ಶೈಲಪುತ್ರಿ ದೇವಿಗೆ ಪ್ರಾರ್ಥನೆ ಸಲ್ಲಿಕೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವರಾತ್ರಿಯ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ನವರಾತ್ರಿಯ ಆರಂಭದಲ್ಲಿ ಶ್ರೀ ಮೋದಿ ಅವರು ಶೈಲಪುತ್ರಿ ದೇವಿಗೆ  ಪ್ರಾರ್ಥನೆ ಸಲ್ಲಿಸಿದ್ದಾರೆ ಮತ್ತು ದೇವಿಯ ಕೃಪೆಯಿಂದ ಸಂತೋಷ, ಆರೋಗ್ಯ ಮತ್ತು ಸಮೃದ್ಧಿ ದೊರೆಯಲಿ ಎಂದು ಹಾರೈಸಿದ್ದಾರೆ. 

ಈ ಕುರಿತು ಪ್ರಧಾನಿಯವರು ಸರಣಿ ಟ್ವೀಟ್ ಮಾಡಿದ್ದಾರೆ;

"ನಿಮ್ಮೆಲ್ಲರಿಗೂ ಶಕ್ತಿಯ ಆರಾಧನೆಯ ಮಹಾನ್ ಹಬ್ಬ ನವರಾತ್ರಿಯ ಶುಭಾಶಯಗಳು. ಶ್ರದ್ಧೆ  ಮತ್ತು ನಂಬಿಕೆಯ ಈ ಮಂಗಳಕರ ಸಂದರ್ಭವು ಪ್ರತಿಯೊಬ್ಬರ ಜೀವನದಲ್ಲಿ ಹೊಸ ಶಕ್ತಿ ಮತ್ತು ಹೊಸ ಉತ್ಸಾಹವನ್ನು ತುಂಬಲಿ. ಜೈ ಮಾತಾ ದಿ!"

"ವಂದೇ ವಾಂಛಿತ ಲಾಭಾಯ
ಚಂದ್ರಾರ್ಧ ಕೃತ ಶೇಖರಾಮ್
ವೃಷಾರೂಡಾಂ ಶೂಲಧರಾಂ
ಶೈಲಪುತ್ರೀಂ ಯಶಸ್ವಿನೀಮ್

ಇಂದಿನಿಂದ ಶೈಲಪುತ್ರಿ ದೇವಿಯ ಆರಾಧನೆಯೊಂದಿಗೆ ನವರಾತ್ರಿ ಆರಂಭವಾಗುತ್ತಿದೆ. ದೇವಿಯ ಅನುಗ್ರಹದಿಂದ ಪ್ರತಿಯೊಬ್ಬರ ಜೀವನವು ಸಂತೋಷ, ಸಮೃದ್ಧಿ ಮತ್ತು ಆರೋಗ್ಯದಿಂದ ತುಂಬಿರಲಿ ಎಂದು ನಾನು ಹಾರೈಸುತ್ತೇನೆ.”

ಎಂದು ಪ್ರಧಾನಿಯವರು ಟ್ವೀಟ್ ಮಾಡಿದ್ದಾರೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Indian Railways clears ₹755-crore project to build third line between Champa and Korba

Media Coverage

Indian Railways clears ₹755-crore project to build third line between Champa and Korba
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 17 ಜೂನ್ 2026
June 17, 2026

PM Narendra Modi's Dual Legacy: Commanding Global Respect While Delivering Health Miracles, Rail Revolution & Digital Leadership