ಉತ್ತರ ಪ್ರದೇಶದ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಂತ Iರ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

March 28th, 12:15 pm

ಉದ್ಘಾಟನೆ ನೆರವೇರಿದೆಯೇ? ಉದ್ಘಾಟನೆ ನೆರವೇರಿದೆಯೇ? ಇನ್ನೂ ಇಲ್ಲ, ಈಗ ಅರ್ಧ ಕೆಲಸ ಮಾತ್ರವೇ ಮುಗಿದಿದೆ. ನಾನು ಆ ಪರದೆಯನ್ನು ಮಾತ್ರ ಸರಿಸಿದ್ದೇನೆ, ಆದರೆ ಇಂದು ಈ ವಿಮಾನ ನಿಲ್ದಾಣದ ಉದ್ಘಾಟನೆಯನ್ನು ಇಲ್ಲಿ ಹಾಜರಿರುವ ನೀವೆಲ್ಲರೂ ಮಾಡಬೇಕೆಂದು ನಾನು ಬಯಸುತ್ತೇನೆ. ಆದ್ದರಿಂದ, ನಿಮ್ಮ ಮೊಬೈಲ್ ಫೋನ್‌ಗಳನ್ನು ಹೊರತೆಗೆಯಿರಿ, ನಿಮ್ಮ ಮೊಬೈಲ್ ಫೋನ್‌ನ ದೀಪವನ್ನು ಆನ್ ಮಾಡಿ, ನೀವೇ ಅದನ್ನು ಉದ್ಘಾಟಿಸುತ್ತಿದ್ದೀರಿ. ದೀಪವನ್ನು ಬೆಳಗುವ ಮೂಲಕ, ಇಲ್ಲಿ ಹಾಜರಿರುವ ಪ್ರತಿಯೊಬ್ಬರೂ ಇಂದು ಈ ವಿಮಾನ ನಿಲ್ದಾಣವನ್ನು ಉದ್ಘಾಟಿಸುತ್ತಿದ್ದಾರೆ. ಇದು ನಿಮ್ಮ ಆಸ್ತಿ, ಇದು ನಿಮ್ಮ ಭವಿಷ್ಯ, ಇದು ನಿಮ್ಮ ಕಠಿಣ ಪರಿಶ್ರಮ. ಆದ್ದರಿಂದ ಇದರ ಉದ್ಘಾಟನೆಯನ್ನು ನಿಮ್ಮ ಕೈಗಳಿಂದಲೇ ಮಾಡಲಾಗುತ್ತಿದೆ. ಭಾರತ ಮಾತೆಗೆ ಜಯವಾಗಲಿ ಎಂದು ಹೇಳುವ ಮೂಲಕ, ನಿಮ್ಮ ಕೈಗಳನ್ನು ಮೇಲಕ್ಕೆತ್ತಿ, ದೀಪವನ್ನು ಸಂಪೂರ್ಣ ತೋರಿಸಿ. ಭಾರತ ಮಾತೆಗೆ ಜಯವಾಗಲಿ! ಭಾರತ ಮಾತೆಗೆ ಜಯವಾಗಲಿ! ಭಾರತ ಮಾತೆಗೆ ಜಯವಾಗಲಿ! ತುಂಬು ಧನ್ಯವಾದಗಳು. ಈಗ ಉದ್ಘಾಟನೆ ಪೂರ್ಣವಾಗಿದೆ.

ಸುಮಾರು ₹11,200 ಕೋಟಿ ಹೂಡಿಕೆಯೊಂದಿಗೆ ಅಭಿವೃದ್ಧಿಪಡಿಸಲಾದ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಂತ I ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

March 28th, 12:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಜೇವರ್‌ನಲ್ಲಿರುವ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತಮ್ಮ ಹೆಮ್ಮೆ ಮತ್ತು ಸಂತೋಷವನ್ನು ವ್ಯಕ್ತಪಡಿಸಿದ ಪ್ರಧಾನಮಂತ್ರಿ , ಇಂದು ವಿಕ್ಷಿತ್ ಯುಪಿ, ವಿಕಸಿತ ಭಾರತ ಅಭಿಯಾನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿದೆ ಎಂದು ಹೇಳಿದರು. ಭಾರತದ ಅತಿದೊಡ್ಡ ರಾಜ್ಯವು ಈಗ ಅತಿ ಹೆಚ್ಚು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ ಎಂಬುದರತ್ತ ಅವರು ಗಮನ ಸೆಳೆದರು. ಮೊದಲನೆಯದಾಗಿ, ಈ ವಿಮಾನ ನಿಲ್ದಾಣದ ಅಡಿಪಾಯವನ್ನು ಹಾಕಿದ್ದಕ್ಕಾಗಿ ಮತ್ತು ಈಗ ಅದನ್ನು ಉದ್ಘಾಟಿಸಿದ್ದಕ್ಕಾಗಿ ಹಾಗು ಎರಡನೆಯದಾಗಿ, ಈ ಭವ್ಯ ವಿಮಾನ ನಿಲ್ದಾಣದ ಹೆಸರು ಉತ್ತರ ಪ್ರದೇಶದೊಂದಿಗೆ ಸಂಬಂಧ ಹೊಂದಿರುವುದರಿಂದಾಗಿ ತಮಗೆ ಎರಡು ಪಟ್ಟು ಹೆಮ್ಮೆಯಾಗಿದೆ ಎಂದು ಪ್ರಧಾನಮಂತ್ರಿ ಮೋದಿ ಸಂತಸ ಹಂಚಿಕೊಂಡರು. ನನ್ನನ್ನು ತನ್ನ ಪ್ರತಿನಿಧಿಯಾಗಿ ಆಯ್ಕೆ ಮಾಡಿ ಸಂಸತ್ ಸದಸ್ಯನನ್ನಾಗಿ ಮಾಡಿದ ರಾಜ್ಯ ಇದು, ಮತ್ತು ಅದರ ಗುರುತು ಈಗ ಈ ಭವ್ಯ ವಿಮಾನ ನಿಲ್ದಾಣದೊಂದಿಗೆ ಸಂಬಂಧ ಹೊಂದಿದೆ ಎಂದು ಶ್ರೀ ಮೋದಿ ಹೇಳಿದರು.

ಉತ್ತರ ಪ್ರದೇಶದ ಜೇವಾರ್ ನಲ್ಲಿ ನೋಯ್ಡಾ ಅಂತಾರಾಷ್ಟ್ರೀಯ ಏರ್ ಪೋರ್ಟ್ ನಿರ್ಮಾಣದ ಶಂಕುಸ್ಥಾಪನೆ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಭಾಷಣ

November 25th, 01:06 pm

ಉತ್ತರ ಪ್ರದೇಶದ ಅತ್ಯಂತ ಜನಪ್ರಿಯ ಮತ್ತು ಕರ್ಮಯೋಗಿ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಜಿ, ನಮ್ಮ ಚೈತನ್ಯಶಾಲಿ ಹಳೆಯ ಸಹೋದ್ಯೋಗಿ ಮತ್ತು ಉಪಮುಖ್ಯಮಂತ್ರಿ ಶ್ರೀ ಕೇಶವಪ್ರಸಾದ್ ಮೌರ್ಯ ಜಿ, ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಜಿ, ಜನರಲ್ ವಿ.ಕೆ. ಸಿಂಗ್ ಜಿ, ಸಜೀವ್ ಬಲ್ಯಾನ್ ಜಿ, ಎಸ್.ಪಿ. ಸಿಂಗ್ ಬಘೇಲ್ ಜಿ ಮತ್ತು ಬಿ ಎಲ್ ವರ್ಮ ಜಿ, ಉತ್ತರ ಪ್ರದೇಶ ಸರ್ಕಾರದ ಸಚಿವರಾದ ಶ್ರೀ ಲಕ್ಷ್ಮಿನಾರಾಯಣ್ ಚೌಧರಿ ಜಿ, ಶ್ರೀ ಜೈಪ್ರತಾಪ್ ಸಿಂಗ್ ಜಿ, ಶ್ರೀಕಾಂತ್ ಶರ್ಮಾ ಜಿ, ಭುಪೇಂದ್ರ ಚೌಧರಿ ಜಿ, ಶ್ರೀ ನಂದಗೋಪಾಲ್ ಗುಪ್ತ ಜಿ, ಅನಿಲ್ ಶರ್ಮಾ ಜಿ, ಧರಂಸಿಂಗ್ ಸೈನಿ ಜಿ, ಅಶೋಕ್ ಕಠಾರಿಯಾ ಜಿ ಮತ್ತು ಶ್ರೀ ಜಿ.ಎಸ್. ಧರ್ಮೇಶ್ ಜಿ, ಸಂಸತ್ತಿನ ನನ್ನ ಸಹೋದ್ಯೋಗಿಗಳಾದ ಡಾ. ಮಹೇಶ್ ಶರ್ಮಾ ಜಿ, ಸುರೇಂದ್ರ ಸಿಂಗ್ ನಗರ್ ಜಿ, ಶ್ರೀ ಭೋಲಾ ಸಿಂಗ್ ಜಿ, ಸ್ಥಳೀಯ ಶಾಸಕ ಶ್ರೀ ಧೀರೇಂದ್ರ ಸಿಂಗ್ ಜಿ, ವೇದಿಕೆಯಲ್ಲಿ ಉಪಸ್ಥಿತರಿರುವ ಎಲ್ಲಾ ಜನಪ್ರತಿನಿಧಿಗಳು ಹಾಗೂ ನಮ್ಮೆಲ್ಲರನ್ನು ಆಶೀರ್ವದಿಸಲು ಇಲ್ಲಿಗೆ ಅಪಾರ ಸಂಖ್ಯೆಯಲ್ಲಿ ಬಂದಿರುವ ನನ್ನ ಪ್ರೀತಿಯ ಸಹೋದರ, ಸಹೋದರಿಯರೆ.....

ಉತ್ತರಪ್ರದೇಶದ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೇರವೇರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

November 25th, 01:01 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರಪ್ರದೇಶದಲ್ಲಿ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಉತ್ತರಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ, ಜನರಲ್ ವಿ.ಕೆ.ಸಿಂಗ್, ಶ್ರೀ ಸಂಜೀವ್ ಬಲಿಯಾನ್, ಶ್ರೀ ಎಸ್.ಪಿ.ಸಿಂಗ್ ಬಘೇಲಾ ಮತ್ತು ಶ್ರೀ ಬಿ.ಎಲ್. ವರ್ಮ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನವೆಂಬರ್ 25ರಂದು ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಿ

November 23rd, 09:29 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ನವೆಂಬರ್ 25ರಂದು ಮಧ್ಯಾಹ್ನ 1 ಗಂಟೆಗೆ ಉತ್ತರ ಪ್ರದೇಶದ ಗೌತಮಬುದ್ಧ ನಗರದ ಜೆವಾರ್‌ನಲ್ಲಿ ʻನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣʼಕ್ಕೆ (ಎನ್‌ಐಎ) ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದರೊಂದಿಗೆ ಉತ್ತರ ಪ್ರದೇಶವು ಐದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ಭಾರತದ ಏಕೈಕ ರಾಜ್ಯವೆಂಬ ಹೆಗ್ಗಳಿಕೆ ಪಡೆಯಲಿದೆ.