ನವದೆಹಲಿಯಲ್ಲಿ ನಡೆದ 2ನೇ ವಿಶ್ವ ಆರೋಗ್ಯ ಸಂಘಟನೆ(ಡಬ್ಲ್ಯು.ಹೆಚ್.ಒ)ಯ ಸಾಂಪ್ರದಾಯಿಕ ಔಷಧದ ಜಾಗತಿಕ ಶೃಂಗಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
December 19th, 08:11 pm
ವಿಶ್ವ ಆರೋಗ್ಯ ಸಂಘಟನೆ(ಡಬ್ಲ್ಯು.ಹೆಚ್.ಒ)ಯ ಮಹಾನಿರ್ದೇಶಕರಾದ ನಮ್ಮ ತುಳಸಿ ಭಾಯಿ ಡಾ. ಟೆಡ್ರೊಸ್, ಕೇಂದ್ರ ಆರೋಗ್ಯ ಸಚಿವರಾದ, ನನ್ನ ಸಹೋದ್ಯೋಗಿ ಜೆ. ಪಿ. ನಡ್ಡಾ ಜಿ, ಆಯುಷ್ ಖಾತೆ ರಾಜ್ಯ ಸಚಿವರಾದ ಪ್ರತಾಪ್‌ರಾವ್ ಜಾಧವ್ ಜಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಇತರೆ ದೇಶಗಳ ಸಚಿವರೆ, ವಿವಿಧ ರಾಷ್ಟ್ರಗಳ ರಾಯಭಾರಿಗಳೆ, ಎಲ್ಲಾ ಗಣ್ಯ ಪ್ರತಿನಿಧಿಗಳೆ, ಸಾಂಪ್ರದಾಯಿಕ ಔಷಧ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಗೌರವಾನ್ವಿತ ತಜ್ಞರೆ, ಮಹಿಳೆಯರೆ ಮತ್ತು ಮಹನೀಯರೆ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎರಡನೇ ಡಬ್ಲ್ಯು ಎಚ್ ಒ ಜಾಗತಿಕ ಸಾಂಪ್ರದಾಯಿಕ ವೈದ್ಯ ಪದ್ಧತಿ ಶೃಂಗಸಭೆಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು
December 19th, 07:07 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ ಮಂಟಪದಲ್ಲಿ ನಡೆದ ಎರಡನೇ ಡಬ್ಲ್ಯು ಎಚ್ ಒ ಜಾಗತಿಕ ಸಾಂಪ್ರದಾಯಿಕ ವೈದ್ಯ ಪದ್ಧತಿ ಶೃಂಗಸಭೆಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಕಳೆದ ಮೂರು ದಿನಗಳಲ್ಲಿ ಸಾಂಪ್ರದಾಯಿಕ ವೈದ್ಯಕೀಯ ಕ್ಷೇತ್ರದಲ್ಲಿ ವಿಶ್ವದಾದ್ಯಂತದ ತಜ್ಞರು ಗಂಭೀರ ಮತ್ತು ಅರ್ಥಪೂರ್ಣ ಚರ್ಚೆಗಳಲ್ಲಿ ತೊಡಗಿದ್ದಾರೆ ಎಂದು ಎತ್ತಿ ತೋರಿಸಿದರು. ಈ ಉದ್ದೇಶಕ್ಕಾಗಿ ಭಾರತವು ಒಂದು ಬಲಿಷ್ಠ ವೇದಿಕೆಯಾಗಿ ಸೇವೆ ಸಲ್ಲಿಸುತ್ತಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು ಮತ್ತು ಈ ಪ್ರಕ್ರಿಯೆಯಲ್ಲಿ ಡಬ್ಲ್ಯು ಎಚ್ ಒ ದ ಸಕ್ರಿಯ ಪಾತ್ರವನ್ನು ಗಮನಿಸಿದರು. ಶೃಂಗಸಭೆಯ ಯಶಸ್ವಿ ಆಯೋಜನೆಗಾಗಿ ಅವರು ಡಬ್ಲ್ಯು ಎಚ್ ಒ , ಭಾರತ ಸರ್ಕಾರದ ಆಯುಷ್ ಸಚಿವಾಲಯ ಮತ್ತು ಉಪಸ್ಥಿತರಿದ್ದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.ಸಾಂಪ್ರದಾಯಿಕ ಔಷಧದ ಕುರಿತಾದ ಎರಡನೇ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಶೃಂಗಸಭೆಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ ಮಾಡಲಿದ್ದಾರೆ
December 18th, 04:21 pm
ಡಿಸೆಂಬರ್ 19, 2025 ರಂದು ಸಂಜೆ 4:30 ಕ್ಕೆ ನವದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿರುವ ಎರಡನೇ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಾಂಪ್ರದಾಯಿಕ ಔಷಧ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮವು ಜಾಗತಿಕ, ವಿಜ್ಞಾನ ಆಧಾರಿತ ಮತ್ತು ಜನ-ಕೇಂದ್ರಿತ ಸಾಂಪ್ರದಾಯಿಕ ಔಷಧ ಕಾರ್ಯಸೂಚಿಯನ್ನು ರೂಪಿಸುವಲ್ಲಿ ಭಾರತದ ಬೆಳೆಯುತ್ತಿರುವ ನಾಯಕತ್ವ ಮತ್ತು ಪ್ರವರ್ತಕ ಉಪಕ್ರಮಗಳನ್ನು ಪ್ರದರ್ಶಿಸುತ್ತದೆ.