ದೇಶದಲ್ಲಿ ಸ್ವಾವಲಂಬನೆ ಬಲಗೊಳಿಸುವಲ್ಲಿ ಭಾರತದ ಯುವಶಕ್ತಿ ನೇತೃತ್ವದ ತಂತ್ರಜ್ಞಾನ ನಾವಿನ್ಯತೆಗೆ ಪ್ರಧಾನಮಂತ್ರಿ ಮೆಚ್ಚುಗೆ
June 12th, 10:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಂತ್ರಜ್ಞಾನವನ್ನು ಮುಂದುವರಿಸುವಲ್ಲಿ ಮತ್ತು ದೇಶದ ಸ್ವಾವಲಂಬನೆಯನ್ನು ಮುನ್ನಡೆಸುವಲ್ಲಿ ಭಾರತದ ಯುವ ನಾವಿನ್ಯಕಾರರ ಪ್ರಮುಖ ಪಾತ್ರವನ್ನು ಶ್ಲಾಘಿಸಿದ್ದಾರೆ. ಕಳೆದ 11 ವರ್ಷಗಳಲ್ಲಿ, ಡಿಜಿಟಲ್ ಇಂಡಿಯಾ ಉಪಕ್ರಮವು ನಾವಿನ್ಯತೆಯ ಸಮರ್ಪಕ ಬಳಕೆಯ ಮೂಲಕ ಯುವಜನರನ್ನು ಸಬಲಗೊಳಿಸುತ್ತಾ ಜಾಗತಿಕ ತಂತ್ರಜ್ಞಾನ ಶಕ್ತಿ ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸಿದೆ.