ಶೇರ್
 
Comments
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಅಂದರೆ 2019ರ ಫೆಬ್ರವರಿ 24ರಂದು ಉತ್ತರ ಪ್ರದೇಶದ ಗೋರಖ್ಪುರಕ್ಕೆ ಭೇಟಿ ನೀಡುತ್ತಿದ್ದಾರೆ.
 
ಗೋರಕ್ಫುರದಲ್ಲಿ ಪ್ರಧಾನಮಂತ್ರಿಯವರು ಪಿಎಂ-ಕಿಸಾನ್ ಯೋಜನೆಗೆ ಚಾಲನೆ ನೀಡಲಿದ್ದಾರೆ.
 
ಗೋರಖ್ಪುರದ ಭಾರತೀಯ ರಸಗೊಬ್ಬರ ನಿಗಮದ ಮೈದಾನದಲ್ಲಿ ಪ್ರಧಾನಮಂತ್ರಿಯವರು ಪಿಎಂ-ಕಿಸಾನ್ ಯೋಜನೆಯಡಿ ಆಯ್ದ ರೈತರಿಗೆ 2 ಸಾವಿರ ರೂಪಾಯಿಗಳ ಮೊದಲ ಕಂತಿನ ವಿದ್ಯುನ್ಮಾನ ವರ್ಗಾವಣೆ ಮಾಡುವುದಕ್ಕೆ ಗುಂಡಿ ಒತ್ತುವ ಮೂಲಕ ಚಾಲನೆ ನೀಡಲಿದ್ದಾರೆ. ಇದು ಪಿಎಂಕಿಸಾನ್ ಯೋಜನೆಗೆ ಅಧಿಕೃತ ಚಾಲನೆ ನೀಡಲಿದೆ.
 
ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಪ್ರಧಾನಮಂತ್ರಿಯವರು ಆಯ್ದ ರೈತರಿಗೆ ಪ್ರಮಾಣ ಪತ್ರಗಳನ್ನೂ ವಿತರಿಸಲಿದ್ದಾರೆ.
 
ಪಿ.ಎಂ. ಕಿಸಾನ್ ಫಲಾನುಭವಿಗಳೊಂದಿಗೂ ಪ್ರಧಾನಮಂತ್ರಿಯವರು ವಿಡಿಯೋಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.
 
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿ.ಎಂ. ಕಿಸಾನ್)
 
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿ.ಎಂ. ಕಿಸಾನ್) ಯನ್ನು 2019ರ ಫೆಬ್ರವರಿ 1ರಂದು 2019-20ರ ಮಧ್ಯಂತರ ಬಜೆಟ್ ನಲ್ಲಿ ಪ್ರಕಟಿಸಲಾಗಿತ್ತು.
 
ಈ ಯೋಜನೆಯಡಿ ಒಟ್ಟಾರೆ 2 ಹೆಕ್ಟೇರ್ ಗಿಂತ ಕಡಿಮೆ ಜಮೀನು ಹೊಂದಿರುವ/ಮಾಲಿಕತ್ವ ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತ ಕುಟುಂಬಗಳಿಗೆ ವಾರ್ಷಿಕ 6 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ.
 
ಈ ಹಣವನ್ನು  2 ಸಾವಿರ ರೂಪಾಯಿಗಳ ಮೂರು ಕಂತುಗಳಲ್ಲಿ ಪಾವತಿಸಲಾಗುತ್ತದೆ.
 
ಈ ಹಣವನ್ನು ನೇರ ಸವಲತ್ತು ವರ್ಗಾವಣೆಯ ಮೂಲಕ ಫಲಾನುಭವಿಗಳ ಬ್ಯಾಂಕ್ ಖ್ಯಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಡಿಬಿಟಿ ಇಡೀ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಖಾತ್ರಿಪಡಿಸುತ್ತದೆ ಮತ್ತು ರೈತರ ಸಮಯ ಉಳಿಸುತ್ತದೆ.
 
ಸಣ್ಣ ಮತ್ತು ಅತಿ ಸಣ್ಣ ರೈತರ (ಎಸ್.ಎಂ.ಎಫ್.ಗಳು) ಆದಾಯ ಹೆಚ್ಚಿಸಲು ಈ ಯೋಜನೆ ಪರಿಚಯಿಸಲಾಗುತ್ತಿದೆ. ಈ ಯೋಜನೆ ಸುಮಾರು 12 ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರಯೋಜನಕಾರಿಯಾಗಲಿದೆ ಎಂದು ಅಂದಾಜು ಮಾಡಲಾಗಿದೆ.
 
ಪಿ.ಎಂ. ಕಿಸಾನ್ ಯೋಜನೆ, ರೈತರಿಗೆ ಪ್ರತಿ ಬೆಳೆ ಋತುವಿನ ಕೊನೆಯಲ್ಲಿ ನಿರೀಕ್ಷಿತ ಕೃಷಿ ಆದಾಯಕ್ಕೆ ಅನುಗುಣವಾಗುವಂತೆ ತಮ್ಮ ಬೆಳೆಯ ಆರೋಗ್ಯ ಮತ್ತು ಸೂಕ್ತ ಇಳುವರಿಯನ್ನು ಖಾತ್ರಿಪಡಿಸಿಕೊಳ್ಳಲು ಅಗತ್ಯವಾದ ವಿವಿಧ ವಸ್ತುಗಳನ್ನು ದಾಸ್ತಾನುಮಾಡಿಕೊಳ್ಳಲು ಎಸ್.ಎಂ.ಎಫ್.ಗಳ ಆರ್ಥಿಕ ಅಗತ್ಯಗಳಿಗೆ ಪೂರಕವಾಗುವ ಗುರಿಯನ್ನು ಹೊಂದಿದೆ. ಇದು ಅಂಥ ವೆಚ್ಚಗಳಿಗಾಗಿ ರೈತರು ಸಾಲದ ಸುಳಿಯಲ್ಲಿ ಸಿಲುಕುವುದರಿಂದ ತಪ್ಪಿಸುತ್ತದೆ ಮತ್ತು ಅವರು ಕೃಷಿ ಚಟುವಟಿಕೆಯಲ್ಲಿ ಮುಂದುವರೆಯುವುದನ್ನು ಖಾತ್ರಿಪಡಿಸುತ್ತದೆ.
 
ಪಿ.ಎಂ. ಕಿಸಾನ್ ಕೇಂದ್ರ ವಲಯ ಯೋಜನೆಯಾಗಿದ್ದು, ಇದಕ್ಕೆ ಭಾರತ ಸರ್ಕಾರವೇ ನೂರಕ್ಕೆ ನೂರು ಹಣ ಒದಗಿಸುತ್ತದೆ. ಈ ಯೋಜನೆ ಅರ್ಹ ಫಲಾನುಭವಿಗಳಿಗೆ ಸವಲತ್ತು ವರ್ಗಾವಣೆ ಮಾಡಲು 1.12.2018ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ.
 
ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು ಮಾರ್ಗಸೂಚಿಯನ್ವಯ  ಯೋಜನೆಗೆ ಬೆಂಬಲ ನೀಡಲು ರೈತರ ಕುಟುಂಬಗಳನ್ನು ಗುರುತಿಸುತ್ತವೆ.
 
ಪಿಎಂ. ಕಿಸಾನ್ ಒಂದು ಕ್ರಾಂತಿಕಾರಿ ಯೋಜನೆಯಾಗಿದ್ದು, ಪ್ರತಿ ವರ್ಷ ಖಾತ್ರಿ ಪಡಿಸಿದ ಆರ್ಥಿಕ ನೆರವನ್ನು ಮೂರು ಕಂತುಗಳಲ್ಲಿ ಒದಗಿಸುವ ಮೂಲಕ  ಭಾರತದ ಸಣ್ಣ ಮತ್ತು ಅತಿ ಸಣ್ಣ ರೈತರ ಜೀವನವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಡಿಬಿಐ ಮೂಲಕ ಯೋಜನೆ ಅನುಷ್ಠಾನವಾಗಲಿದ್ದು, ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೇ ನೇರವಾಗಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ, ಆ ಮೂಲಕ ಭ್ರಷ್ಟಾಚಾರ ಮತ್ತು ಮಧ್ಯವರ್ತಿಗಳನ್ನು ನಿರ್ಮೂಲನೆ ಮಾಡುತ್ತದೆ. ಒಂದು ಬಾರಿ ಸಾಲ ಮನ್ನಾ ಮಾಡುವ ಬದಲು, ಪಿ.ಎಂ. ಕಿಸಾನ್ ಸಣ್ಣ ಪ್ರಮಾಣದ ರೈತರ ಸಬಲೀಕರಣದ ಖಾತ್ರಿಗಾಗಿ ರೂಪಿಸಲಾಗಿರುವ ವಾಸ್ತವ ಯೋಜನೆಯಾಗಿದೆ. ದೀರ್ಘಾವಧಿಯಲ್ಲಿ ಈ ಯೋಜನೆ ರೈತರ ವಲಸೆಯನ್ನು ತಪ್ಪಿಸಿ, ಬೆಳೆ ತೀವ್ರತೆಯನ್ನು ಸುಧಾರಿಸುತ್ತದೆ.
 
ಪ್ರಧಾನಮಂತ್ರಿಯವರು ಗೋರಖ್ಪುರದಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಸಲಿದ್ದು/ ದೇಶಕ್ಕೆಸಮರ್ಪಣೆ ಮಾಡಲಿದ್ದಾರೆ. ಸಭಿಕರನ್ನುದ್ದೇಶಿ ಭಾಷಣ ಮಾಡಲಿದ್ದಾರೆ.
 
ಪ್ರಧಾನಮಂತ್ರಿಯವರು ಗೋರಖ್ಪುರದಲ್ಲಿ ಚಾಲನೆ ನೀಡಲಿರುವ ಈ ಅಭಿವೃದ್ಧಿ ಯೋಜನೆಗಳು ಅನಿಲ ಮೂಲಸೌಕರ್ಯದಿಂದ ಹಿಡಿದು ಆರೋಗ್ಯದವರೆಗಿವೆ. ಈ ಯೋಜನೆಗಳು ಉತ್ತರ ಪ್ರದೇಶದ ಜನರಿಗೆ ಅಗಾಧ ಪ್ರಯೋಜನ ತರಲಿವೆ.

 

ನಿಮ್ಮ ಸಲಹೆ ಸೂಚನೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಿ.
20 ವರ್ಷಗಳ ಸೇವಾ ಮತ್ತು ಸಮರ್ಪಣದ 20 ಚಿತ್ರಗಳು
Explore More
ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಸೈನಿಕರ ಜೊತೆ ದೀಪಾವಳಿ ಆಚರಣೆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರ ಸಂವಾದ

ಜನಪ್ರಿಯ ಭಾಷಣಗಳು

ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಸೈನಿಕರ ಜೊತೆ ದೀಪಾವಳಿ ಆಚರಣೆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರ ಸಂವಾದ
India exports Rs 27,575 cr worth of marine products in Apr-Sept: Centre

Media Coverage

India exports Rs 27,575 cr worth of marine products in Apr-Sept: Centre
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 8 ಡಿಸೆಂಬರ್ 2021
December 08, 2021
ಶೇರ್
 
Comments

The country exported 6.05 lakh tonnes of marine products worth Rs 27,575 crore in the first six months of the current financial year 2021-22

Citizens rejoice as India is moving forward towards the development path through Modi Govt’s thrust on Good Governance.