟು ಫಲವತ್ತತೆ ದರ(ಟಿಎಫ್‍ಆರ್) ಸೇರಿದಂತೆ ಪ್ರಮುಖ ಆರೋಗ್ಯ ಸೂಚ್ಯಂಕಗಳನ್ನು ಉತ್ತಮಪಡಿಸುವಿಕೆ
  3. ಹರಡುವ ರೋಗಗಳ ಸಂಭವನೀಯತೆ ಕಡಿಮೆಗೊಳಿಸುವುದು
  4. ಆರೋಗ್ಯ ಸೇವೆಗೆ ಜೇಬಿನಿಂದ ಹಣ ವೆಚ್ಚ (ಓಓಪಿಇ) ಮಾಡುವುದನ್ನು ಕಡಿಮೆಗೊಳಿಸುವುದು
  5. ಸಾಮಾನ್ಯ ಸೋಂಕು ತಡೆ ಸೇವೆಗಳು ಹಾಗೂ ಹರಡದ ಸೋಂಕು ರೋಗಗಳ ಲಸಿಕೆ ಹಾಕುವಿಕೆಯ ಬಳಕೆ ಮತ್ತು ವ್ಯಾಪ್ತಿಯನ್ನು ಉತ್ತಮಪಡಿಸುವುದು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India leads globally in renewable energy; records highest-ever 31.25 GW non-fossil addition in FY 25-26: Pralhad Joshi.

Media Coverage

India leads globally in renewable energy; records highest-ever 31.25 GW non-fossil addition in FY 25-26: Pralhad Joshi.
NM on the go

Nm on the go

Always be the first to hear from the PM. Get the App Now!
...
PM Modi hails the commencement of 20th Session of UNESCO’s Committee on Intangible Cultural Heritage in India
December 08, 2025

The Prime Minister has expressed immense joy on the commencement of the 20th Session of the Committee on Intangible Cultural Heritage of UNESCO in India. He said that the forum has brought together delegates from over 150 nations with a shared vision to protect and popularise living traditions across the world.

The Prime Minister stated that India is glad to host this important gathering, especially at the historic Red Fort. He added that the occasion reflects India’s commitment to harnessing the power of culture to connect societies and generations.

The Prime Minister wrote on X;

“It is a matter of immense joy that the 20th Session of UNESCO’s Committee on Intangible Cultural Heritage has commenced in India. This forum has brought together delegates from over 150 nations with a vision to protect and popularise our shared living traditions. India is glad to host this gathering, and that too at the Red Fort. It also reflects our commitment to harnessing the power of culture to connect societies and generations.

@UNESCO”