ಭಾರತ - ಕ್ರೊಯೇಷಿಯಾ ನಾಯಕರ ಹೇಳಿಕೆ

June 19th, 06:06 pm

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭೇಟಿಯು ದ್ವಿಪಕ್ಷೀಯ ಪಾಲುದಾರಿಕೆಗೆ ಹೊಸ ವೇಗವನ್ನು ನೀಡಿದ್ದು, ವಿಶೇಷವಾಗಿ ಪ್ರವಾಸೋದ್ಯಮ, ವ್ಯಾಪಾರ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಎರಡೂ ಆರ್ಥಿಕತೆಗಳ ಪೂರಕತೆಯನ್ನು ಎತ್ತಿ ತೋರಿಸಿದೆ. (i) ಕೃಷಿ ಸಹಕಾರದ ಕುರಿತಾದ ತಿಳುವಳಿಕಾ ಒಡಂಬಡಿಕೆ; (ii) ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಹಕಾರ ಕಾರ್ಯಕ್ರಮ; (iii) ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ (ಸಿ.ಇ.ಪಿ-CEP); ಮತ್ತು (iv) ಜಾಗ್ರೆಬ್ ವಿಶ್ವವಿದ್ಯಾಲಯದಲ್ಲಿ ಹಿಂದಿ ಪೀಠವನ್ನು ಸ್ಥಾಪಿಸುವ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿರುವುದನ್ನು ಇಬ್ಬರೂ ಪ್ರಧಾನಮಂತ್ರಿಗಳು ಸ್ವಾಗತಿಸಿದರು.

ಕ್ರೊಯೇಷಿಯಾ ಗಣರಾಜ್ಯದ ಅಧ್ಯಕ್ಷರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

June 18th, 11:58 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕ್ರೊಯೇಷಿಯಾ ಗಣರಾಜ್ಯದ ಅಧ್ಯಕ್ಷ ಘನತೆವೆತ್ತ ಜೋರಾನ್ ಮಿಲನೋವಿಕ್ ಅವರನ್ನು ಝಾಗ್ರೆಬ್ ನಲ್ಲಿ ಭೇಟಿಯಾದರು.

ಕ್ರೊಯೇಷಿಯಾ ಗಣರಾಜ್ಯದ ಪ್ರಧಾನಮಂತ್ರಿ ಅವರನ್ನು ಭೇಟಿಯಾದ ಪ್ರಧಾನಮಂತ್ರಿ

June 18th, 11:40 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಾಗ್ರೆಬ್‌ನಲ್ಲಿ ಕ್ರೊಯೇಷಿಯಾ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಆಂಡ್ರೆಜ್ ಪ್ಲೆಂಕೋವಿಕ್ ಅವರನ್ನು ಭೇಟಿ ಮಾಡಿದರು. ಇದು ಕ್ರೊಯೇಷಿಯಾಕ್ಕೆ ಭಾರತೀಯ ಪ್ರಧಾನ ಮಂತ್ರಿಯೊಬ್ಬರು ನೀಡಿದ ಮೊದಲ ಭೇಟಿಯಾಗಿದ್ದು, ಭಾರತ-ಕ್ರೊಯೇಷಿಯಾ ಸಂಬಂಧಗಳಲ್ಲಿ ಇದು ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಐತಿಹಾಸಿಕ ಬನ್ಸ್ಕಿ ಡ್ವೋರಿ ಅರಮನೆಗೆ ಆಗಮಿಸಿದ ಪ್ರಧಾನ ಮಂತ್ರಿ ಅವರನ್ನು ಕ್ರೊಯೇಷಿಯಾ ಪ್ರಧಾನಿ ಪ್ಲೆಂಕೋವಿಕ್ ಬರಮಾಡಿಕೊಂಡು, ಔಪಚಾರಿಕ ಸ್ವಾಗತ ನೀಡಿದರು. ದಿನದ ಆರಂಭದಲ್ಲಿ, ಪ್ರಧಾನ ಮಂತ್ರಿಯವರು ಜಾಗ್ರೆಬ್‌ನ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ವಿಶೇಷ ಮತ್ತು ಆತ್ಮೀಯ ಗೌರವ ಸೂಚಕವಾಗಿ, ಅವರನ್ನು ಪ್ರಧಾನಿ ಪ್ಲೆಂಕೋವಿಕ್ ಸ್ವಾಗತಿಸಿದರು.

ಕ್ರೊಯೇಷಿಯಾದ ಪ್ರಧಾನಮಂತ್ರಿಯವರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆಯ ಇಂಗ್ಲಿಷ್ ಅನುವಾದ

June 18th, 09:56 pm

ಐತಿಹಾಸಿಕ ಮತ್ತು ಸುಂದರ ನಗರವಾದ ಜಾಗ್ರೆಬ್‌ನಲ್ಲಿ ನನ್ನನ್ನು ಆತ್ಮೀಯತೆಯ, ಉತ್ಸಾಹ ಭರಿತ ಮತ್ತು ವಾತ್ಸಲ್ಯಭರಿತ ರೀತಿಯಲ್ಲಿ ಸ್ವಾಗತಿಸಿದುದಕ್ಕೆ ನಾನು ಪ್ರಧಾನ ಮಂತ್ರಿ ಮತ್ತು ಕ್ರೊಯೇಷಿಯಾ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

ಕ್ರೊಯೇಷಿಯಾದ ಜಾಗ್ರೆಬ್‌ಗೆ ಪ್ರಧಾನಿ ಆಗಮಿಸಿದರು

June 18th, 05:38 pm

ಪ್ರಧಾನಿ ಮೋದಿ ಕ್ರೊಯೇಷಿಯಾದ ಜಾಗ್ರೆಬ್‌ಗೆ ಆಗಮಿಸಿದರು. ಭಾರತದ ಪ್ರಧಾನಿಯೊಬ್ಬರು ಕ್ರೊಯೇಷಿಯಾಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು.ಪ್ರಧಾನಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಆಂಡ್ರೆಜ್ ಪ್ಲೆಂಕೋವಿಕ್ ಅವರು ಆತ್ಮೀಯವಾಗಿ ಬರಮಾಡಿಕೊಂಡರು.