Prime Minister wishes speedy recovery to Begum Khaleda Zia

December 01st, 10:30 pm

The Prime Minister, Shri Narendra Modi has expressed his deep concern about the health of Begum Khaleda Zia, who has contributed to Bangladesh’s public life for many years and wished speedy recovery to her. Shri Modi stated that India stands ready to extend all possible support, in whatever way we can.

Prime Minister greets BSF personnel on their Raising Day

December 01st, 06:18 pm

The Prime Minister, Shri Narendra Modi has greeted the BSF personnel on their Raising Day. Shri Modi stated that the BSF symbolises India’s unwavering resolve and utmost professionalism. They serve in some of the most challenging terrains. Alongside their valour, their humanitarian spirit is also exceptional, Shri Modi said.

ಶ್ರೀ ಎಲ್.ಕೆ. ಅಡ್ವಾಣಿ ಅವರ ಜನ್ಮದಿನ ಅಂಗವಾಗಿ ಭೇಟಿ ನೀಡಿದ ಪ್ರಧಾನಮಂತ್ರಿ

November 08th, 08:23 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಎಲ್.ಕೆ. ಅಡ್ವಾಣಿ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಜನ್ಮದಿನದಂದು ಅವರಿಗೆ ಶುಭಾಶಯ ತಿಳಿಸಿದರು. ಶ್ರೀ ಎಲ್.ಕೆ. ಅಡ್ವಾಣಿ ಅವರು ನಮ್ಮ ರಾಷ್ಟ್ರಕ್ಕೆ ಮಾಡಿದ ಸೇವೆ ಸ್ಮರಣೀಯ. ಅವರ ಕೆಲಸಗಳು ನಮ್ಮೆಲ್ಲರನ್ನು ಬಹಳವಾಗಿ ಪ್ರೇರೇಪಿಸುತ್ತದೆ ಎಂದು ಶ್ರೀ ಮೋದಿ ಹೇಳಿದ್ದಾರೆ.

ಛಠ್ ಮಹಾಪರ್ವದ ಕೊನೆಯ ದಿನದಂದು ಪ್ರಧಾನಮಂತ್ರಿ ಅವರಿಂದ ದೇಶದ ಜನತೆಗೆ ಶುಭಾಶಯ

October 28th, 07:56 am

ಛಠ್ ಪೂಜೆಯ ಕೊನೆಯ ದಿನವಾದ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲಾ ಭಕ್ತರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಎನ್‌.ಎಸ್‌.ಜಿ ಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಎನ್‌.ಎಸ್‌.ಜಿ ಸಿಬ್ಬಂದಿಗೆ ಪ್ರಧಾನಮಂತ್ರಿ ಶುಭಾಶಯ

October 16th, 09:09 pm

ಇಂದು ರಾಷ್ಟ್ರೀಯ ಭದ್ರತಾ ಪಡೆ(NSG) ಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಎನ್‌.ಎಸ್‌.ಜಿ ಸಿಬ್ಬಂದಿಯ ಅಪ್ರತಿಮ ಶೌರ್ಯ ಮತ್ತು ಸಮರ್ಪಣಾ ಮನೋಭಾವವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. “ಭಯೋತ್ಪಾದನೆಯ ಭೀತಿಯಿಂದ ರಾಷ್ಟ್ರವನ್ನು ರಕ್ಷಿಸುವಲ್ಲಿ, ನಮ್ಮ ನಾಗರಿಕರ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಮತ್ತು ರಾಷ್ಟ್ರೀಯ ಆಸ್ತಿಗಳನ್ನು ರಕ್ಷಿಸುವಲ್ಲಿ ಎನ್‌.ಎಸ್‌.ಜಿ ಪ್ರಮುಖ ಪಾತ್ರ ವಹಿಸಿದೆ”, ಎಂದು ಶ್ರೀ ಮೋದಿ ಹೇಳಿದ್ದಾರೆ.

ನವರಾತ್ರಿಯ ಎರಡನೇ ದಿನವಾದ ಇಂದು ಬ್ರಹ್ಮಚಾರಿಣಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಮಂತ್ರಿ

September 23rd, 09:23 am

ನವರಾತ್ರಿಯ ಎರಡನೇ ದಿನವಾದ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬ್ರಹ್ಮಚಾರಿಣಿ ದೇವಿಗೆ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.

ಗುಜರಾತ್‌ನ ಭಾವನಗರದಲ್ಲಿ 'ಸಮುದ್ರ ಸೇ ಸಮೃದ್ಧಿ' ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

September 20th, 11:00 am

ಗುಜರಾತ್‌ನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಸರ್ಬಾನಂದ ಸೋನೋವಾಲ್ ಜಿ, ಸಿ.ಆರ್. ಪಾಟೀಲ್, ಮನ್ಸುಖ್‌ಭಾಯಿ ಮಾಂಡವಿಯಾ, ಶಾಂತನು ಠಾಕೂರ್, ನಿಮುಬೆನ್ ಬಂಭಾನಿಯಾ, ದೇಶಾದ್ಯಂತ 40ಕ್ಕೂ ಹೆಚ್ಚು ಸ್ಥಳಗಳಿಂದ ಈ ಕಾರ್ಯಕ್ರಮಕ್ಕೆ ಸಂಪರ್ಕ ಹೊಂದಿರುವ ಗಣ್ಯರೆ, ಎಲ್ಲಾ ಪ್ರಮುಖ ಬಂದರುಗಳೊಂದಿಗೆ ಸಂಪರ್ಕ ಹೊಂದಿರುವ ವಿವಿಧ ರಾಜ್ಯಗಳ ಸಚಿವರೆ, ಹಿರಿಯ ಅಧಿಕಾರಿಗಳೆ, ಇತರೆ ಗಣ್ಯ ಅತಿಥಿಗಳೆ ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೆ, ನಾನು ನಿಮ್ಮೆಲ್ಲರಿಗೂ ಶುಭಾಶಯಗಳನ್ನು ಕೋರುತ್ತೇನೆ!

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್‌ನ ಭಾವನಗರದಲ್ಲಿ 'ಸಮುದ್ರದಿಂದ ಸಮೃದ್ಧಿ' ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು, 34,200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದರು

September 20th, 10:30 am

ಗುಜರಾತ್‌ನ ಭಾವನಗರದಲ್ಲಿ ಇಂದು 34,200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. 'ಸಮುದ್ರದಿಂದ ಸಮೃದ್ಧಿ' ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಎಲ್ಲಾ ಗಣ್ಯರು ಮತ್ತು ಜನರನ್ನು ಸ್ವಾಗತಿಸಿದರು. ಸೆಪ್ಟೆಂಬರ್ 17 ರಂದು ತಮಗೆ ಕಳುಹಿಸಲಾದ ಹುಟ್ಟುಹಬ್ಬದ ಶುಭಾಶಯಗಳನ್ನು ಸ್ವೀಕರಿಸಿದ ಪ್ರಧಾನಮಂತ್ರಿ, ಜನರಿಂದ ಪಡೆದ ಪ್ರೀತಿಯು ಶಕ್ತಿಯ ದೊಡ್ಡ ಮೂಲವಾಗಿದೆ ಎಂದು ಹೇಳಿದರು, ರಾಷ್ಟ್ರವು ವಿಶ್ವಕರ್ಮ ಜಯಂತಿಯಿಂದ ಗಾಂಧಿ ಜಯಂತಿಯವರೆಗೆ, ಅಂದರೆ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ ಸೇವಾ ಪಖ್ವಾಡವನ್ನು ಆಚರಿಸುತ್ತಿದೆ ಎಂದು ಅವರು ಎತ್ತಿ ತೋರಿಸಿದರು. ಕಳೆದ 2-3 ದಿನಗಳಲ್ಲಿ ಗುಜರಾತ್‌ನಲ್ಲಿ ಹಲವಾರು ಸೇವಾ-ಆಧಾರಿತ ಚಟುವಟಿಕೆಗಳು ನಡೆದಿವೆ ಎಂದು ಅವರು ಹೇಳಿದರು. ನೂರಾರು ಸ್ಥಳಗಳಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ, ಇಲ್ಲಿಯವರೆಗೆ ಒಂದು ಲಕ್ಷ ವ್ಯಕ್ತಿಗಳು ರಕ್ತದಾನ ಮಾಡಿದ್ದಾರೆ ಎಂಬುದರತ್ತ ಪ್ರಧಾನಮಂತ್ರಿ ಗಮನ ಸೆಳೆದರು. ಹಲವಾರು ನಗರಗಳಲ್ಲಿ ಸ್ವಚ್ಛತಾ ಅಭಿಯಾನಗಳನ್ನು ನಡೆಸಲಾಗಿದ್ದು, ಲಕ್ಷಾಂತರ ನಾಗರಿಕರು ಸಕ್ರಿಯವಾಗಿ ಭಾಗವಹಿಸಿದ್ದಾರೆ ಎಂದು ಅವರು ಹೇಳಿದರು. ರಾಜ್ಯಾದ್ಯಂತ 30,000 ಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕರಿಗೆ ಮತ್ತು ವಿಶೇಷವಾಗಿ ಮಹಿಳೆಯರಿಗೆ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ ಎಂದು ಶ್ರೀ ಮೋದಿ ಮಾಹಿತಿ ನೀಡಿದರು. ದೇಶಾದ್ಯಂತ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರಿಗೂ ಅವರು ತಮ್ಮ ಮೆಚ್ಚುಗೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಹುಟ್ಟುಹಬ್ಬದ ನಿಮಿತ್ತ ಹರಿದು ಬಂದ ಅಸಂಖ್ಯಾತ ಶುಭಾಶಯಗಳು ಮತ್ತು ಆಶೀರ್ವಾದಗಳಿಗಾಗಿ ಪ್ರಧಾನಮಂತ್ರಿ ಅವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ

September 17th, 08:27 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ 75ನೇ ಹುಟ್ಟುಹಬ್ಬದಂದು ದೇಶಾದ್ಯಂತ ಮತ್ತು ವಿದೇಶಗಳಿಂದ ಹರಿದು ಬಂದಿರುವ ಅಸಂಖ್ಯಾತ ಸಂಖ್ಯೆಯ ಶುಭಾಶಯಗಳು, ಆಶೀರ್ವಾದಗಳು ಮತ್ತು ಪ್ರೀತಿಯ ಸಂದೇಶಗಳಿಗಾಗಿ ಸಂಪೂರ್ಣ ಜನಶಕ್ತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ತಮ್ಮ ಈ ಪ್ರೀತಿ ನನ್ನನ್ನು ಇನ್ನೂ ಬಲಪಡಿಸುತ್ತದೆ ಮತ್ತು ಪ್ರೇರೇಪಿಸುತ್ತದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

PM Modi expresses gratitude to world leaders for birthday wishes

September 17th, 03:03 pm

The Prime Minister Shri Narendra Modi expressed his gratitude to the world leaders for greetings on his 75th birthday, today.

ಗುರು ಪೂರ್ಣಿಮೆಯ ದಿನದಂದು ಎಲ್ಲರಿಗೂ ಶುಭಾಶಯ ಕೋರಿದ ಪ್ರಧಾನಮಂತ್ರಿ

July 10th, 09:04 am

ಗುರು ಪೂರ್ಣಿಮೆಯ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಎಲ್ಲರಿಗೂ ಶುಭಾಶಯ ತಿಳಿಸಿದ್ದಾರೆ.

ವೈದ್ಯರ ದಿನವಾದ ಇಂದು ಪ್ರಧಾನಮಂತ್ರಿಯವರು ವೈದ್ಯರಿಗೆ ಶುಭ ಹಾರೈಸಿದ್ದಾರೆ

July 01st, 09:37 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ವೈದ್ಯರ ದಿನವಾದ ಇಂದು ಎಲ್ಲಾ ವೈದ್ಯರಿಗೆ ಶುಭಾಶಯ ಕೋರಿದ್ದಾರೆ. ನಮ್ಮ ವೈದ್ಯರು ತಮ್ಮ ಕೌಶಲ್ಯ ಮತ್ತು ಶ್ರದ್ಧೆಯಿಂದ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅವರ ಕರುಣಾ ಮನೋಭಾವವೂ ಅಷ್ಟೇ ಗಮನಾರ್ಹವಾಗಿದೆ ಎಂದು ಶ್ರೀ ಮೋದಿಯವರು ಹೇಳಿದ್ದಾರೆ.

ಸಿಕ್ಕಿಂ ರಾಜ್ಯದ 50ನೇ ರಾಜ್ಯೋತ್ಸವದ ಪ್ರಯುಕ್ತ‌ ಸಿಕ್ಕಿಂ ಜನತೆಗೆ ಪ್ರಧಾನಮಂತ್ರಿ ಶುಭಾಶಯ

May 16th, 10:13 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಿಕ್ಕಿಂ ರಾಜ್ಯತ್ವ ದಿನದಂದು ಜನತೆಗೆ ಶುಭಾಶಯ ಕೋರಿದ್ದಾರೆ. ಈ ವರ್ಷ, ಸಿಕ್ಕಿಂ ರಾಜ್ಯತ್ವದ 50ನೇ ವಾರ್ಷಿಕೋತ್ಸವವನ್ನು ನಾವು ಆಚರಿಸುತ್ತಿರುವುದರಿಂದ ಈ ಸಂದರ್ಭವು ಇನ್ನಷ್ಟು ವಿಶೇಷವಾಗಿದೆ! ಸಿಕ್ಕಿಂ ರಾಜ್ಯ ಪ್ರಶಾಂತ ಸೌಂದರ್ಯ, ಶ್ರೀಮಂತ ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ಶ್ರಮಶೀಲ ಜನರಿಂದ ಕೂಡಿದೆ ಎಂದು ಪ್ರಧಾನಮಂತ್ರಿ ಮೋದಿ ಹೇಳಿದ್ದಾರೆ.

ಶ್ರೀ ಎಲ್ ಕೆ ಅಡ್ವಾಣಿ ಅವರ ಜನ್ಮದಿನಕ್ಕೆ ಪ್ರಧಾನಮಂತ್ರಿ ಶುಭಾಶಯ

November 08th, 08:50 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ಎಲ್ ಕೆ ಅಡ್ವಾಣಿ ಅವರ ಜನ್ಮದಿನದಂದು ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. ಭಾರತದ ಅಭಿವೃದ್ಧಿಯನ್ನು ಮತ್ತಷ್ಟು ಹೆಚ್ಚಿಸಲು ತಮ್ಮನ್ನು ಸಮರ್ಪಿಸಿಕೊಂಡಿರುವ ಶ್ರೀ ಎಲ್ ಕೆ ಅಡ್ವಾಣಿ ಅವರು ದೇಶದ ಅತ್ಯಂತ ಮೆಚ್ಚಿನ ರಾಜನೀತಿಜ್ಞರಲ್ಲಿ ಒಬ್ಬರು ಎಂದು ಪ್ರಧಾನಮಂತ್ರಿಯವರು ಬಣ್ಣಿಸಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಒಮರ್ ಅಬ್ದುಲ್ಲಾ ಅವರನ್ನು ಅಭಿನಂದಿಸಿದ್ದಾರೆ

October 16th, 01:58 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಒಮರ್ ಅಬ್ದುಲ್ಲಾ ಅವರನ್ನು ಅಭಿನಂದಿಸಿದ್ದಾರೆ.

ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿದ ಗಾಯಕ ಡಾ. ಭರತ್ ಬಲವಳ್ಳಿ ಮತ್ತು ಪತ್ರಕರ್ತ ಅಭಿಜಿತ್ ಪವಾರ್

October 14th, 10:50 pm

ಖ್ಯಾತ ಗಾಯಕ ಮತ್ತು ಸಂಗೀತ ಸಂಯೋಜಕರಾದ ಶ್ರೀ ಡಾ. ಭರತ್ ಬಲವಳ್ಳಿ ಮತ್ತು ಸಕಾಲ ಮೀಡಿಯಾದ ಪತ್ರಕರ್ತರಾದ ಶ್ರೀ ಅಭಿಜಿತ್ ಪವಾರ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ನವರಾತ್ರಿಯ ಒಂಬತ್ತನೇ ದಿನವಾದ ಇಂದು ಸಿದ್ಧಿಧಾತ್ರಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಮಂತ್ರಿ

October 11th, 08:29 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನವರಾತ್ರಿಯ ಒಂಬತ್ತನೇ ದಿನವಾದ ಇಂದು ಸಿದ್ಧಿಧಾತ್ರಿ ದೇವಿಗೆ ಪ್ರಾರ್ಥನೆ ಸಲ್ಲಿಸಿ, ದೇವಿಯ ಆಶೀರ್ವಾದ ಪಡೆದರು.

ನವರಾತ್ರಿಯ ಎಂಟ‌ನೇ ದಿನದಂದು‌ ಪ್ರಧಾನಮಂತ್ರಿಗಳಿಂದ ದೇವಿ ಮಹಾಗೌರಿಯ ಪ್ರಾರ್ಥನೆ

October 10th, 07:35 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವರಾತ್ರಿಯ ಎಂಟನೇ ದಿನದಂದು ದೇವಿ ಮಹಾಗೌರಿಯನ್ನು ಪ್ರಾರ್ಥಿಸಿದ್ದಾರೆ.

ನವರಾತ್ರಿಯ ಆರನೇ ದಿನದಂದು ಕಾತ್ಯಾಯನಿ ದೇವಿಗೆ ಪ್ರಧಾನಮಂತ್ರಿ ಅವರು ಪ್ರಾರ್ಥಿಸಿದರು

October 08th, 09:07 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವರಾತ್ರಿಯ ಆರನೇ ದಿನದಂದು ಕಾತ್ಯಾಯನಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ನವರಾತ್ರಿಯ ಐದನೇ ದಿನವಾದ ಇಂದು ಸ್ಕಂದಮಾತಾ ದೇವಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಮಂತ್ರಿ

October 07th, 08:37 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನವರಾತ್ರಿಯ ಐದನೇ ದಿನವಾದ ಇಂದು ಸ್ಕಂದಮಾತಾ ದೇವಿಗೆ ಪ್ರಾರ್ಥನೆ ಸಲ್ಲಿಸಿದರು.