ಫಿಸಿಯೋಥೆರಪಿ ವೃತ್ತಿಯಲ್ಲಿ ತೊಡಗಿರುವ ಎಲ್ಲರ ಪ್ರಯತ್ನಗಳಿಗೆ ಪ್ರಧಾನಮಂತ್ರಿ ಶ್ಲಾಘನೆ
September 08th, 08:20 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವ ಫಿಸಿಯೋಥೆರಪಿ ದಿನದ ಅಂಗವಾಗಿ ಈ ಚಿಕಿತ್ಸಾ ವೃತ್ತಿಯಲ್ಲಿ ತೊಡಗಿರುವ ಎಲ್ಲರ ಪ್ರಯತ್ನಗಳನ್ನು ಇಂದು ಶ್ಲಾಘಿಸಿದ್ದಾರೆ. ಜನರ, ವಿಶೇಷವಾಗಿ ವೃದ್ಧರ ಯೋಗಕ್ಷೇಮಕ್ಕೆ, ಅವರು ನಡೆದಾಡುವಂತಾಗಲು, ಘನತೆಯಿಂದ ಜೀವಿಸುವಂತಾಗಲು ಮತ್ತು ಅವರಿಗೆ ಉತ್ತಮ ಗುಣಮಟ್ಟದ ಜೀವನವನ್ನು ಖಾತರಿಪಡಿಸಲು ಈ ವೃತ್ತಿಯಲ್ಲಿ ತೊಡಗಿರುವರು ನೀಡುತ್ತಿರುವ ಕೊಡುಗೆ ಶ್ಲಾಘನೀಯ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.