ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
September 21st, 06:09 pm
ಶಕ್ತಿಯನ್ನು ಆರಾಧಿಸುವ ಹಬ್ಬವಾದ ನವರಾತ್ರಿ ಇಂದಿನಿಂದ ಪ್ರಾರಂಭವಾಗುತ್ತಿದೆ. ನಿಮ್ಮೆಲ್ಲರಿಗೂ ಶುಭಾಶಯಗಳು! ನವರಾತ್ರಿಯ ಮೊದಲ ದಿನದಿಂದ, ದೇಶವು ಸ್ವಾವಲಂಬಿ ಭಾರತ ಅಭಿಯಾನದತ್ತ ಮತ್ತೊಂದು ಪ್ರಮುಖ ಮತ್ತು ದಿಟ್ಟ ಹೆಜ್ಜೆ ಇಡುತ್ತಿದೆ. ಇಂದು, ಸೆಪ್ಟೆಂಬರ್ 22ರಂದು, ನವರಾತ್ರಿಯ ಮೊದಲ ದಿನ ಸೂರ್ಯೋದಯದೊಂದಿಗೆ, ಹೊಸ ಅಥವಾ ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳು ಜಾರಿಗೆ ಬರುತ್ತಿವೆ. ಒಂದು ರೀತಿಯಲ್ಲಿ, ಇಂದಿನಿಂದ ದೇಶದಲ್ಲಿ ಜಿಎಸ್‌ಟಿ ಉಳಿತಾಯ ಹಬ್ಬ ಆರಂಭವಾಗುತ್ತಿದೆ. ಈ ಜಿಎಸ್ಟಿ ಉಳಿತಾಯ ಹಬ್ಬವು ನಿಮ್ಮ ಉಳಿತಾಯವನ್ನು ಹೆಚ್ಚಿಸುತ್ತದೆ, ನೀವು ಬಯಸುವ ವಸ್ತುಗಳನ್ನು ಹೆಚ್ಚು ಸುಲಭವಾಗಿ ಖರೀದಿಸಲು ಸಾಧ್ಯವಾಗುತ್ತದೆ. ಬಡವರು, ಮಧ್ಯಮ ವರ್ಗದ ಜನರು, ನವ ಮಧ್ಯಮ ವರ್ಗ, ಯುವಕರು, ರೈತರು, ಮಹಿಳೆಯರು, ವರ್ತಕರು, ಉದ್ಯಮಶೀಲರು, ನಮ್ಮ ದೇಶದ ಉದ್ಯಮಿಗಳು, ಪ್ರತಿಯೊಬ್ಬರೂ ಈ ಉಳಿತಾಯ ಹಬ್ಬದಿಂದ ಸಾಕಷ್ಟು ಪ್ರಯೋಜನ ಪಡೆಯುತ್ತಾರೆ. ಇದರರ್ಥ ಈ ಹಬ್ಬದ ಸಮಯದಲ್ಲಿ ಎಲ್ಲರಿಗೂ ತಿನ್ನಲು ಸಿಹಿ ಇರುತ್ತದೆ, ದೇಶದ ಪ್ರತಿಯೊಂದು ಕುಟುಂಬವೂ ಆಶೀರ್ವದಿಸಲ್ಪಡುತ್ತದೆ. ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳು ಮತ್ತು ಈ ಉಳಿತಾಯ ಹಬ್ಬಕ್ಕಾಗಿ ದೇಶದ ಕೋಟ್ಯಂತರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ. ಈ ಸುಧಾರಣೆಗಳು ಭಾರತದ ಬೆಳವಣಿಗೆಯ ಯಶೋಗಾಥೆಯನ್ನು ವೇಗಗೊಳಿಸುತ್ತವೆ, ವ್ಯವಹಾರ ಮಾಡುವುದನ್ನು ಸುಲಭಗೊಳಿಸುತ್ತವೆ, ಹೂಡಿಕೆಯನ್ನು ಹೆಚ್ಚು ಆಕರ್ಷಕವಾಗಿಸುತ್ತವೆ ಮತ್ತು ಅಭಿವೃದ್ಧಿಯ ಓಟದಲ್ಲಿ ಪ್ರತಿಯೊಂದು ರಾಜ್ಯವನ್ನು ಸಮಾನ ಪಾಲುದಾರರನ್ನಾಗಿ ಮಾಡುತ್ತವೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು
September 21st, 05:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಶಕ್ತಿ ಆರಾಧನೆಯ ಹಬ್ಬವಾದ ನವರಾತ್ರಿಯ ಶುಭಾರಂಭದ ಸಂದರ್ಭದಲ್ಲಿ ಎಲ್ಲಾ ನಾಗರಿಕರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ವ್ಯಕ್ತಪಡಿಸಿದ ಅವರು, ನವರಾತ್ರಿಯ ಮೊದಲ ದಿನದಿಂದಲೇ ರಾಷ್ಟ್ರವು ಆತ್ಮನಿರ್ಭರ ಭಾರತ ಅಭಿಯಾನದತ್ತ ಒಂದು ಪ್ರಮುಖ ಹೆಜ್ಜೆ ಇಡುತ್ತಿದೆ ಎಂದು ಹೇಳಿದರು. ಸೆಪ್ಟೆಂಬರ್ 22 ರ ಸೂರ್ಯೋದಯದಿಂದ ದೇಶವು ಮುಂದಿನ ಪೀಳಿಗೆಯ ಜಿ ಎಸ್ ಟಿ ಸುಧಾರಣೆಗಳನ್ನು ಜಾರಿಗೆ ತರಲಿದೆ. ಇದು ಭಾರತದಾದ್ಯಂತ ಜಿ ಎಸ್ ಟಿ ಉಳಿತಾಯ ಉತ್ಸವದ ಆರಂಭವನ್ನು ಸೂಚಿಸುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಈ ಉತ್ಸವವು ಉಳಿತಾಯವನ್ನು ಹೆಚ್ಚಿಸುತ್ತದೆ ಮತ್ತು ಜನರು ತಮ್ಮ ನೆಚ್ಚಿನ ವಸ್ತುಗಳನ್ನು ಖರೀದಿಸುವುದನ್ನು ಸುಲಭಗೊಳಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಈ ಉಳಿತಾಯ ಉತ್ಸವವು ಬಡವರು, ಮಧ್ಯಮ ವರ್ಗ, ನವ-ಮಧ್ಯಮ ವರ್ಗ, ಯುವಜನರು, ರೈತರು, ಮಹಿಳೆಯರು, ಅಂಗಡಿಯವರು, ವ್ಯಾಪಾರಿಗಳು ಮತ್ತು ಉದ್ಯಮಿಗಳು ಸೇರಿದಂತೆ ಎಲ್ಲರಿಗೂ ಪ್ರಯೋಜನವನ್ನು ನೀಡುತ್ತದೆ ಎಂದು ಶ್ರೀ ಮೋದಿ ಹೇಳಿದರು. ಈ ಹಬ್ಬವು ಪ್ರತಿ ಮನೆಗೆ ಸಂತೋಷ ಮತ್ತು ಸಿಹಿಯನ್ನು ತರುತ್ತದೆ ಎಂದು ಅವರು ಹೇಳಿದರು. ದೇಶಾದ್ಯಂತ ಲಕ್ಷಾಂತರ ಕುಟುಂಬಗಳಿಗೆ ಮುಂದಿನ ಪೀಳಿಗೆಯ ಜಿ ಎಸ್ ಟಿ ಸುಧಾರಣೆಗಳು ಮತ್ತು ಜಿ ಎಸ್ ಟಿ ಉಳಿತಾಯ ಉತ್ಸವದ ಶುಭಾಶಯಗಳನ್ನು ಕೋರಿದರು. ಈ ಸುಧಾರಣೆಗಳು ಭಾರತದ ಬೆಳವಣಿಗೆಯ ಕಥೆಯನ್ನು ವೇಗಗೊಳಿಸುತ್ತವೆ, ವ್ಯಾಪಾರ ಕಾರ್ಯಾಚರಣೆಗಳನ್ನು ಸರಳಗೊಳಿಸುತ್ತವೆ, ಹೂಡಿಕೆಗಳನ್ನು ಹೆಚ್ಚು ಆಕರ್ಷಕವಾಗಿಸುತ್ತವೆ ಮತ್ತು ಅಭಿವೃದ್ಧಿಯ ಓಟದಲ್ಲಿ ಪ್ರತಿಯೊಂದು ರಾಜ್ಯವೂ ಸಮಾನ ಪಾಲುದಾರರಾಗುವುದನ್ನು ಖಚಿತಪಡಿಸುತ್ತವೆ ಎಂದು ಅವರು ಒತ್ತಿ ಹೇಳಿದರು.ಭಾರತ-ಜಪಾನ್ ಆರ್ಥಿಕ ವೇದಿಕೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣ
August 29th, 11:20 am
ನಿಮ್ಮಲ್ಲಿ ಅನೇಕರನ್ನು ನಾನು ವೈಯಕ್ತಿಕವಾಗಿ ಬಲ್ಲೆ. ನಾನು ಗುಜರಾತ್ನಲ್ಲಿದ್ದಾಗ ಆಗಿರಬಹುದು, ಅಥವಾ ದೆಹಲಿಗೆ ಬಂದ ನಂತರವೇ ಆಗಿರಬಹುದು, ನಿಮ್ಮಲ್ಲಿ ಅನೇಕರೊಂದಿಗೆ ನನಗೆ ನಿಕಟವಾದ ಸಂಪರ್ಕವಿದೆ. ಇಂದು ನಿಮ್ಮೆಲ್ಲರನ್ನೂ ಭೇಟಿಯಾಗುವ ಈ ಅವಕಾಶ ಸಿಕ್ಕಿದ್ದಕ್ಕೆ ನನಗೆ ನಿಜಕ್ಕೂ ಬಹಳ ಸಂತೋಷವಾಗಿದೆ.ʻಭಾರತ-ಜಪಾನ್ ಆರ್ಥಿಕ ವೇದಿಕೆʼಯಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ
August 29th, 11:02 am
ಈ ವೇಳೆ ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ, ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯ ಬಗ್ಗೆ, ಅದರಲ್ಲೂ ವಿಶೇಷವಾಗಿ ಹೂಡಿಕೆ, ಉತ್ಪಾದನೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಯೋಗದ ಯಶಸ್ಸನ್ನು ಒತ್ತಿ ಹೇಳಿದರು. ಭಾರತದಲ್ಲಿ ತಮ್ಮ ಹೆಜ್ಜೆಗುರುತನ್ನು ಮತ್ತಷ್ಟು ಹೆಚ್ಚಿಸಲು ಜಪಾನಿನ ಕಂಪನಿಗಳನ್ನು ಆಹ್ವಾನಿಸಿದ ಅವರು, ಭಾರತದ ಬೆಳವಣಿಗೆಯ ಯಶೋಗಾಥೆಯು ಆ ಕಂಪನಿಗಳಿಗೆ ಅತ್ಯಾಕರ್ಷಕ ಅವಕಾಶಗಳನ್ನು ಒದಗಿಸುತ್ತದೆ ಎಂದರು. ಪ್ರಸ್ತುತ ಪ್ರಕ್ಷುಬ್ಧ ಜಾಗತಿಕ ಆರ್ಥಿಕ ಸನ್ನಿವೇಶದ ಹಿನ್ನೆಲೆಯಲ್ಲಿ ವಿಶ್ವಾಸಾರ್ಹ ಸ್ನೇಹಿತರ ನಡುವಿನ ಆಳವಾದ ಆರ್ಥಿಕ ಸಹಭಾಗಿತ್ವವು ಅತ್ಯಂತ ಪ್ರಸ್ತುತವಾಗಿದೆ ಎಂದು ಅವರು ಹೇಳಿದರು. ರಾಜಕೀಯ ಸ್ಥಿರತೆ, ನೀತಿ ಮುಂಗಾಣಿಕೆ, ಸುಧಾರಣೆಗಳಿಗೆ ಬದ್ಧತೆ ಮತ್ತು ಸುಗಮ ವ್ಯಾಪಾರ ಪ್ರಯತ್ನಗಳು ಭಾರತೀಯ ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಹೊಸ ವಿಶ್ವಾಸವನ್ನು ನೀಡಿವೆ ಎಂದು ಪ್ರಧಾನಿ ಒತ್ತಿ ಹೇಳಿದರು. ಜಾಗತಿಕ ಸಂಸ್ಥೆಗಳು ಇತ್ತೀಚೆಗೆ ಭಾರತದ ಕ್ರೆಡಿಟ್ ರೇಟಿಂಗ್ ಅನ್ನು ಮೇಲ್ದರ್ಜೆಗೆ ಏರಿಸಿರುವುದು ಈ ವಿಶ್ವಾಸವನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.ಪ್ರಧಾನಮಂತ್ರಿ ಮತ್ತು ಸೈಪ್ರಸ್ ನ ಅಧ್ಯಕ್ಷರು, ಭಾರತ ಮತ್ತು ಸೈಪ್ರಸ್ ವಾಣಿಜ್ಯ ನಾಯಕರೊಂದಿಗೆ ಸಂವಾದ ನಡೆಸಿದರು
June 16th, 02:17 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೈಪ್ರಸ್ ಅಧ್ಯಕ್ಷ ಘನತೆವೆತ್ತ ನಿಕೋಸ್ ಕ್ರಿಸ್ಟೋಡೌಲಿಡೆಸ್ ಅವರೊಂದಿಗೆ ಇಂದು ಲಿಮಾಸೋಲ್ ನಲ್ಲಿ ಸೈಪ್ರಸ್ ಮತ್ತು ಭಾರತದ ವಾಣಿಜ್ಯ ನಾಯಕರೊಂದಿಗೆ ದುಂಡುಮೇಜಿನ ಸಂವಾದ ನಡೆಸಿದರು. ಬ್ಯಾಂಕಿಂಗ್, ಹಣಕಾಸು ಸಂಸ್ಥೆಗಳು, ಉತ್ಪಾದನೆ, ರಕ್ಷಣೆ, ಲಾಜಿಸ್ಟಿಕ್ಸ್, ಕಡಲ, ಹಡಗು, ತಂತ್ರಜ್ಞಾನ, ನಾವೀನ್ಯತೆ, ಡಿಜಿಟಲ್ ತಂತ್ರಜ್ಞಾನಗಳು, ಎಐ, ಐಟಿ ಸೇವೆಗಳು, ಪ್ರವಾಸೋದ್ಯಮ ಮತ್ತು ಚಲನಶೀಲತೆಯಂತಹ ವೈವಿಧ್ಯಮಯ ಕ್ಷೇತ್ರಗಳನ್ನು ಪ್ರತಿನಿಧಿಸುವವರು ಭಾಗವಹಿಸಿದರು.ಸೈಪ್ರಸ್‌ನಲ್ಲಿ ನಡೆದ ಭಾರತ-ಸೈಪ್ರಸ್ ಉದ್ಯಮ ವ್ಯವಹಾರದ ದುಂಡು ಮೇಜಿನ ಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
June 15th, 11:10 pm
ಮೊದಲನೆಯದಾಗಿ, ಇಂದು ನನ್ನನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸೈಪ್ರಸ್ ಅಧ್ಯಕ್ಷರಿಗೆ ನನ್ನ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ. ಉದ್ಯಮ ವ್ಯವಹಾರ ನಾಯಕರೊಂದಿಗೆ ಇಷ್ಟು ದೊಡ್ಡ ದುಂಡುಮೇಜಿನ ಸಭೆ ಆಯೋಜಿಸಿದ್ದಕ್ಕಾಗಿ ನಾನು ಅವರಿಗೆ ತುಂಬಾ ಕೃತಜ್ಞನಾಗಿದ್ದೇನೆ. ನನ್ನ ಬಗ್ಗೆ ಮತ್ತು ನಮ್ಮ ಪಾಲುದಾರಿಕೆಯ ಬಗ್ಗೆ ಅವರು ಹಂಚಿಕೊಂಡ ಸಕಾರಾತ್ಮಕ ಆಲೋಚನೆಗಳಿಗಾಗಿ ನಾನು ಅವರಿಗೆ ಪ್ರಾಮಾಣಿಕವಾಗಿ ಧನ್ಯವಾದ ಹೇಳುತ್ತೇನೆ.ಗುಜರಾತ್ ನ ಕೆವಾಡಿಯಾದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
October 31st, 07:31 am
ಸರ್ದಾರ್ ಸಾಹೇಬರ ಸ್ಫೂರ್ತಿದಾಯಕ ಮಾತುಗಳು... ಏಕತಾ ಪ್ರತಿಮೆಯ ಬಳಿ ಈ ಭವ್ಯ ಕಾರ್ಯಕ್ರಮ... ಏಕ್ತಾ ನಗರದ ಬೆರಗುಗೊಳಿಸುವ ನೋಟ, ಮತ್ತು ಇಲ್ಲಿನ ಭವ್ಯವಾದ ಪ್ರದರ್ಶನಗಳು ... ಮಿನಿ ಇಂಡಿಯಾದ ಒಂದು ನೋಟ... ಎಲ್ಲವೂ ತುಂಬಾ ನಂಬಲಾಗದು, ತುಂಬಾ ಸ್ಫೂರ್ತಿದಾಯಕವಾಗಿದೆ. ಆಗಸ್ಟ್ 15 ಮತ್ತು ಜನವರಿ 26 ರಂತೆ... ಅಕ್ಟೋಬರ್ 31 ರಂದು ನಡೆಯುವ ಈ ಕಾರ್ಯಕ್ರಮವು ಇಡೀ ರಾಷ್ಟ್ರವನ್ನು ಹೊಸ ಶಕ್ತಿಯಿಂದ ತುಂಬುತ್ತದೆ. ರಾಷ್ಟ್ರೀಯ ಏಕತಾ ದಿವಸ್ (ರಾಷ್ಟ್ರೀಯ ಏಕತಾ ದಿನ) ದಂದು ನಾನು ದೇಶದ ಎಲ್ಲ ನಾಗರಿಕರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ನ ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ನಮನ ಸಲ್ಲಿಸಿದರು, ರಾಷ್ಟ್ರೀಯ ಏಕತಾ ದಿವಸ್ ಆಚರಣೆಯಲ್ಲಿ ಪಾಲ್ಗೊಂಡರು
October 31st, 07:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ನ ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆಯಲ್ಲಿ ನಡೆದ ರಾಷ್ಟ್ರೀಯ ಏಕತಾ ದಿವಸ್ ಆಚರಣೆಯಲ್ಲಿ ಪಾಲ್ಗೊಂಡರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ಜಯಂತಿಯಂದು ಪ್ರಧಾನಮಂತ್ರಿ ಅವರು ಅವರಿಗೆ ಪುಷ್ಪ ನಮನ ಸಲ್ಲಿಸಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯ ನೆನಪಿಗಾಗಿ ಪ್ರತಿವರ್ಷ ಅಕ್ಟೋಬರ್ 31 ರಂದು ಆಚರಿಸಲಾಗುವ ರಾಷ್ಟ್ರೀಯ ಏಕತಾ ದಿವಸ್ ಸಂದರ್ಭದಲ್ಲಿ ಶ್ರೀ ನರೇಂದ್ರ ಮೋದಿ ಅವರು ಏಕತಾ ದಿವಸ್ ಪ್ರತಿಜ್ಞೆಯನ್ನು ಬೋಧಿಸಿದರು ಮತ್ತು ಏಕತಾ ದಿವಸ್ ಮೆರವಣಿಗೆಗೆ ಸಾಕ್ಷಿಯಾದರು.ಐದು ವರ್ಷಗಳನ್ನು ಪೂರೈಸಿದ ಜಿ.ಎಸ್.ಟಿ: ಪ್ರಧಾನಮಂತ್ರಿ ಶ್ಲಾಘನೆ
July 01st, 02:36 pm
ಜಿ.ಎಸ್.ಟಿಗೆ ಐದು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಬೆಳವಣಿಗೆಯನ್ನು ಶ‍್ಲಾಘಿಸಿದ್ದಾರೆ. ಇದು “ಸುಗಮ ವ್ಯಾಪಾರ” ನಡೆಸಲು ಮತ್ತು “ಒಂದು ರಾಷ್ಟ್ರ ಮತ್ತು ಒಂದು ತೆರಿಗೆ”ಯ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಮುಖ ತೆರಿಗೆ ಸುಧಾರಣೆಯಾಗಿದೆ ಎಂದು ಹೇಳಿದ್ದಾರೆ.For us, MSME means- Maximum Support to Micro Small and Medium Enterprises: PM Modi
June 30th, 10:31 am
PM Modi participated in the ‘Udyami Bharat’ programme. To strengthen the MSME sector, in the last eight years, the Prime Minister said, the government has increased the budget allocation by more than 650%. “For us, MSME means - Maximum Support to Micro Small and Medium Enterprises”, the Prime Minister stressed.PM participates in ‘Udyami Bharat’ programme
June 30th, 10:30 am
PM Modi participated in the ‘Udyami Bharat’ programme. To strengthen the MSME sector, in the last eight years, the Prime Minister said, the government has increased the budget allocation by more than 650%. “For us, MSME means - Maximum Support to Micro Small and Medium Enterprises”, the Prime Minister stressed.ಲಖನೌದಲ್ಲಿ ನಡೆದ ಯುಪಿ ಹೂಡಿಕೆದಾರರ ಶೃಂಗಸಭೆಯ @3.0 ಭೂಮಿಪೂಜೆ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
June 03rd, 10:35 am
ಉತ್ತರ ಪ್ರದೇಶದ ಜನಪ್ರಿಯ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಜೀ, ಲಖನೌ ಸಂಸದ ಮತ್ತು ಭಾರತ ಸರ್ಕಾರದ ನಮ್ಮ ಹಿರಿಯ ಸಹೋದ್ಯೋಗಿ ಶ್ರೀ ರಾಜನಾಥ್ ಸಿಂಗ್ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಇತರ ಸಹೋದ್ಯೋಗಿಗಳು, ಉತ್ತರಪ್ರದೇಶದ ಉಪ ಮುಖ್ಯಮಂತ್ರಿ, ರಾಜ್ಯ ಸರ್ಕಾರದ ಸಚಿವರು, ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸ್ಪೀಕರ್ ಗಳು, ಉದ್ಯಮದ ಎಲ್ಲಾ ಸಹೋದ್ಯೋಗಿಗಳು, ಇತರ ಗಣ್ಯರು, ಮಹಿಳೆಯರು ಮತ್ತು ಮಹನೀಯರೇ!PM attends the Ground Breaking Ceremony @3.0 of the UP Investors Summit at Lucknow
June 03rd, 10:33 am
PM Modi attended Ground Breaking Ceremony @3.0 of UP Investors Summit at Lucknow. “Only our democratic India has the power to meet the parameters of a trustworthy partner that the world is looking for today. Today the world is looking at India's potential as well as appreciating India's performance”, he said.ಜೈನ್ ಅಂತಾರಾಷ್ಟ್ರೀಯ ವ್ಯಾಪಾರ ಸಂಘಟನೆ 'ಜಿತೊ ಕನೆಕ್ಟ್ 2022' ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅನುವಾದ
May 06th, 02:08 pm
ಈ ಜಿತೊ ಕನೆಕ್ಟ್ ಶೃಂಗಸಭೆಯನ್ನು ಸ್ವಾತಂತ್ರ್ಯದ 75 ನೇ ವರ್ಷವಾದ ಅಮೃತ ಮಹೋತ್ಸವದಲ್ಲಿ ನಡೆಸಲಾಗುತ್ತಿದೆ. ದೇಶವು ಇಲ್ಲಿಂದ ಸ್ವಾತಂತ್ರ್ಯದ 'ಅಮೃತ್ ಕಾಲ್' ಅನ್ನು ಪ್ರವೇಶಿಸುತ್ತಿದೆ. ಈಗ ದೇಶವು ಮುಂದಿನ 25 ವರ್ಷಗಳಲ್ಲಿ ಸುವರ್ಣ ಭಾರತವನ್ನು ನಿರ್ಮಿಸುವ ಸಂಕಲ್ಪವನ್ನು ಹೊಂದಿದೆ. ಆದ್ದರಿಂದ, ನೀವು ನಿರ್ಧರಿಸಿದ ವಿಷಯವು ಸ್ವತಃ ತುಂಬಾ ಸೂಕ್ತವಾಗಿದೆ - ಒಟ್ಟಿಗೆ, ಕಡೆಗೆ, ನಾಳೆ ! ಇದು ಸ್ವಾತಂತ್ರ್ಯದ 'ಅಮೃತ ಕಾಲ'ದಲ್ಲಿ ಕ್ಷಿಪ್ರಗತಿಯ ಅಭಿವೃದ್ಧಿಯ ಮಂತ್ರವಾದ 'ಸಬ್ ಕಾ ಪ್ರಯಾಸ'ದ (ಎಲ್ಲರ ಪ್ರಯತ್ನ) ಸ್ಫೂರ್ತಿ ಎಂದು ನಾನು ಹೇಳಬಲ್ಲೆ. ಮುಂದಿನ ಮೂರು ದಿನಗಳಲ್ಲಿ ನಿಮ್ಮ ಎಲ್ಲಾ ಪ್ರಯತ್ನಗಳು ಸರ್ವತೋಮುಖ ಮತ್ತು ಸರ್ವವ್ಯಾಪಿ ಅಭಿವೃದ್ಧಿಯ ಕಡೆಗೆ ಇರಲಿ, ಇದರಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸಹ ಹಿಂದೆ ಉಳಿಯುವುದಿಲ್ಲ! ಈ ಶೃಂಗಸಭೆಯು ಈ ಭಾವನೆಯನ್ನು ಬಲಪಡಿಸುವುದನ್ನು ಮುಂದುವರಿಸಲಿ! ಈ ಶೃಂಗಸಭೆಯಲ್ಲಿ ನಮ್ಮ ಪ್ರಸ್ತುತ ಮತ್ತು ಭವಿಷ್ಯದ ಆದ್ಯತೆಗಳು ಮತ್ತು ಸವಾಲುಗಳಿಗೆ ಪರಿಹಾರಗಳನ್ನು ಕಂಡುಹಿಡಿಯುವ ಪ್ರಯತ್ನಗಳು ನಡೆಯಲಿವೆ. ನಿಮ್ಮೆಲ್ಲರಿಗೂ ಅನೇಕ ಅಭಿನಂದನೆಗಳು ಮತ್ತು ಶುಭಾಶಯಗಳು!ಜಿತೊ ಕನೆಕ್ಟ್ 2022’ ಉದ್ಘಾಟನಾ ಗೋಷ್ಠಿ ಉದ್ದೇಶಿಸಿ ಪ್ರಧಾನಿ ಭಾಷಣ
May 06th, 10:17 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜೈನ್ ಅಂತಾರಾಷ್ಟ್ರೀಯ ವ್ಯಾಪಾರ ಸಂಘಟನೆಯ ‘ಜಿತೊ ಕನೆಕ್ಟ್ 2022’ ಉದ್ಘಾಟನಾ ಗೋಷ್ಠಿಯನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರು.ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ಮತ್ತು ರಾಷ್ಟ್ರೀಕೃತ (ಸರಕಾರಿ) ಸ್ವತ್ತಿನಿಂದ ಆದಾಯ ಕ್ರೋಡೀಕರಣ ಕುರಿತು ಪ್ರಧಾನ ಮಂತ್ರಿಗಳ ವೆಬಿನಾರ್ ಭಾಷಣ
February 24th, 05:48 pm
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ʻಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆʼಗೆ (ಡಿಐಪಿಎಎಂ) ಸಂಬಂಧಿಸಿದ ಬಜೆಟ್ ಪ್ರಸ್ತಾವನೆಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವೆಬಿನಾರ್‌ನಲ್ಲಿ ಮಾತನಾಡಿದರು.ಬಂಡವಾಳ ಹಿಂತೆಗೆತ ಮತ್ತು ಆಸ್ತಿ ನಗದೀಕರಣ ಕುರಿತಾದ ಬಜೆಟ್ ಪ್ರಸ್ತಾವನೆಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ವೆಬಿನಾರ್‌ನಲ್ಲಿ ಪ್ರಧಾನಿ ಭಾಷಣ
February 24th, 05:42 pm
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ʻಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆʼಗೆ (ಡಿಐಪಿಎಎಂ) ಸಂಬಂಧಿಸಿದ ಬಜೆಟ್ ಪ್ರಸ್ತಾವನೆಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವೆಬಿನಾರ್‌ನಲ್ಲಿ ಮಾತನಾಡಿದರು.74 ನೇ ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯ ವೇದಿಕೆಯಿಂದ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಭಾಷಣ
August 15th, 02:49 pm
ಇಂದು, ನಾವು ಸ್ವತಂತ್ರ ಭಾರತದಲ್ಲಿ ಉಸಿರಾಡುತ್ತಿರುವುದರ ಹಿಂದೆ ಭಾರತ ಮಾತೆಯ ಲಕ್ಷಾಂತರ ಪುತ್ರ ಮತ್ತು ಪುತ್ರಿಯರ ಸಮರ್ಪಣೆ, ತ್ಯಾಗ, ಬಲಿದಾನ ಮತ್ತು ತಾಯಿ ಭಾರತಿಯನ್ನು ಸ್ವತಂತ್ರಗೊಳಿಸುವ ಸಂಕಲ್ಪ ಇದೆ. ಇಂದು ನಮ್ಮ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ, ಸ್ವಾತಂತ್ರ್ಯ ವೀರರಿಗೆ, ಹುತಾತ್ಮರಿಗೆ, ಧೈರ್ಯಶಾಲಿ ಧೀರರಿಗೆ ಗೌರವ ಸಲ್ಲಿಸುವ ಸುಸಂದರ್ಭ ಇದು.74ನೇ ಸ್ವಾತಂತ್ರ್ಯ ದಿನ – ಕೆಂಪುಕೋಟೆಯ ವೇದಿಕೆಯಿಂದ ದೇಶವನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
August 15th, 02:38 pm
ನನ್ನ ಪ್ರೀತಿಯ ದೇಶವಾಸಿಗಳೇ, ಈ ಮಹೋನ್ನತ ಸಂದರ್ಭದಲ್ಲಿ, ನಿಮ್ಮಲ್ಲರಿಗೂ ಶುಭಾಶಯಗಳು ಮತ್ತು ಅಭಿನಂದನೆಗಳು.India celebrates 74th Independence Day
August 15th, 07:11 am
Prime Minister Narendra Modi addressed the nation on the occasion of 74th Independence Day. PM Modi said that 130 crore countrymen should pledge to become self-reliant. He said that it is not just a word but a mantra for 130 crore Indians. “Like every young adult in an Indian family is asked to be self-dependent, India as nation has embarked on the journey to be Aatmanirbhar”, said the PM.