ಭಾರತಕ್ಕೆ ಪ್ರಥಮ ಬಾರಿ ಭೇಟಿ ನೀಡಿದ ಅಮೆರಿಕದ ನ್ಯೂಜೆರ್ಸಿ ಗವರ್ನರ್ ಫಿಲಿಪ್ ಡಿ. ಮರ್ಪಿ ಅವರು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಮರ್ಪಿ ಅವರು ದೆಹಲಿ ಪ್ರವಾಸದ ಬಳಿಕ ಆಗ್ರಾ, ಮುಂಬೈ, ಹೈದರಾಬಾದ್ ಮತ್ತು ಅಹಮದಾಬಾದ್ಗೂ ಭೇಟಿ ನೀಡಲಿದ್ದಾರೆ.
ಭಾರತ ಮತ್ತು ನ್ಯೂಜೆರ್ಸಿ ನಡುವೆ ಇನ್ನೂ ಹೆಚ್ಚಿನ ವಾಣಿಜ್ಯ ಮತ್ತು ಜನರ ನಡುವಣ ಸಂಬಂಧವನ್ನು ಉತ್ತೇಜಿಸುವ ಕ್ರಮಗಳಿಗೆ ಹೆಚ್ಚಿನ ಆಸಕ್ತಿ ತೋರಬೇಕು. ಭಾರತದ ರಾಜ್ಯಗಳ ಜತೆ ಹೆಚ್ಚಿನ ಸಹಕಾರವನ್ನು ನಿರೀಕ್ಷಿಸುತ್ತೇವೆ ಎನ್ನುವ ಗವರ್ನರ್ ಮರ್ಪಿ ಅವರ ಅಭಿಪ್ರಾಯವನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಸ್ವಾಗತಿಸಿದರು. ಈ ನಿಟ್ಟಿನಲ್ಲಿ ಕೈಗೊಳ್ಳುವ ಎಲ್ಲ ನಿರ್ಧಾರಗಳಿಗೆ ಭಾರತ ಸರ್ಕಾರ ಬೆಂಬಲ ನೀಡುತ್ತದೆ ಎಂದು ತಿಳಿಸಿದರು.
ನ್ಯೂಜೆರ್ಸಿ ಜತೆ ಭಾರತದ ಸಂಬಂಧವನ್ನು ಗವರ್ನರ್ ಮರ್ಫಿ ಅವರು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ವಿವರಿಸಿದರು. ಭಾರತದ ಜತೆಗೆ, ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಲು ಬದ್ಧರಾಗಿದ್ದೇವೆ ಎಂದು ತಿಳಿಸಿದರು. ಭಾರತ ಮತ್ತು ನ್ಯೂಜೆರ್ಸಿ ನಡುವೆ ಇರುವೆ ಸಾಮ್ಯತೆಗಳನ್ನು ಅವರು ಈ ಸಂದರ್ಭದಲ್ಲಿ ವಿವರಿಸಿದರು. ಭಾರತದಲ್ಲಿನ ವೈವಿಧ್ಯತೆ ಮತ್ತು ಬಹುತ್ವಕ್ಕೆ ನೀಡುತ್ತಿರುವ ಗೌರವ ಅಗಾಧವಾದುದು. ಭಾರತಕ್ಕೆ ಆಗಮಿಸಿದ ಕ್ಷಣದಿಂದ ಇವೆಲ್ಲವನ್ನೂ ನಾನು ನೋಡಿದ್ದೇನೆ ಎಂದು ವಿವರಿಸಿದರು.
ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಇರುವ ರಾಜ್ಯ ನ್ಯೂಜೆರ್ಸಿಯಲ್ಲಿ ಭಾರತದ ವ್ಯಾಪಾರ ಮತ್ತು ಹೂಡಿಕೆಗೆ ಅತ್ಯಂತ ಪ್ರಾಶಸ್ತ್ರ್ಯದ ಸ್ಥಳವಾಗಿದೆ. ‘ಸ್ಟೆಮ್’ ಮತ್ತು ಉಅಮೆರಿಕದಲ್ಲೇ ನ್ನತ ಶಿಕ್ಷಣದಲ್ಲಿ ಮಹತ್ವದ ಸಹಕಾರ ನೀಡುವ ಬಗ್ಗೆ ಉಭಯ ನಾಯಕರು ಒಪ್ಪಿಗೆ ನೀಡಿದರು.