ಶೇರ್
 
Comments
ವಾರಣಸಿಯ ಜನರಿಗೆ ಸಾಧ್ಯವಿರುವ ಎಲ್ಲಾ ರೀತಿಯ ಸಹಾಯವನ್ನು ಆಡಳಿತ ವ್ಯವಸ್ಥೆ ಅತ್ಯಂತ ಸೂಕ್ಷ್ಮತೆಯಿಂದ ಒದಗಿಸಬೇಕು: ಪ್ರಧಾನಮಂತ್ರಿ
“ಎರಡು ಗಜ ಅಂತರ, ಮುಖಗವಸು ಅಗತ್ಯ”; 45 ವಯೋಮಿತಿ ಮೇಲ್ಪಟ್ಟವರಿಗೆ ಲಸಿಕೆ ನೀಡುವುದನ್ನು ಆಡಳಿತ ಖಚಿತಪಡಿಸಿಕೊಳ್ಳಬೇಕು; ಪ್ರಧಾನಮಂತ್ರಿ
ಸೋಂಕಿನ ಜಾಡು, ಪತ್ತೆ ಮತ್ತು ಪರೀಕ್ಷೆ ಸೂತ್ರಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ: ಮೊದಲ ಅಲೆಯಂತೆ ಎರಡನೇ ಅಲೆಯ ವಿರುದ್ಧ ಹೋರಾಡುವುದು ಅತ್ಯಂತ ಅಗತ್ಯ
ಕೋವಿಡ್ ಸೋಂಕು ನಿಯಂತ್ರಣಕ್ಕೆ ಸರ್ಕಾರ ಮತ್ತು ಸಮಾಜದ ನಡುವೆ ಸಹಕಾರ ಅಗತ್ಯ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಾರಣಸಿ ಜಿಲ್ಲೆಯಲ್ಲಿ ಕೋವಿಡ್ 19 ಸ್ಥಿತಿಗತಿ ಕುರಿತು ವಿಡಿಯೋ ಕಾನ್ಪರೆನ್ಸ್ ಮೂಲಕ ಪ್ರಗತಿ ಪರಿಶೀಲನೆ ನಡೆಸಿದರು. ಸಭೆಯಲ್ಲಿ ಪ್ರಧಾನಮಂತ್ರಿ ಅವರು ಪರೀಕ್ಷೆ, ಹಾಸಿಗೆಗಳ ಲಭ್ಯತೆ, ಔಷಧ, ಲಸಿಕೆ ಮತ್ತು ಮಾನವ ಸಂಪನ್ಮೂಲ ಮತ್ತಿತರ ವಲಯಗಳ ಕುರಿತು ಮಾಹಿತಿ ಪಡೆದುಕೊಂಡರು. ಕೊರೋನಾ ಸೋಂಕು ನಿಯಂತ್ರಣ ಮತ್ತು ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಸಾರ್ವಜನಿಕರಿಗೆ ಸಾಧ್ಯವಿರುವ ಎಲ್ಲಾ ರೀತಿಯ ನೆರವನ್ನು ಒದಗಿಸಬೇಕು ಎಂದು ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.

ಸಭೆಯಲ್ಲಿ ಪ್ರಧಾನಮಂತ್ರಿ ಅವರು, “ಎರಡು ಗಜ ದೂರ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯ” ಎಂದು ಒತ್ತಿ ಹೇಳಿದರು. ಲಸಿಕೆ ಅಭಿಯಾನದ ಮಹತ್ವ ಕುರಿತು ಗಮನ ಸೆಳೆದ ಅವರು, 45 ವಯೋಮಿತಿ ಮೀರಿದ ಪ್ರತಿಯೊಬ್ಬರಿಗೂ ಆಡಳಿತ ಲಸಿಕೆ ಹಾಕಬೇಕು. ವಾರಣಸಿಯ ಜನರಿಗೆ ಸಾಧ್ಯವಿರುವ ಎಲ್ಲಾ ರೀತಿಯ ಸಹಾಯವನ್ನು ಆಡಳಿತ ವ್ಯವಸ್ಥೆ ಅತ್ಯಂತ ಸೂಕ್ಷ್ಮತೆಯಿಂದ ಒದಗಿಸಬೇಕು ಎಂದು ಹೇಳಿದರು.

ದೇಶದ ಎಲ್ಲಾ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ಸಮರ್ಪಿಸಿದ ಪ್ರಧಾನಮಂತ್ರಿ ಅವರು, ಈಗಲೂ ಸಂಕಷ್ಟದ ಸಂದರ್ಭದಲ್ಲಿ ಇವರೆಲ್ಲರೂ ಪ್ರಾಮಾಣಿಕತೆಯಿಂದ ತಮ್ಮ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಕಳೆದ ವರ್ಷದ ಅನುಭವದಿಂದ ನಾವು ಪಾಠ ಕಲಿಯಬೇಕು ಮತ್ತು ಎಚ್ಚರಿಕೆಯಿಂದ ಮುನ್ನಡೆಯಬೇಕು ಎಂದರು.

ವಾರಣಸಿಯ ಜನಪ್ರತಿನಿಧಿಗಳು, ಸಾಮಾನ್ಯ ಜನರಿಂದಲೂ ಸಹ ಸೂಕ್ತ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಕಳೆದ 5 ರಿಂದ 6 ವರ್ಷಗಳ ಅವಧಿಯಲ್ಲಿ ವಾರಣಸಿಯಲ್ಲಿ ವೈದ್ಯಕೀಯ ಮೂಲ ಸೌಕರ್ಯ ಆಧುನೀಕರಣ ಮತ್ತು ವಿಸ್ತರಣೆಯಿಂದಾಗಿ ಕೋರೋನಾ ವಿರುದ್ಧ ಹೋರಾಟ ಮಾಡಲು ಸಹಕಾರಿಯಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಇದೇ ಸಂದರ್ಭದಲ್ಲಿ ಹಾಸಿಗೆಗಳ ಲಭ್ಯತೆ, ತೀವ್ರ ನಿಗಾಘಟಕ – ಐಸಿಯು ಮತ್ತು ಆಮ್ಲಜನಕದ ಲಭ್ಯತೆಯನ್ನು ಹೆಚ್ಚಿಸಲಾಗಿದೆ. ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲಾ ಹಂತಗಳಲ್ಲಿ ತನ್ನ ಪ್ರಯತ್ನಗಳನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಒತ್ತಿ ಹೇಳಿದರು. “ಕಾಶಿ ಕೋವಿಡ್ ಪ್ರತಿಕ್ರಿಯಾ ಕೇಂದ್ರ” ವನ್ನು ಶೀಘ್ರವಾಗಿ ಸ್ಥಾಪಿಸಿರುವ ಮಾದರಿಯಲ್ಲಿ ವಾರಣಸಿ ಆಡಳಿತ ಎಲ್ಲಾ ಕ್ಷೇತ್ರಗಳಲ್ಲಿ ಕೆಲಸದ ವೇಗ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. 

ಸೋಂಕಿನ ಜಾಡು, ಪತ್ತೆ ಮತ್ತು ಪರೀಕ್ಷೆ ಸೂತ್ರಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ: ಕೊರೋನಾ ವಿರುದ್ಧ ಗೆಲುವು ಸಾಧಿಸಲು ಮೊದಲ ಅಲೆಯಂತೆ ಎರಡನೇ ಅಲೆಯ ವಿರುದ್ಧ ಹೋರಾಡಲು ಅದೇ ರೀತಿಯ ಕಾರ್ಯತಂತ್ರ ಅನುಸರಿಸುವುದು  ಅಗತ್ಯ. ಸೋಂಕಿನ ಜಾಡು ಪತ್ತೆ ಮಾಡಿ ಸೋಂಕಿತರ ಪರೀಕ್ಷಾ ವರದಿಯನ್ನು ತ್ವರಿತವಾಗಿ ಪಡೆಯಬೇಕು. ಮನೆಗಳಲ್ಲಿ ಪ್ರತ್ಯೇಕವಾಗಿ ವಾಸಿಸುವ ರೋಗಿಗಳು ಮತ್ತು ಅವರ ಕುಟುಂಬಗಳ ಕುರಿತು ಎಲ್ಲಾ ಜವಾಬ್ದಾರಿಗಳನ್ನು ಸೂಕ್ಷ್ಮ ರೀತಿಯಲ್ಲಿ ನಿರ್ವಹಿಸುವಂತೆ ಅವರು ಆಡಳಿತಕ್ಕೆ ನಿರ್ದೇಶನ ನೀಡಿದರು.

ವಾರಣಸಿಯಲ್ಲಿ ಸರ್ಕಾರದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಘಟನೆಗಳನ್ನು ಶ್ಲಾಘಿಸಿದ ಅವರು, ಇವರನ್ನು ಮತ್ತಷ್ಟು ಪ್ರೋತ್ಸಾಹಿಸಬೇಕು. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಜಾಗರೂಕತೆ ಮತ್ತು ಎಚ್ಚರಿಕೆಯಿಂದ ಇರುವಂತೆ ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು.

ಕೋವಿಡ್–19 ನಿಯಂತ್ರಣ ಮತ್ತು ಚಿಕಿತ್ಸೆ ಕುರಿತಂತೆ ವಾರಣಸಿಯ ವಲಯದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಿಡಿಯೋ ಕಾನ್ಪರೆನ್ಸ್ ಮೂಲಕವೇ ಮಾಹಿತಿ ನೀಡಿದರು. ಸೋಂಕಿತರ ಪತ್ತೆಗಾಗಿ ನಿಯಂತ್ರಣ ಕೊಠಡಿಗಳ ಸ್ಥಾಪನೆ, ಗೃಹ ವಾಸ್ತವ್ಯದ ಚಿಕಿತ್ಸೆಗಾಗಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಗಳ ಸ್ಥಾಪನೆ, ಅಂಬ್ಯುಲೆನ್ಸ್ ಸೌಲಭ್ಯಕ್ಕಾಗಿ ಪ್ರತ್ಯೇಕ ಸಹಾಯವಾಣಿ, ನಗರ ಪ್ರದೇಶಗಳಲ್ಲಿ ಹೆಚ್ಚುವರಿ ತ್ವರಿತ ಪ್ರತಿಕ್ರಿಯಾ ತಂಡಗಳ ಸ್ಥಾಪನೆ ಮತ್ತಿತರ ವಿವರಗಳನ್ನು ಪ್ರಧಾನಮಂತ್ರಿ ಅವರಿಗೆ ನೀಡಲಾಗಿದೆ.  ಈವರೆಗೆ ಕೋವಿಡ್–19 ಸೋಂಕು ನಿಯಂತ್ರಣ ಉದ್ದೇಶದಿಂದ 1,98,383 ಮಂದಿ ಮೊದಲ ಡೋಸ್ ಪಡೆದುಕೊಂಡಿದ್ದು, 35,014 ಮಂದಿ ಎರಡೂ ಡೋಸ್ ಗಳನ್ನು ಪಡೆದುಕೊಂಡಿದ್ದಾರೆ ಎಂದು ಪ್ರಧಾನಮಂತ್ರಿ ಅವರಿಗೆ ತಿಳಿಸಲಾಗಿದೆ.

ವಿಡಿಯೋ ಕಾನ್ಪರೆನ್ಸಿಂಗ್ ಸಂದರ್ಭದಲ್ಲಿ ಎಂ.ಎಲ್.ಸಿ ಮತ್ತು ವಾರಣಸಿಯ ಕೋವಿಡ್ ಉಸ್ತುವಾರಿ ಶ್ರೀ ಎ.ಕೆ. ಶರ್ಮಾ, ವಲಯದ ಮುಖ್ಯಸ್ಥ ದೀಪಕ್ ಅಗರ್ ವಾಲ್, ಪೊಲೀಸ್ ಆಯುಕ್ತ ಶ್ರೀ ಎ. ಸತೀಶ್ ಗಣೇಶ್, ಜಿಲ್ಲಾಧಿಕಾರಿ ಶ್ರೀ ಕೌಶಲ್ ರಾಜ್ ಶರ್ಮಾ, ನಗರ ಸಭೆ ಆಯುಕ್ತ ಶ್ರೀ ಗೌರಂಗ್ ರಥಿ, ಮುಖ್ಯ ವೈದ್ಯಾಧಿಕಾರಿ ಡಾ. ಎನ್.ಪಿ.ಸಿಂಗ್, ಐ.ಎಂ.ಎಸ್, ಬಿ.ಎಚ್.ಯು ನ ನಿರ್ದೇಶಕ ಮತ್ತು ಪ್ರಾಧ್ಯಾಪಕರಾದ ಬಿ.ಆರ್. ಮಿತ್ತಲ್, ರಾಜ್ಯ ಸಚಿವರಾದ ಶ್ರೀ ನೀಲಕಂಠ ತಿವಾರಿ ಮತ್ತು ಶ್ರೀ ರವೀಂದ್ರ ಜೈಸ್ವಾಲ್, ಸೊಹನಿಯಾದ ಶಾಸಕ ಶ್ರೀ ಸುರೇಂದ್ರ ನಾರಾಯಣ ಸಿಂಗ್, ಎಂ.ಎಲ್.ಸಿಗಳಾದ ಶ್ರೀ ಅಶೋಕ್ ಧವನ್ ಮತ್ತು ಲಕ್ಷ್ಮಣ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ಭಾರತದ ಒಲಿಂಪಿಯನ್‌ಗಳಿಗೆ ಸ್ಫೂರ್ತಿ ನೀಡಿ! #Cheers4India
Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
India's Remdesivir production capacity increased to 122.49 lakh vials per month in June: Government

Media Coverage

India's Remdesivir production capacity increased to 122.49 lakh vials per month in June: Government
...

Nm on the go

Always be the first to hear from the PM. Get the App Now!
...
PM speaks to West Bengal CM on flood situation in parts of the state
August 04, 2021
ಶೇರ್
 
Comments

The Prime Minister, Shri Narendra Modi has spoken to West Bengal Chief Minister Ms Mamata Banerjee on the flood situation caused by water discharge from dams in parts of the state. The Prime Minister also assured all possible support from the Centre to help mitigate the situation.

A PMO tweet said, "PM @narendramodi spoke to WB CM @MamataOfficial on the flood situation caused by water discharge from dams in parts of the state. PM assured all possible support from the Centre to help mitigate the situation.

PM Modi prays for the safety and wellbeing of those in affected areas."