ಯೋಗ ಆಂದೋಲನವನ್ನು ಬಲಪಡಿಸುವ ಆಂಧ್ರಪ್ರದೇಶದ ಯೋಗಾಂಧ್ರ ಉಪಕ್ರಮಕ್ಕೆ ಪ್ರಧಾನಮಂತ್ರಿ ಮೆಚ್ಚುಗೆ

June 22nd, 02:10 pm

ಯೋಗದ ರಾಷ್ಟ್ರವ್ಯಾಪಿ ಆಂದೋಲನವನ್ನು ಮತ್ತಷ್ಟು ಮುನ್ನಡೆಸುವ ಮೂಲಕ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವ ಆಂಧ್ರಪ್ರದೇಶದ ಜನರ ಸ್ಫೂರ್ತಿದಾಯಕ ಬದ್ಧತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ಲಾಘಿಸಿದ್ದಾರೆ.

ಆಂಧ್ರಪ್ರದೇಶದ ಯೋಗಾಂಧ್ರ 2025 ಉಪಕ್ರಮಕ್ಕೆ ಪ್ರಧಾನಮಂತ್ರಿ ಮೆಚ್ಚುಗೆ

June 03rd, 08:28 pm

ಆಂಧ್ರಪ್ರದೇಶದ ಚಿತ್ತೂರು ಬಳಿ ನಡೆದ ಯೋಗಾಂಧ್ರ 2025 ಕಾರ್ಯಕ್ರಮದಲ್ಲಿ ಯೋಗ ಉತ್ಸಾಹಿಗಳ ರೋಮಾಂಚಕ ಭಾಗವಹಿಸುವಿಕೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆ (IDY) 2025ರ ಅಂಗವಾಗಿ ಆಂಧ್ರಪ್ರದೇಶದಲ್ಲಿ ಒಂದು ತಿಂಗಳ ಕಾಲ ನಡೆಯಲಿರುವ ಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಪುಲಿಗುಂಡು ಅವಳಿ ಬೆಟ್ಟಗಳ ನಡುವೆ ಆಯೋಜಿಸಲಾದ ಕಾರ್ಯಕ್ರಮದಲ್ಲಿ 2,000 ಕ್ಕೂ ಹೆಚ್ಚು ಯೋಗ ಉತ್ಸಾಹಿಗಳು ಪಾಲ್ಗೊಂಡಿದ್ದರು.