ದೇಶವು ಪರಿವರ್ತನಶೀಲ ಮತ್ತು ಎಲ್ಲರನ್ನೂ ಒಳಗೊಂಡ ಆಡಳಿತದ 11ನೇ ವರ್ಷವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಬಡವರ ಕಲ್ಯಾಣಕ್ಕೆ ಎನ್‌ಡಿಎ ಸರ್ಕಾರದ ಅಚಲ ಬದ್ಧತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪುನರುಚ್ಚರಿಸಿದ್ದಾರೆ. ಸಬಲೀಕರಣ, ಮೂಲಸೌಕರ್ಯ ಮತ್ತು ಒಳಗೊಳ್ಳುವಿಕೆಯ ಮೇಲೆ ಗಮನ ಕೇಂದ್ರೀಕರಿಸಿದ ಸಹಾನುಭೂತಿಯುಳ್ಳ ಸರ್ಕಾರವು 25 ಕೋಟಿಗೂ ಹೆಚ್ಚು ಜನರನ್ನು ಬಡತನದಿಂದ ಮೇಲೆತ್ತುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದ್ದಾರೆ.
ʻಪ್ರಧಾನಮಂತ್ರಿ ಆವಾಸ್ ಯೋಜನೆʼ, ʻಪಿಎಂ ಉಜ್ವಲ ಯೋಜನೆʼ, ʻಜನ್ ಧನ್ ಯೋಜನೆʼ ಮತ್ತು ʻಆಯುಷ್ಮಾನ್ ಭಾರತ್ʼನಂತಹ ಪರಿವರ್ತಕ ಯೋಜನೆಗಳ ಪರಿಣಾಮವನ್ನು ಪ್ರಧಾನಿ ಎತ್ತಿ ತೋರಿದರು. ಈ ಯೋಜನೆಗಳು ವಸತಿ, ಶುದ್ಧ ಅಡುಗೆ ಇಂಧನ, ಬ್ಯಾಂಕಿಂಗ್ ಮತ್ತು ಆರೋಗ್ಯ ಸೇವೆಗಳ ಲಭ್ಯತೆಯನ್ನು ವಿಸ್ತರಿಸಿವೆ. ಪ್ರಯೋಜನಗಳ ಪಾರದರ್ಶಕ ಮತ್ತು ಪರಿಣಾಮಕಾರಿ ವಿತರಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ʻನೇರ ಲಾಭ ವರ್ಗಾವಣೆʼ (ಡಿಬಿಟಿ), ಡಿಜಿಟಲ್ ಸೇರ್ಪಡೆ ಮತ್ತು ಗ್ರಾಮೀಣ ಮೂಲಸೌಕರ್ಯದ ಮಹತ್ವವನ್ನು ಅವರು ಒತ್ತಿ ಹೇಳಿದ್ದಾರೆ.
ಪ್ರಧಾನಮಂತ್ರಿಯವರು ʻಎಕ್ಸ್ʼ ಪೋಸ್ಟ್‌ನಲ್ಲಿ ಹೀಗೆ ಹೇಳಿದ್ದಾರೆ:
"ಬಡವರ ಕಲ್ಯಾಣಕ್ಕೆ ಸಮರ್ಪಿತವಾದ ಸಹಾನುಭೂತಿಯುಳ್ಳ ಸರ್ಕಾರ!
ಕಳೆದ ದಶಕದಲ್ಲಿ, ಎನ್‌ಡಿಎ ಸರ್ಕಾರವು ಹಲವಾರು ಜನರನ್ನು ಬಡತನದ ಹಿಡಿತದಿಂದ ಮೇಲೆತ್ತಲು ಹೊಸ ಉಪಕ್ರಮಗಳನ್ನು ಕೈಗೊಂಡಿದೆ. ಸಬಲೀಕರಣ, ಮೂಲಸೌಕರ್ಯ ಮತ್ತು ಒಳಗೊಳ್ಳುವಿಕೆಯ ಮೇಲೆ ಗಮನ ಕೇಂದ್ರೀಕರಿಸಿದೆ. ನಮ್ಮ ಎಲ್ಲಾ ಪ್ರಮುಖ ಯೋಜನೆಗಳು ಬಡವರ ಜೀವನವನ್ನು ಪರಿವರ್ತಿಸಿವೆ. ಪಿಎಂ ಆವಾಸ್ ಯೋಜನೆ, ಪಿಎಂ ಉಜ್ವಲ ಯೋಜನೆ, ಜನ್ ಧನ್ ಯೋಜನೆ ಮತ್ತು ʻಆಯುಷ್ಮಾನ್ ಭಾರತ್ʼನಂತಹ ಉಪಕ್ರಮಗಳು ವಸತಿ, ಶುದ್ಧ ಅಡುಗೆ ಇಂಧನ, ಬ್ಯಾಂಕಿಂಗ್ ಮತ್ತು ಆರೋಗ್ಯ ಸೇವೆಗಳ ಲಭ್ಯತೆಯನ್ನು ಹೆಚ್ಚಿಸಿವೆ. ʻಡಿಬಿಟಿʼ, ಡಿಜಿಟಲ್ ಸೇರ್ಪಡೆ ಮತ್ತು ಗ್ರಾಮೀಣ ಮೂಲಸೌಕರ್ಯಗಳಿಗೆ ಒತ್ತು ನೀಡಿರುವುದು ಪಾರದರ್ಶಕತೆ ಮತ್ತು ಪ್ರಯೋಜನಗಳನ್ನು ಕೊನೆಯ ಮೈಲಿವರೆಗೆ ವೇಗವಾಗಿ ತಲುಪಿಸುವುದನ್ನು ಖಾತರಿಪಡಿಸಿದೆ.
ಈ ಕಾರಣದಿಂದಾಗಿಯೇ 25 ಕೋಟಿಗೂ ಹೆಚ್ಚು ಜನರು ಬಡತನವನ್ನು ಸೋಲಿಸಿದ್ದಾರೆ. ಪ್ರತಿಯೊಬ್ಬ ನಾಗರಿಕನಿಗೂ ಘನತೆಯಿಂದ ಬದುಕುವ ಅವಕಾಶವಿರುವ ಎಲ್ಲರನ್ನೂ ಒಳಗೊಂಡ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸಲು ಎನ್‌ಡಿಎ ಬದ್ಧವಾಗಿದೆ.
11YearsOfGaribKalyan"
A compassionate government, devoted to Garib Kalyan!
— Narendra Modi (@narendramodi) June 5, 2025
Over the past decade, the NDA Government has taken pathbreaking steps to uplift several people from the clutches of poverty, focussing on empowerment, infrastructure and inclusion. All our key schemes have transformed the…
"बीते 11 साल में हमारी सरकार का हर कदम सेवा, सुशासन और गरीब कल्याण को समर्पित रहा है। इस दौरान हमारी उपलब्धियां ना सिर्फ अभूतपूर्व हैं, बल्कि 140 करोड़ देशवासियों के जीवन को आसान बनाने वाली हैं। मुझे पूरा विश्वास है कि देश को आगे ले जाने के अपने इन प्रयासों के साथ हम विकसित और आत्मनिर्भर भारत के लक्ष्य को जरूर हासिल करेंगे।
11YearsOfGaribKalyan"
बीते 11 साल में हमारी सरकार का हर कदम सेवा, सुशासन और गरीब कल्याण को समर्पित रहा है। इस दौरान हमारी उपलब्धियां ना सिर्फ अभूतपूर्व हैं, बल्कि 140 करोड़ देशवासियों के जीवन को आसान बनाने वाली हैं। मुझे पूरा विश्वास है कि देश को आगे ले जाने के अपने इन प्रयासों के साथ हम विकसित और… pic.twitter.com/rz9vQ76y7l
— Narendra Modi (@narendramodi) June 5, 2025
"ಸರ್ವಾಂಗೀಣ ಅಭಿವೃದ್ಧಿಯತ್ತ ನಮ್ಮ ಸರ್ಕಾರದ ಪ್ರಯತ್ನಗಳು ಪರಿವರ್ತನಾತ್ಮಕ ಫಲಿತಾಂಶಗಳಿಗೆ ಕಾರಣವಾಗಿವೆ ಮತ್ತು ಬಡವರು ಮತ್ತು ಸಮಾಜದ ಅಂಚಿನಲ್ಲಿರುವವರಿಗೆ ಪ್ರಯೋಜನ ನೀಡಿವೆ."
11YearsOfGaribKalyan"
Our Government’s efforts towards all round development have led to transformative outcomes and benefitted the poor and marginalised. #11YearsOfGaribKalyan https://t.co/Ub2ZGJAZ1F
— Narendra Modi (@narendramodi) June 5, 2025


