ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ಪ್ರಧಾನಮಂತ್ರಿ ಸಂವಾದ
June 28th, 08:24 pm
ಇಂದು ನೀವು ನಿಮ್ಮ ಮಾತೃಭೂಮಿ ಭಾರತದ ಭೂಮಿಯಿಂದ ದೂರದಲ್ಲಿದ್ದೀರಿ, ಆದರೆ ನೀವು ಭಾರತೀಯರ ಹೃದಯಗಳಿಗೆ ಹತ್ತಿರವಾಗಿದ್ದೀರಿ. ನಿಮ್ಮ ಹೆಸರಿನಲ್ಲೇ ಶುಭವಿದೆ, ನಿಮ್ಮ ಪ್ರಯಾಣ ಹೊಸ ಯುಗದ ಆರಂಭವೂ ಆಗಿದೆ. ಈ ಸಮಯದಲ್ಲಿ ನಾವಿಬ್ಬರೂ ಮಾತನಾಡುತ್ತಿದ್ದೇವೆ, ಆದರೆ 140 ಕೋಟಿ ಭಾರತೀಯರ ಭಾವನೆಗಳು ನನ್ನೊಂದಿಗಿವೆ. ನನ್ನ ಧ್ವನಿಯು ಎಲ್ಲಾ ಭಾರತೀಯರ ಉತ್ಸಾಹ ಮತ್ತು ಚೈತನ್ಯವನ್ನು ಪ್ರತಿಬಿಂಬಿಸುತ್ತದೆ. ಬಾಹ್ಯಾಕಾಶದಲ್ಲಿ ಭಾರತದ ಧ್ವಜ ಹಾರಿಸಿದ್ದಕ್ಕಾಗಿ ನಾನು ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ. ನಾನು ಹೆಚ್ಚು ಸಮಯ ತೆಗೆದುಕೊಳ್ಳುತ್ತಿಲ್ಲ, ಆದ್ದರಿಂದ ಮೊದಲು ನನಗೆ ಹೇಳಿ, ಅಲ್ಲಿ ಎಲ್ಲವೂ ಸರಿಯಾಗಿದೆಯೇ? ನೀವು ಚೆನ್ನಾಗಿದ್ದೀರಾ?ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂವಾದ
June 28th, 08:22 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ಭಾರತೀಯ ಗಗನಯಾತ್ರಿ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ಇಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಶುಭಾಂಶು ಅವರು ಪ್ರಸ್ತುತ ಭಾರತದ ಮಾತೃಭೂಮಿಯಿಂದ ಅತಿ ದೂರದಲ್ಲಿದ್ದರೂ, ಅವರು ಸಮಸ್ತ ಭಾರತೀಯರ ಹೃದಯಕ್ಕೆ ಅತ್ಯಂತ ಹತ್ತಿರವಾಗಿದ್ದಾರೆ, ಎಂದು ಬಣ್ಣಿಸಿದರು. ಶುಭಾಂಶು ಎಂಬ ಹೆಸರೇ ಶುಭ ಸೂಚಕವಾಗಿದ್ದು, ಅವರ ಈ ಪಯಣವು ಒಂದು ನವಯುಗದ ಆರಂಭಕ್ಕೆ ಮುನ್ನುಡಿಯಾಗಿದೆ, ಎಂದು ಶ್ರೀ ಮೋದಿ ನುಡಿದರು. ಇದು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸಂಭಾಷಣೆಯಾಗಿದ್ದರೂ, ಇದರಲ್ಲಿ 140 ಕೋಟಿ ಭಾರತೀಯರ ಭಾವನೆಗಳು ಮತ್ತು ಉತ್ಸಾಹ ಅಡಗಿದೆ. ಶುಭಾಂಶು ಅವರೊಂದಿಗೆ ಮಾತನಾಡುತ್ತಿರುವ ಈ ಧ್ವನಿಯು, ಇಡೀ ರಾಷ್ಟ್ರದ ಸಾಮೂಹಿಕ ಹುಮ್ಮಸ್ಸು ಮತ್ತು ಹೆಮ್ಮೆಯನ್ನು ಹೊತ್ತಿದೆ, ಎಂದು ಅವರು ಹೇಳಿದರು. ಬಾಹ್ಯಾಕಾಶದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ್ದಕ್ಕಾಗಿ ಶುಭಾಂಶು ಅವರಿಗೆ ಪ್ರಧಾನಿಯವರು ಹೃತ್ಪೂರ್ವಕ ಅಭಿನಂದನೆಗಳನ್ನು ಮತ್ತು ಶುಭ ಹಾರೈಕೆಗಳನ್ನು ಸಲ್ಲಿಸಿದರು. ಕೊನೆಯಲ್ಲಿ, ಪ್ರಧಾನಿಯವರು ಶುಭಾಂಶು ಅವರ ಯೋಗಕ್ಷೇಮವನ್ನು ವಿಚಾರಿಸಿದರು ಮತ್ತು ಬಾಹ್ಯಾಕಾಶ ನಿಲ್ದಾಣದಲ್ಲಿ ಎಲ್ಲವೂ ಸುಸೂತ್ರವಾಗಿದೆಯೇ ಎಂದು ಕೇಳಿದರು.ಕ್ರ್ಯೂ-9 (Crew-9) ಗಗನಯಾತ್ರಿಗಳಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ
March 19th, 11:42 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಸೇರಿದಂತೆ ಕ್ರ್ಯೂ-9 ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಮರಳಿದ್ದಕ್ಕಾಗಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಕ್ರ್ಯೂ-9 ಗಗನಯಾತ್ರಿಗಳ ಧೈರ್ಯ, ದೃಢಸಂಕಲ್ಪ ಮತ್ತು ಬಾಹ್ಯಾಕಾಶ ಅನ್ವೇಷಣೆಗೆ ನೀಡಿದ ಕೊಡುಗೆಯನ್ನು ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.ಭಾರತ - ಅಮೆರಿಕ ಜಂಟಿ ಪತ್ರಿಕಾಗೋಷ್ಠಿಯ ವೇಳೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಪತ್ರಿಕಾ ಹೇಳಿಕೆ
February 14th, 04:57 am
ನಮಸ್ಕಾರ! ಮೊದಲಿಗೆ, ನನ್ನ ಆತ್ಮೀಯ ಸ್ನೇಹಿತ, ಅಧ್ಯಕ್ಷ ಟ್ರಂಪ್ ಅವರು ನೀಡಿದ ಆತ್ಮೀಯ ಸ್ವಾಗತ ಮತ್ತು ಆತಿಥ್ಯಕ್ಕಾಗಿ ನಾನು ಹೃದಯಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ತಮ್ಮ ನಾಯಕತ್ವದ ಮೂಲಕ, ಅಧ್ಯಕ್ಷ ಟ್ರಂಪ್ ಅವರು ಭಾರತ-ಯುಎಸ್ ಸಂಬಂಧವನ್ನು ಪೋಷಿಸಿದ್ದಾರೆ ಮತ್ತು ಪುನರುಜ್ಜೀವನಗೊಳಿಸಿದ್ದಾರೆ.ಈ ವಾರ ಭಾರತದ ಬಗ್ಗೆ ವಿಶ್ವ
February 06th, 01:03 pm
ಈ ವಾರ, ಭಾರತವು ತನ್ನ ಜಾಗತಿಕ ಪಾಲುದಾರಿಕೆಗಳನ್ನು ಬಲಪಡಿಸುವಲ್ಲಿ, ತಾಂತ್ರಿಕ ಮತ್ತು ಬಾಹ್ಯಾಕಾಶ ಪರಿಶೋಧನೆಯನ್ನು ಮುನ್ನಡೆಸುವಲ್ಲಿ ಮತ್ತು ಜಾಗತಿಕ ಸಂರಕ್ಷಣೆ ಮತ್ತು ಆರೋಗ್ಯ ರಕ್ಷಣಾ ಪ್ರಯತ್ನಗಳಿಗೆ ಕೊಡುಗೆ ನೀಡುವಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಇಸ್ರೇಲ್ ಜೊತೆಗಿನ ಸಂಬಂಧಗಳನ್ನು ಗಾಢವಾಗಿಸುವುದರಿಂದ ಹಿಡಿದು ಹೊಸ ಉಪಗ್ರಹ ಕಾರ್ಯಕ್ರಮಗಳನ್ನು ಉಡಾವಣೆ ಮಾಡುವವರೆಗೆ ಮತ್ತು ವಿದೇಶಗಳಲ್ಲಿ ಭಾರತೀಯ ಪ್ರತಿಭೆಗಳ ಸಾಧನೆಗಳನ್ನು ಗುರುತಿಸುವವರೆಗೆ, ಭಾರತವು ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ತನ್ನ ಬೆಳೆಯುತ್ತಿರುವ ಪಾತ್ರವನ್ನು ಪ್ರತಿಪಾದಿಸುತ್ತಲೇ ಇದೆ. ಯುರೋಪ್ ಭಾರತವನ್ನು ಭವಿಷ್ಯದ ಸಹಯೋಗಕ್ಕೆ ಪ್ರಮುಖ ಅವಕಾಶವೆಂದು ನೋಡುತ್ತದೆ. ಈ ವಾರದ ಕೆಲವು ಪ್ರಮುಖ ಮುಖ್ಯಾಂಶಗಳನ್ನು ಇಲ್ಲಿ ನೋಡೋಣ.ಜಂಟಿ ವಸ್ತುಸ್ಥಿತಿ ಪತ್ರ: ಸಮಗ್ರ ಮತ್ತು ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ ವಿಸ್ತರಿಸುವುದನ್ನು ಅಮೆರಿಕ ಮತ್ತು ಭಾರತ ಮುಂದುವರಿಸುತ್ತವೆ
September 22nd, 12:00 pm
21 ನೇ ಶತಮಾನದ ನಿರ್ಣಾಯಕ ಪಾಲುದಾರಿಕೆಯನ್ನು ವ್ಯಾಖ್ಯಾನಿಸುವ ಯುಎಸ್-ಭಾರತ ಸಮಗ್ರ ಜಾಗತಿಕ ಮತ್ತು ಕಾರ್ಯತಂತ್ರದ ಸಹಭಾಗಿತ್ವವು ಜಾಗತಿಕ ಒಳಿತಿಗಾಗಿ ಸೇವೆ ಸಲ್ಲಿಸುವ ಮಹತ್ವಾಕಾಂಕ್ಷೆಯ ಕಾರ್ಯಸೂಚಿಯನ್ನು ನಿರ್ಣಾಯಕವಾಗಿ ತಲುಪಿಸುತ್ತಿದೆ ಎಂದು ಯುಎಸ್ ಅಧ್ಯಕ್ಷ ಜೋಸೆಫ್ ಆರ್ ಬೈಡನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು ದೃಢಪಡಿಸಿದರು. ಅಮೆರಿಕ ಮತ್ತು ಭಾರತ ನಡುವೆ ಅಭೂತಪೂರ್ವ ಮಟ್ಟದ ವಿಶ್ವಾಸ ಮತ್ತು ಸಹಯೋಗ ಬೆಳೆದ ಐತಿಹಾಸಿಕ ಅವಧಿಯ ಬಗ್ಗೆ ನಾಯಕರು ಉಲ್ಲೇಖಿಸಿದರು. ನಮ್ಮ ದೇಶಗಳು ಹೆಚ್ಚು ಪರಿಪೂರ್ಣ ಒಕ್ಕೂಟಗಳಾಗಲು ಮತ್ತು ನಮ್ಮ ಹಂಚಿಕೆಯ ಭವಿಷ್ಯವನ್ನು ತಲುಪಲು ಪ್ರಯತ್ನಿಸುತ್ತಿರುವುದರಿಂದ ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಕಾನೂನಿನ ನಿಯಮ, ಮಾನವ ಹಕ್ಕುಗಳು, ಬಹುತ್ವ ಮತ್ತು ಎಲ್ಲರಿಗೂ ಸಮಾನ ಅವಕಾಶಗಳನ್ನು ಎತ್ತಿಹಿಡಿಯುವಲ್ಲಿ ಯುಎಸ್-ಭಾರತ ಪಾಲುದಾರಿಕೆಯು ಆಧಾರವಾಗಿರಬೇಕು ಎಂದು ನಾಯಕರು ದೃಢಪಡಿಸಿದರು. ಯುಎಸ್-ಭಾರತ ಪ್ರಮುಖ ರಕ್ಷಣಾ ಪಾಲುದಾರಿಕೆಯನ್ನು ಜಾಗತಿಕ ಭದ್ರತೆ ಮತ್ತು ಶಾಂತಿಯ ಆಧಾರಸ್ತಂಭವನ್ನಾಗಿ ಮಾಡಿದ ಪ್ರಗತಿಯನ್ನು ನಾಯಕರು ಶ್ಲಾಘಿಸಿದರು, ಕಾರ್ಯಾಚರಣೆಯಲ್ಲಿ ಸಮನ್ವಯದ ಹೆಚ್ಚಳ, ಮಾಹಿತಿ ಹಂಚಿಕೆ ಮತ್ತು ರಕ್ಷಣಾ ಕೈಗಾರಿಕಾ ನಾವೀನ್ಯತೆಯ ಪ್ರಯೋಜನಗಳನ್ನು ಎತ್ತಿ ತೋರಿಸಿದರು. ಅಧ್ಯಕ್ಷ ಬೈಡೆನ್ ಮತ್ತು ಪ್ರಧಾನಿ ಮೋದಿ ಅವರು ನಮ್ಮ ಜನರು, ನಮ್ಮ ನಾಗರಿಕ ಮತ್ತು ಖಾಸಗಿ ವಲಯಗಳು ಮತ್ತು ಆಳವಾದ ಬಂಧಗಳನ್ನು ರೂಪಿಸಲು ತಮ್ಮ ಸರ್ಕಾರಗಳ ದಣಿವರಿಯದ ಪ್ರಯತ್ನಗಳು ಮುಂಬರುವ ದಶಕಗಳಲ್ಲಿ ಯುಎಸ್-ಭಾರತ ಪಾಲುದಾರಿಕೆಯನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲಿವೆ ಎಂಬ ಬಗ್ಗೆ ನಿರಂತರ ಆಶಾವಾದ ಮತ್ತು ಅತ್ಯಂತ ವಿಶ್ವಾಸವನ್ನು ವ್ಯಕ್ತಪಡಿಸಿದರು."ಸೌಭಾಗ್ಯ ಯೋಜನೆಯು ಭಾರತದ ಕೋಟಿಗಟ್ಟಲೆ ಜನರ ಜೀವನವನ್ನು ಬೆಳಗಿಸುತ್ತದೆ ಮತ್ತು ಭಾರತದ ಅಭಿವೃದ್ಧಿ ಪ್ರವಾಸಕ್ಕೆ ಉಡಾವಣೆ ನೀಡಲಿದೆ : ಪ್ರಧಾನಿ "
September 25th, 08:34 pm
ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಪ್ರಧಾನ್ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜಾನಾ-ಸೌಭಾಗ್ಯವನ್ನು ಆರಂಭಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಕಳೆದ ಕೆಲವು ವರ್ಷಗಳಿಂದ ದೇಶಾದ್ಯಂತ ಜನರ ಜೀವನವನ್ನು ರೂಪಾಂತರಿಸಿದ ಹಲವು ಉಪಕ್ರಮಗಳ ಬಗ್ಗೆ ಒತ್ತಿ ಹೇಳಿದರುಪ್ರಧಾನಮಂತ್ರಿ ಸೌಭಾಗ್ಯ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ; ದೇಶಕ್ಕೆ ದೀನ ದಯಾಳ್ ಶಕ್ತಿ ಭವನ ಸಮರ್ಪಣೆ
September 25th, 08:28 pm
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿಯವರು ಬಡವರಲ್ಲೇ ಕಡು ಬಡವರಿಗೆ ಪ್ರಯೋಜನಕಾರಿಯಾದ ಯೋಜನೆಗಳನ್ನು ಸರ್ಕಾರ ಹೇಗೆ ಅನುಷ್ಠಾನಗೊಳಿಸುತ್ತಿದೆ ಎಂಬ ಬಗ್ಗೆ ತಿಳಿಸಿದ ಅವರು ಜನ್ ಧನ್ ಯೋಜನೆ, ವಿಮಾ ಯೋಜನೆಗಳು, ಮುದ್ರಾ ಯೋಜನೆ, ಉಜ್ವಲ ಯೋಜನೆ ಮತ್ತು ಉಡಾಣ್ ನ ಯಶಸ್ಸಿನ ಪ್ರಸ್ತಾಪ ಮಾಡಿದರು.ಸೋಶಿಯಲ್ ಮೀಡಿಯಾ ಕಾರ್ನರ್ - ಏಪ್ರಿಲ್ 15
April 15th, 07:24 pm
ನಿಮ್ಮ ದೈನಂದಿನ ಆಡಳಿತವನ್ನು ಸಾಮಾಜಿಕ ಮಾದ್ಯಮದಿಂದ ನವೀಕರಣಗೊಳಿಸಲಾಗುತ್ತದೆ.ಆಡಳಿತ ನಿಮ್ಮ ಟ್ವೀಟ್ಗಳನ್ನು ದೈನಂದಿನ ಇಲ್ಲಿ ತೋರಿಸುತ್ತದೆ . ಓದಿ ಮತ್ತು ಹಂಚಿಕೊಳ್ಳಿ !The United States and India: Enduring Global Partners in the 21st Century'...the India-US Joint Statement
June 08th, 02:26 am
Neil Armstrong’s small step created a new universe for mankind!
August 26th, 12:02 pm
Neil Armstrong’s small step created a new universe for mankind!