ನಾಯಕತ್ವಕ್ಕೆ ಸಂಬಂಧಿಸಿದ ಅಂಶಗಳನ್ನು ಚರ್ಚಿಸಲು ಜೀವನದ ವಿವಿಧ ಸ್ತರಗಳ ಜನರನ್ನು ಒಟ್ಟುಗೂಡಿಸಲು ಸಮಾವೇಶ
ಸೋಲ್: ಸಾರ್ವಜನಿಕ ಒಳಿತನ್ನು ಮುನ್ನಡೆಸಲು ಅಧಿಕೃತ ನಾಯಕರಿಗೆ ಅನುವು ಮಾಡಿಕೊಡಲು ಗುಜರಾತ್ ನಲ್ಲಿ ಮುಂಬರುವ ನಾಯಕತ್ವ ಸಂಸ್ಥೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 21 ರಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ಸೋಲ್ ಲೀಡರ್ ಷಿಪ್ ಸಮ್ಮೇಳನದ ಮೊದಲ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಭೂತಾನ್ ಪ್ರಧಾನಮಂತ್ರಿ ದಾಶೊ ತ್ಸೆರಿಂಗ್ ಟೊಬ್ ಗೆ  ಅವರು ಗೌರವಾನ್ವಿತ ಅತಿಥಿಯಾಗಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಫೆಬ್ರವರಿ 21 ರಿಂದ 22 ರವರೆಗೆ ನಡೆಯಲಿರುವ ಎರಡು ದಿನಗಳ ಸೋಲ್ ಲೀಡರ್ ಷಿಪ್ ಸಮ್ಮೇಳನವು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸಲಿದ್ದು, ರಾಜಕೀಯ, ಕ್ರೀಡೆ, ಕಲೆ ಮತ್ತು ಮಾಧ್ಯಮ, ಆಧ್ಯಾತ್ಮಿಕ ಜಗತ್ತು, ಸಾರ್ವಜನಿಕ ನೀತಿ, ವ್ಯವಹಾರ ಮತ್ತು ಸಾಮಾಜಿಕ ವಲಯದಂತಹ ವೈವಿಧ್ಯಮಯ ಕ್ಷೇತ್ರಗಳ ನಾಯಕರು ತಮ್ಮ ಸ್ಫೂರ್ತಿದಾಯಕ ಜೀವನ ಪ್ರಯಾಣವನ್ನು ಹಂಚಿಕೊಳ್ಳಲಿದ್ದಾರೆ ಮತ್ತು ನಾಯಕತ್ವಕ್ಕೆ ಸಂಬಂಧಿಸಿದ ಅಂಶಗಳನ್ನು ಚರ್ಚಿಸಲಿದ್ದಾರೆ. ಈ ಸಮಾವೇಶವು ಸಹಯೋಗ ಮತ್ತು ಚಿಂತನೆಯ ನಾಯಕತ್ವದ ಪರಿಸರ ವ್ಯವಸ್ಥೆಯನ್ನು ಬೆಳೆಸುತ್ತದೆ, ವೈಫಲ್ಯಗಳು ಮತ್ತು ಯಶಸ್ಸುಗಳೆರಡರಿಂದಲೂ ಕಲಿಯಲು ಅನುಕೂಲವಾಗುತ್ತದೆ, ಯುವ ಪ್ರೇಕ್ಷಕರನ್ನು ಪ್ರೇರೇಪಿಸುತ್ತದೆ.

ಸ್ಕೂಲ್ ಆಫ್ ಅಲ್ಟಿಮೇಟ್ ಲೀಡರ್ ಷಿಪ್ ಗುಜರಾತ್ ನಲ್ಲಿ ಮುಂಬರುವ ನಾಯಕತ್ವ ಸಂಸ್ಥೆಯಾಗಿದ್ದು, ಅಧಿಕೃತ ನಾಯಕರಿಗೆ ಸಾರ್ವಜನಿಕ ಒಳಿತನ್ನು ಮುನ್ನಡೆಸಲು ಅನುವು ಮಾಡಿಕೊಡುತ್ತದೆ. ಔಪಚಾರಿಕ ತರಬೇತಿಯ ಮೂಲಕ ಭಾರತದಲ್ಲಿ ರಾಜಕೀಯ ನಾಯಕತ್ವದ ಭೂದೃಶ್ಯವನ್ನು ವಿಸ್ತರಿಸುವುದು ಮತ್ತು ಕೇವಲ ರಾಜಕೀಯ ವಂಶಾವಳಿಯಿಂದ ಮಾತ್ರವಲ್ಲದೆ ಸಾರ್ವಜನಿಕ ಸೇವೆಯ ಅರ್ಹತೆ, ಬದ್ಧತೆ ಮತ್ತು ಉತ್ಸಾಹದಿಂದ ಏರುವವರನ್ನು ಸೇರಿಸುವುದು ಇದರ ಉದ್ದೇಶವಾಗಿದೆ. ಇಂದಿನ ಜಗತ್ತಿನಲ್ಲಿ ನಾಯಕತ್ವದ ಸಂಕೀರ್ಣ ಸವಾಲುಗಳನ್ನು ಮಾರ್ಗದರ್ಶನ ಮಾಡಲು ಅಗತ್ಯವಾದ ಒಳನೋಟಗಳು, ಕೌಶಲ್ಯಗಳು ಮತ್ತು ಪರಿಣತಿಯನ್ನು ಸೋಲ್ ತರುತ್ತದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India achieves 1 billion tonne coal production for 2nd consecutive year

Media Coverage

India achieves 1 billion tonne coal production for 2nd consecutive year
NM on the go

Nm on the go

Always be the first to hear from the PM. Get the App Now!
...
Prime Minister shares a Sanskrit Subhashitam, highlights the divine and benevolent grace of Goddess Kushmanda
March 22, 2026

Prime Minister Shri Narendra Modi shared a Sanskrit subhashitam today, highlighting the divine and benevolent grace of Goddess Kushmanda .

The Prime Minister wrote on X:

"अदम्य साहस और आध्यात्मिक शक्ति की प्रतीक मां कूष्मांडा का चरण-वंदन! उनकी दिव्य ऊर्जा से हर हृदय में नवचेतना जागृत हो।

सुरासम्पूर्णकलशं रुधिराप्लुतमेव च।
दधाना हस्तपद्माभ्यां कूष्माण्डा शुभदाऽस्तु मे॥"