-
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಸ್ವೀಕರಿಸಿದ ಸ್ಮರಣಿಕೆಗಳ ಹರಾಜಿನ ಹದಿನೈದು ದಿನಗಳ ಕಾಲದ ಪ್ರಕ್ರಿಯೆಗೆ ಶನಿವಾರ ಸಂಜೆ ತೆರೆಬಿತ್ತು.
ಭಾರತದ ಜನರಿಂದ ಈ ಹರಾಜು ಪ್ರಕ್ರಿಯೆಗೆ ಉತ್ತಮ ಸ್ಪಂದನೆ ದೊರೆಯಿತು. ಈ ಪ್ರಕ್ರಿಯೆ ಎರಡು ಭಾಗಗಳನ್ನು – ಎರಡು ದಿನಗಳ ಕಾಲ ಮಾಡರ್ನ್ ಆರ್ಟ್ ಗ್ಯಾಲರಿಯಲ್ಲಿ ಬೌದ್ಧಿಕವಾಗಿ ಹರಾಜು ಆಯೋಜನೆ, ಮತ್ತು pmmementos.gov.in ಅಂತರ್ಜಾಲ ತಾಣದ ಮೂಲಕ ಇ- ಹರಾಜು ಒಳಗೊಂಡಿತ್ತು.
1800ಕ್ಕೂ ಹೆಚ್ಚು ಸ್ಮರಣಿಕೆಗಳನ್ನು ಈ ಅವಧಿಯಲ್ಲಿ ಹೆಚ್ಚು ಬಿಡ್ ಕೂಗಿದವರಿಗೆ ನೀಡುವ ಮೂಲಕ ಯಶಸ್ವಿಯಾಗಿ ಹರಾಜು ನಡೆಯಿತು.
ಈ ಹರಾಜು ಪ್ರಕ್ರಿಯೆಯ ಮೂಲಕ ಬಂದ ಹಣವನ್ನು ನಮಾಮಿ ಗಂಗೆಯ ಮಹೋನ್ನತ ಉದ್ದೇಶಕ್ಕೆ ಬಳಕೆ ಮಾಡಲಾಗುವುದು.
ಹರಾಜಿನ ಕೆಲವು ಮುಖ್ಯಾಂಶಗಳು
ಎನ್.ಜಿ.ಎಂ.ಎ. ಆಯೋಜಿಸಿದ್ದ ಈ ಹರಾಜಿನ ವೇಳೆ, ಕೈಯಲ್ಲಿ ತಯಾರಿಸಿದ ಮರದ ಬೈಕ್ 5 ಲಕ್ಷ ರೂಪಾಯಿಗಳಿಗೆ ಯಶಸ್ವಿಯಾಗಿ ಹರಾಜಾಯಿತು. ನರೇಂದ್ರ ಮೋದಿ ಅವರಿಗೆ ರೈಲು ನಿಲ್ದಾಣದ ಬಗ್ಗೆ ಇರುವ ಅನನ್ಯ ಬಾಂಧವ್ಯವನ್ನು ಬಿಂಬಿಸುವ ಪ್ರಧಾನಮಂತ್ರಿಯವರು ರೈಲು ನಿಲ್ದಾಣದಲ್ಲಿ ನಿಂತಿರುವ ವಿಶಿಷ್ಟವಾದ ಕುಂಚಕಲಾಕೃತಿಗೂ ಇದೇ ರೀತಿಯ ಸ್ಪಂದನೆ ದೊರೆಯಿತು.
ಇ ಹರಾಜಿನ ವೇಳೆ ಸಹ ಕೆಲವು ಅದ್ಭುತ ಬಿಡ್ ಸ್ವೀಕೃತಿಯಾದವು.
5 ಸಾವಿರ ರೂಪಾಯಿ ಮೂಲ ದರದ ಶಿವನ ಮೂರ್ತಿ 10 ಲಕ್ಷ ರೂಪಾಯಿಗೆ ಹರಾಜಾಗಿದ್ದು, ಮೂಲ ದರದ 200 ಪಟ್ಟು ಹೆಚ್ಚಾಗಿತ್ತು.
ಅಶೋಕಸ್ತಂಭದ ಮರದ ಪ್ರತಿಕೃತಿಯ ಮೂಲ ದರ 4 ಸಾವಿರವಾಗಿತ್ತು. ಆದರೆ ಅದು 13 ಲಕ್ಷಕ್ಕೆ ಹರಾಜಾಯಿತು.
ಅಸ್ಸಾಂನ ಮಜೂಲಿಯಿಂದ ಪಡೆದಿದ್ದ ಸಾಂಪ್ರದಾಯಿಕ ಹೊರೈ (ಅಸ್ಸಾಂ ರಾಜ್ಯದ ಸಾಂಪ್ರದಾಯಿಕ ಸಂಕೇತ – ಸ್ಟ್ಯಾಂಡ್ ಒಳಗೊಂಡ ಟ್ರೇ) ಮೂಲ ದರ 2 ಸಾವಿರ ರೂಪಾಯಿಯಾಗಿತ್ತು. ಅದು 12 ಲಕ್ಷಕ್ಕೆ ಹರಾಜಾಯಿತು.
ಅಮೃತಸರದ ಎಸ್.ಜಿ.ಪಿ.ಸಿ.ಯಿಂದ ಸ್ವೀಕರಿಸಲಾಗಿದ್ದ "ದೈವತ್ವ"ದ ಸ್ಮರಣಿಕೆ ಮೂಲ ದರ 10 ಸಾವಿರ, ಅದು 10.1 ಲಕ್ಷಕ್ಕೆ ಹರಾಜು ಆಯಿತು.
ಗೌತಮ ಬುದ್ಧನ ಪ್ರತಿಮೆಯ ಮೂಲ ದರ 4 ಸಾವಿರ ಅದು 7 ಲಕ್ಷಕ್ಕೆ ಹರಾಜಾಯಿತು.
ನೇಪಾಳದ ಮಾಜಿ ಪ್ರಧಾನಮಂತ್ರಿ ಸುಶೀಲ್ ಕೊಯಿರಾಲಾ ಅವರಿಂದ ಪಡೆದಿದ್ದ ಸಿಂಹದ ಕಂಚಿನ ಸಾಂಪ್ರದಾಯಿಕ ಪ್ರತಿಮೆ 5.20 ಲಕ್ಷ ರೂಪಾಯಿಗೆ ಹರಾಜಾಯಿತು.
ಉಬ್ಬು ಶಿಲ್ಪಗಳನ್ನು ಒಳಗೊಂಡ ಬೆಳ್ಳಿಯ ಕಳಶದ ಮೂಲ ದರ 10,000 ಅದು 6 ಲಕ್ಷಕ್ಕೆ ಹರಾಜಾಯಿತು.
ಇನ್ನು ಅನೇಕ ಸ್ಮರಣಿಕೆಗಳು ತಮ್ಮ ಮೂಲ ದರಕ್ಕಿಂತ ಹಲವು ಪಟ್ಟು ಹೆಚ್ಚಿನ ಮೊತ್ತಕ್ಕೆ ಹರಾಜು ಆದವು.




ಪ್ರಧಾನಮಂತ್ರಿ ಮೋದಿ, ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಹ ತಾವು ಪಡೆದ ಸ್ಮರಣಿಕೆಗಳನ್ನು ಹರಾಜು ಹಾಕುತ್ತಿದ್ದರು, ಅದರಿಂದ ಬಂದ ಹಣವನ್ನು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಬಳಕೆ ಮಾಡುತ್ತಿದ್ದರು. ಅದೇ ಸಂಪ್ರದಾಯವನ್ನು ಮುಂದುವರಿಸಿರುವ ಅವರು, ಪವಿತ್ರ ಗಂಗಾನದಿಯ ಶುದ್ಧೀಕರಣಕ್ಕೆ ಹಣ ಸಂಗ್ರಹ ಮಾಡಿದ್ದಾರೆ.


